ETV Bharat / science-and-technology

ಇನ್​ಸ್ಟಾಗ್ರಾಮ್​ನಲ್ಲಿ 10 ನಿಮಿಷದ ರೀಲ್ಸ್​: ಶೀಘ್ರದಲ್ಲೇ ಬರಲಿದೆ ಹೊಸ ವೈಶಿಷ್ಟ್ಯ!

ಮೆಟಾ ಒಡೆತನದ ಇನ್​ಸ್ಟಾಗ್ರಾಮ್​ ಈಗ ತನ್ನ ರೀಲ್ಸ್​ ಅವಧಿಯನ್ನು 10 ನಿಮಿಷಗಳಿಗೆ ಹೆಚ್ಚಿಸಲಿದೆ ಎಂದು ವರದಿಯಾಗಿದೆ.

Instagram may bring 10-min long Reels
Instagram may bring 10-min long Reels
author img

By ETV Bharat Karnataka Team

Published : Aug 31, 2023, 12:33 PM IST

ಸ್ಯಾನ್ ಫ್ರಾನ್ಸಿಸ್ಕೋ : ರೀಲ್ಸ್​ ಎಂಬುದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಆಗಿದೆ. ರೀಲ್ಸ್​ ನೋಡುವವರ ಸಂಖ್ಯೆ ಹೆಚ್ಚಾದಂತೆ ರೀಲ್ಸ್​​ ಮಾಡುವವರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಸದ್ಯ ವಿಶ್ವದಲ್ಲಿ ರೀಲ್ಸ್​​ ವಿಷಯದಲ್ಲಿ ಮೆಟಾ ಒಡೆತನದ ಇನ್​ಸ್ಟಾಗ್ರಾಮ್ ಕೂಡ ಜನಪ್ರಿಯ ಪ್ಲಾಟ್​​ಫಾರ್ಮ್​ಗಳಲ್ಲಿ ಒಂದಾಗಿದೆ. ರೀಲ್ಸ್​ನ ಹೆಚ್ಚುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಈಗ ಇನ್​ಸ್ಟಾಗ್ರಾಮ್ ತನ್ನ ರೀಲ್ಸ್​ ಅವಧಿಯನ್ನು 10 ನಿಮಿಷಕ್ಕೆ ಹೆಚ್ಚಿಸಲು ಮುಂದಾಗಿದೆ. ಇದರಿಂದ ಬಳಕೆದಾರರು ಇನ್ನು ಮುಂದೆ 10 ನಿಮಿಷಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ.

ಮೊಬೈಲ್ ಡೆವಲಪರ್ ಮತ್ತು ಲೀಕರ್ ಅಲೆಸ್ಸಾಂಡ್ರೊ ಪಲುಝಿ ಎಂಬುವರು ಬುಧವಾರ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇನ್​ಸ್ಟಾ ದ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ. ಎರಡು ಪಕ್ಕದ ರೀಲ್ಸ್ ಪುಟಗಳ ಸ್ಕ್ರೀನ್​ ಶಾಟ್​ಗಳನ್ನು ಅವರು ಶೇರ್ ಮಾಡಿದ್ದಾರೆ. ಒಂದು ಮೂರು ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಮತ್ತು ಇನ್ನೊಂದು 10 ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಎಂದು ಅವರು ಪೋಸ್ಟ್ ಮಾಡಿದ್ದಾರೆ.

"#Instagram 10 ನಿಮಿಷಗಳವರೆಗೆ #Reels ರಚಿಸುವ ವೈಶಿಷ್ಟ್ಯವನ್ನು ತಯಾರಿಸುತ್ತಿದೆ" ಎಂದು ಅಲೆಸ್ಸಾಂಡ್ರೊ ಪಲುಝಿ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಆದಾಗ್ಯೂ, ರೀಲ್ಸ್ ಅವಧಿಯನ್ನು ವಿಸ್ತರಿಸುವ ಯೋಜನೆಯ ಬಗ್ಗೆ ಮೆಟಾ ಇನ್ನೂ ದೃಢಪಡಿಸಿಲ್ಲ ಎಂದು ವರದಿ ತಿಳಿಸಿದೆ. ರೀಲ್ಸ್​ ಅವಧಿಯನ್ನು 10 ನಿಮಿಷಕ್ಕೆ ಹೆಚ್ಚಿಸುವ ಮೂಲಕ ಇನ್​ಸ್ಟಾ ಯೂಟ್ಯೂಬ್​ಗೆ ಪೈಪೋಟಿ ನೀಡಲಿದೆ. ಜಗತ್ತಿನ ಮತ್ತೊಂದು ರೀಲ್ಸ್​​ ಪ್ಲಾಟ್​​ಫಾರ್ಮ್​ ಟಿಕ್​ಟಾಕ್​ ಈಗಾಗಲೇ ಹೆಚ್ಚಿನ ಅವಧಿಯ ರೀಲ್ಸ್​ ವೈಶಿಷ್ಟ್ಯ ಹೊಂದಿರುವುದು ಗಮನಾರ್ಹ.

