ETV Bharat / science-and-technology

ಕಾಲರಾ ಅಪಾಯದಲ್ಲಿ ವಿಶ್ವದ 100 ಕೋಟಿ ಜನ: ವಿಶ್ವಸಂಸ್ಥೆ ಎಚ್ಚರಿಕೆ - ಕಾಲರಾ ವಿನಾಶಕಾರಿ ಪುನರಾಗಮನ

ವಿಶ್ವಾದ್ಯಂತ ಕಾಲರಾ ಮತ್ತೆ ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ತಿಳಿಸಿದೆ.

100 cr people, children worldwide at risk of cholera: UN

author img

By

Published : May 21, 2023, 2:25 PM IST

ನವದೆಹಲಿ : ವಿಶ್ವದ 43 ದೇಶಗಳಲ್ಲಿನ ಸುಮಾರು 100 ಕೋಟಿ ಜನರು, ವಿಶೇಷವಾಗಿ ಮಕ್ಕಳು ಕಾಲರಾ ಸೋಂಕು ತಗಲುವ ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ಹೇಳಿದೆ. ವರ್ಷಗಳ ಕಾಲ ನಿರಂತರ ಇಳಿಕೆಯ ನಂತರ ಕಾಲರಾ ವಿನಾಶಕಾರಿ ಪುನರಾಗಮನ ಮಾಡುತ್ತಿದೆ ಮತ್ತು ವಿಶ್ವದ ಅತ್ಯಂತ ದುರ್ಬಲ ಸಮುದಾಯಗಳಿಗೆ ಇದರ ಅಪಾಯ ತೀವ್ರವಾಗಿರಲಿದೆ ಎಂದು ವರದಿ ತೋರಿಸಿದೆ. ಈ ವಿಷಯದಲ್ಲಿ ಐದು ವರ್ಷದೊಳಗಿನ ಮಕ್ಕಳನ್ನು ವಿಶೇಷವಾಗಿ ದುರ್ಬಲ ವರ್ಗದವರೆಂದು ವರ್ಗೀಕರಿಸಲಾಗಿದೆ. ಹೆಚ್ಚಿನ ದೇಶಗಳಲ್ಲಿ ಇತ್ತೀಚೆಗೆ ಕಾಲರಾ ವ್ಯಾಪಕವಾಗುತ್ತಿದೆ. ಕಾಲರಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ರೋಗಿಗಳ ಪರಿಸ್ಥಿತಿಯು 10 ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚು ಗಂಭೀರವಾಗಲಿದೆ. ಕಾಲರಾದ ಅಸಾಧಾರಣವಾದ ಹೆಚ್ಚಿನ ಮರಣದ ಅನುಪಾತವು ಸಹ ಆತಂಕಕಾರಿಯಾಗಿದೆ.

ಕಾಲರಾ ಸಾಂಕ್ರಾಮಿಕವು ನಮ್ಮ ಮುಂದೆಯೇ ಬಡವರನ್ನು ಕೊಲ್ಲುತ್ತಿದೆ ಎಂದು ಯುನಿಸೆಫ್‌ನ ಸಾರ್ವಜನಿಕ ಆರೋಗ್ಯ ತುರ್ತು ಘಟಕದ ಮುಖ್ಯಸ್ಥ ಜೆರೋಮ್ ಪ್ಫಾಫ್‌ಮನ್ ಜಾಂಬ್ರುನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಮೇ ತಿಂಗಳವರೆಗೆ 15 ದೇಶಗಳಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿವೆ. "ಆದಾಗ್ಯೂ ಈ ವರ್ಷದ ಮೇ ಮಧ್ಯದ ವೇಳೆಗೆ ಈಗಾಗಲೇ 24 ದೇಶಗಳಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿವೆ ಮತ್ತು ಬದಲಾಗುತ್ತಿರುವ ಹವಾಮಾನದ ಕಾರಣದಿಂದ ಕಾಲರಾ ಪ್ರಕರಣಗಳು ಇನ್ನೂ ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಜಾಗತಿಕ ಕಾಲರಾ ನಿರ್ವಹಣೆಗಾಗಿ WHO ದ ವಿಭಾಗ ವ್ಯವಸ್ಥಾಪಕ ಹೆನ್ರಿ ಗ್ರೇ ಹೇಳಿದರು. "ಹಿಂದಿನ ದಶಕಗಳಲ್ಲಿ ರೋಗ ನಿಯಂತ್ರಣದಲ್ಲಿ ಸಾಧಿಸಿದ ಪ್ರಗತಿಗಳ ಹೊರತಾಗಿಯೂ ನಾವು ಮತ್ತೆ ಹಿಂದಕ್ಕೆ ಹೋಗುವ ಅಪಾಯವಿದೆ" ಎಂದು ಅವರು ತಿಳಿಸಿದರು.

ಹವಾಮಾನ ಬದಲಾವಣೆಯ ಮಾರಕ ಪರಿಣಾಮಗಳು, ನೀರು, ನೈರ್ಮಲ್ಯ ಮತ್ತು ನೈರ್ಮಲ್ಯ ಸೇವೆಗಳಲ್ಲಿ ಕಡಿಮೆ ಹೂಡಿಕೆ ಮತ್ತು ಕೆಲ ಸಂದರ್ಭಗಳಲ್ಲಿ ಸಶಸ್ತ್ರ ಸಂಘರ್ಷಗಳು ರೋಗದ ಹರಡುವಿಕೆಗೆ ಕಾರಣವಾಗಿದೆ ಎಂದು ವರದಿ ಹೇಳಿದೆ. ಕಾಲರಾದಿಂದ ರಕ್ಷಿಸಲು ಲಸಿಕೆಗಳು ಅಸ್ತಿತ್ವದಲ್ಲಿದ್ದರೂ ಹೆಚ್ಚುತ್ತಿರುವ ಬೇಡಿಕೆಯ ಮುಂದೆ ಪೂರೈಕೆ ಸಾಕಾಗುತ್ತಿಲ್ಲ. ಡಬ್ಲ್ಯೂಎಚ್​ಓ ಪ್ರಕಾರ ಜಾಗತಿಕವಾಗಿ 18 ಮಿಲಿಯನ್ ಡೋಸ್ ಲಸಿಕೆಗಳನ್ನು ಪೂರೈಸುವಂತೆ ವಿನಂತಿಸಲಾಗಿದೆ. ಆದರೆ ಸದ್ಯ ಕೇವಲ ಎಂಟು ಮಿಲಿಯನ್ ಲಸಿಕೆಗಳು ಮಾತ್ರ ಲಭ್ಯವಿವೆ. ಆದರೆ ಹಾಗಂತ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುವುದು ಕಾಲರಾ ಸಮಸ್ಯೆಗೆ ರಾತ್ರೋರಾತ್ರಿ ಪರಿಹಾರವಲ್ಲ ಎಂದು ಗ್ರೇ ಹೇಳಿದರು.

"2025 ರ ವೇಳೆಗೆ ಡೋಸ್‌ಗಳ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಹೊಂದಲಾಗಿದೆ. ಆದರೆ ಪ್ರಸ್ತುತ ಪ್ರವೃತ್ತಿ ಮುಂದುವರಿದರೆ ನಮಗೆ ಲಸಿಕೆಗಳು ಸಾಕಾಗುವುದಿಲ್ಲ. ಲಸಿಕೆ ಒಂದು ಸಾಧನವಾಗಿದೆ, ಆದರೆ ಒಟ್ಟಾರೆ ಪರಿಹಾರವಲ್ಲ. ನೀರಿನ ನೈರ್ಮಲ್ಯವೇ ಇದಕ್ಕೆ ದೀರ್ಘಾವಧಿಯ ಪರಿಹಾರವಾಗಿದೆ ಎಂದು ಅವರು ಹೇಳಿದರು. ಡಬ್ಲ್ಯೂಎಚ್​ಓ ದ ಎಚ್ಚರಿಕೆಯನ್ನು ಯುನಿಸೆಫ್ ಕೂಡ ಪ್ರತಿಧ್ವನಿಸಿದೆ. "ದೀರ್ಘಾವಧಿಯ ಪರಿಹಾರಗಳು ಮಾತ್ರವಲ್ಲದೆ ಶುದ್ಧ ನೀರು, ನೈರ್ಮಲ್ಯಗಳನ್ನು ಖಚಿತಪಡಿಸಿಕೊಳ್ಳಲು ನೀರಿನ ವ್ಯವಸ್ಥೆಯಲ್ಲಿ ತಕ್ಷಣದ ಹೂಡಿಕೆ ಮಾಡಬೇಕಿದೆ" ಎಂದು ಜಾಂಬ್ರೂನಿ ಹೇಳಿದರು.

ಇದನ್ನೂ ಓದಿ : IPSN : ಸಾಂಕ್ರಾಮಿಕ ರೋಗ ಪತ್ತೆ, ತಡೆಗೆ WHO ಹೊಸ ಜಾಗತಿಕ ಜಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.