ಹೊಸ group mention ವೈಶಿಷ್ಟ್ಯ: ಏತನ್ಮಧ್ಯೆ, ಇನ್​ಸ್ಟಾಗ್ರಾಮ್ ಹೊಸ group mention ವೈಶಿಷ್ಟ್ಯ ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ಒಂದೇ mention ಬಳಸಿಕೊಂಡು ಸ್ಟೋರಿಯಲ್ಲಿ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಟ್ಯಾಗ್ ಮಾಡಲು ಅನುವು ಮಾಡಿಕೊಡುತ್ತದೆ.

ಇನ್​ಸ್ಟಾಗ್ರಾಮ್​ನಲ್ಲಿ ಪ್ರಸ್ತುತ 90 ಸೆಕೆಂಡುಗಳ ಅವಧಿಯ ರೀಲ್ಸ್​ಗಳನ್ನು ಅಪ್ಲೋಡ್​ ಮಾಡಬಹುದಾಗಿದೆ. ತಾವು ಚಿತ್ರೀಕರಿಸಿದ ವಿಡಿಯೋಗಳನ್ನು ಬಳಕೆದಾರರು ಎಡಿಟ್​ ಮಾಡಬಹುದು, ಸೌಂಡ್​ ಡಬ್ಬಿಂಗ್ ಮಾಡಬಹುದು ಅಥವಾ ಅಪ್ಲೋಡ್ ಮಾಡುವ ಮುನ್ನ ಅದಕ್ಕೆ ಸ್ಪೆಷಲ್ ಎಫೆಕ್ಟ್ಸ್ ಸೇರಿಸಬಹುದು. ರೀಲ್ಸ್​ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಕ್ರಿಯೇಟಿವ್ ಕಂಟೆಂಟ್​​ ಅನ್ನು ಜಗತ್ತಿಗೆ ತೋರಿಸಬಹುದು, ತಮ್ಮ ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಬಹುದು, ಬ್ರ್ಯಾಂಡ್​​ಗಳನ್ನು ಮಾರ್ಕೆಟಿಂಗ್ ಮಾಡಬಹುದು ಅಥವಾ ಸುಮ್ಮನೆ ತಮಾಷೆಗಾಗಿ ವಿಡಿಯೋಗಳನ್ನು ಅಪ್ಲೋಡ್​ ಮಾಡಬಹುದು.

ಇನ್​ಸ್ಟಾಗ್ರಾಮ್ ಬಳಕೆದಾರರು ದಿನಕ್ಕೆ 17.6 ಮಿಲಿಯನ್ ಗಂಟೆಗಳ ಕಾಲ ರೀಲ್ಸ್​​ ವೀಕ್ಷಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಜನರು ದಿನಕ್ಕೆ ಟಿಕ್​ಟಾಕ್​ ವಿಡಿಯೋಗಳನ್ನು ವೀಕ್ಷಿಸಲು ಕಳೆಯುವ 97.8 ಮಿಲಿಯನ್ ಗಂಟೆಗಳಿಗಿಂತ ಇದು 10 ಪಟ್ಟು ಕಡಿಮೆಯಾದರೂ, ಇನ್​ಸ್ಟಾಗ್ರಾಮ್​​ನಲ್ಲಿ ರೀಲ್ಸ್​​ ಹೊರತುಪಡಿಸಿ ಸಂವಹನ ನಡೆಸಲು ಬಳಕೆದಾರರಿಗೆ ಇತರ ವಿಷಯ ಸ್ವರೂಪಗಳೂ ಲಭ್ಯವಿವೆ ಎಂಬುದು ಗಮನಾರ್ಹ.

ಇದನ್ನೂ ಓದಿ : 3 ತಿಂಗಳಲ್ಲಿ 19 ಲಕ್ಷ ವಿಡಿಯೋ ಡಿಲೀಟ್ ಮಾಡಿದ ಯೂಟ್ಯೂಬ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.