ETV Bharat / opinion

ಈ ಬಾರಿಯೂ ಪ್ರತಿಪಕ್ಷಗಳ ನಾಯಕರಿಗೆ ಪದ್ಮದ ಗರಿ.. ಈವರೆಗೆ ಮೋದಿ ಸರ್ಕಾರ ಯಾವೆಲ್ಲ ಲೀಡರ್​​ಗಳಿಗೆ ಪ್ರಶಸ್ತಿ ಕೊಟ್ಟಿದೆ?

author img

By

Published : Jan 26, 2023, 8:33 PM IST

ಇದೇ ವೇಳೆ ಈ ಹಿಂದೆ ಕಾಂಗ್ರೆಸ್​​ನಲ್ಲಿದ್ದು ವಿದೇಶಾಂಗ ಸಚಿವರಾಗಿದ್ದ ಹಾಗೂ ಈಗ ಬಿಜೆಪಿಯಲ್ಲಿರುವ ಎಸ್​ ಎಂ ಕೃಷ್ಣ ಅವರಿಗೂ ಪದ್ಮವಿಭೂಷಣ ನೀಡಿ ಮೋದಿ ಸರ್ಕಾರ ಸಮ್ಮಾನ ಮಾಡಿದೆ.

Mulayam Singh Yadav the latest in long line of Opp leaders
ಈ ಬಾರಿಯೂ ಪ್ರತಿಪಕ್ಷಗಳ ನಾಯಕರಿಗೆ ಪದ್ಮದ ಗರಿ.. ಈವರೆಗೆ ಮೋದಿ ಸರ್ಕಾರ ಯಾವೆಲ್ಲ ಲೀಡರ್​​ಗಳಿಗೆ ಪ್ರಶಸ್ತಿ ಕೊಟ್ಟಿದೆ?

ನವದೆಹಲಿ: 74ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಈ ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಪ್ರಕಟಿಸಲಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ವಿರೋಧ ಪಕ್ಷದ ನಾಯಕರಿಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸುವ ತನ್ನ ನೀತಿಯನ್ನು ಮುಂದುವರಿಸಿದೆ. ಇದೀಗ ಈ ವರ್ಷವೂ ಹಲವು ಹಿರಿಯ ರಾಜಕೀಯ ನಾಯಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಆ ಸಾಲಿನಲ್ಲಿ ಈಗ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸಹ ಸೇರ್ಪಡೆ ಆಗಿದ್ದಾರೆ. 'ನೇತಾಜಿ' ಎಂಬ ಉಪನಾಮದಿಂದ ಕರೆಯಲ್ಪಡುವ ಯುಪಿ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ರಕ್ಷಣಾ ಸಚಿವರೂ ಆಗಿದ್ದ ಮುಲಾಯಂ ಸಿಂಗ್​ ಅವರಿಗೆ ಈ ವರ್ಷ, ಭಾರತ ರತ್ನದ ನಂತರ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ಮರಣೋತ್ತರವಾಗಿ ಘೋಷಿಸಿ ಗೌರವ ನೀಡಿದೆ.

ಕಳೆದ ಬಾರಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ಮಾಜಿ ಕಾಂಗ್ರೆಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಮತ್ತು ಅಸ್ಸೋಂನ ಮಾಜಿ ಸಿಎಂ ದಿವಂಗತ ತರುಣ್ ಗೊಗೊಯ್ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದರೆ, ಕಳೆದ ವರ್ಷ ಸಿಪಿಎಂ ಮುಖಂಡ ಭಟ್ಟಾಚಾರ್ಯ ಅವರ ಕುಟುಂಬ ಸದಸ್ಯರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು.

ಪ್ರತಿಪಕ್ಷದ ಹಲವು ಗಣ್ಯರಿಗೆ ಪದ್ಮಗೌರವ: ಅಸ್ಸೋಂನ ಮಾಜಿ ಸಿಎಂ ಗೊಗೊಯ್ ಅವರಿಗೆ 2021 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದ್ದರೆ, ಮಾಜಿ ರಾಷ್ಟ್ರಪತಿ ಮತ್ತು ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಅವರಿಗೆ 2020 ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಕಾಂಗ್ರೆಸ್ ತೊರೆದು ಪ್ರತ್ಯೇಕ ಪಕ್ಷ ಕಟ್ಟಿರುವ ಗುಲಾಂ ನಬಿ ಆಜಾದ್ ಅವರಿಗೆ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಲೋಕಸಭೆಯ ಮಾಜಿ ಸ್ಪೀಕರ್ ಪಿಎ ಸಂಗ್ಮಾ (ಮರಣೋತ್ತರ) ಅವರಿಗೂ 2017 ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಡಲಾಗಿದೆ.

ನಾಗಾಲ್ಯಾಂಡ್ ಮಾಜಿ ಸಿಎಂ ಎಸ್‌ಸಿ ಜಮೀರ್ ಅವರಿಗೆ 2020 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ನಾಗಾಲ್ಯಾಂಡ್ ಕಾಂಗ್ರೆಸ್ ನಾಯಕ ತೋಖೆಹೋ ಸೆಮಾ ಅವರು 2016 ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವನ್ನು ಪಡೆದುಕೊಂಡಿದ್ದಾರೆ. ನರೇಂದ್ರ ಮೋದಿ ಸರ್ಕಾರದಿಂದ ಪದ್ಮ ಪ್ರಶಸ್ತಿಗಳನ್ನು ಪಡೆದ ವಿರೋಧ ಪಕ್ಷದ ನಾಯಕರಲ್ಲಿ ಮಾಜಿ ರಾಜ್ಯಸಭಾ ಸಂಸದ ತರ್ಲೋಚನ್ ಸಿಂಗ್ ಮತ್ತು ಪಿಡಿಪಿ ನಾಯಕ ಮುಜಾಫರ್ ಬೇಗ್ ಕೂಡ ಸೇರಿದ್ದಾರೆ.

2005 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಈಗಿನ ಜನತಾ ಪಕ್ಷದ ನಾಯಕ ಮತ್ತು ಸಮಾಜ ಸೇವಕ ಮೋಹನ್ ಧರಿಯಾ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆದರೆ ಅವರು ವಿರೋಧ ಪಕ್ಷದ ನಾಯಕ ಎನ್ನುವುದಕ್ಕಿಂತ ಹೆಚ್ಚಾಗಿ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹವಾಗಿದೆ.

ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೀರವಾಣಿಗೆ ಪದ್ಮ ಶ್ರೀ ಗರಿ: ಹಿಂದಿನ ವರ್ಷಗಳಂತೆ ಈ ವರ್ಷ ಸರ್ಕಾರವು ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಈ ವರ್ಷ ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಗಳನ್ನು ಗೆದ್ದ 'ಆರ್‌ಆರ್‌ಆರ್' ಚಾರ್ಟ್‌ಬಸ್ಟರ್ 'ನಾಟು ನಾಟು' ಹಾಡಿನ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಮತ್ತು 102 ವರ್ಷದ ಸರಿಂದಾ ವಾದಕ ಮತ್ತು ಪಶ್ಚಿಮ ಬಂಗಾಳದ ಅತ್ಯಂತ ಪ್ರಸಿದ್ಧ ಜಾನಪದ ವಾದಕರಲ್ಲಿ ಒಬ್ಬರಾದ ಮಂಗಳಾ ಕಾಂತಿ ರಾಯ್​ಗೆ ಪ್ರಶಸ್ತಿ ಘೋಷಿಸಲಾಗಿದೆ.

ಈಶಾನ್ಯ ರಾಜ್ಯದ 12 ಪ್ರತಿಷ್ಠತರಿಗೆ ಈ ಬಾರಿ ಪದ್ಮ ಪುರಸ್ಕಾರ: ಈಶಾನ್ಯದಿಂದ 12 ಪ್ರತಿಷ್ಠಿತ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 'ಪೂರ್ವದತ್ತ ನೋಡಿ' ನೀತಿ ಅನ್ವಯ ಈ ಎಲ್ಲ ಸಾಧಕರನ್ನು ಗುರುತಿಸಿ ಗೌರವ ಸಲ್ಲಿಸಲಾಗಿದೆ.

20 ರೂ ವೈದ್ಯರನ್ನು ಗುರುತಿಸಿ ಪುರಸ್ಕಾರ: ಮಧ್ಯಪ್ರದೇಶದಲ್ಲಿ ಕೇವಲ 20 ರೂ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಿವೃತ್ತ ಸೇನಾ ವೈದ್ಯ ಮುನೀಶ್ವರ್ ಚಂದಾವರ್ (77) ಈ ವರ್ಷ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದು ದೇಶದ ಜನರ ಗಮನ ಸೆಳೆದಿದೆ. ಇನ್ನು ಸಿಕ್ಕಿಂನ ಸಣ್ಣ ರೈತ 98 ವರ್ಷದ ತುಲಾ ರಾಮ್ ಉಪ್ರೇತಿ ಅವರು ಕಳೆದ 70 ವರ್ಷಗಳಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಮಾದರಿಯಾಗಿದ್ದಾರೆ. ಇಂತಹವರನ್ನು ಗುರುತಿಸಿ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಇದನ್ನು ಓದಿ: ಎಂಟು ಕನ್ನಡಿಗರಿಗೆ ಪದ್ಮ ಪುರಸ್ಕಾರ: ಎಸ್​ಎಂ ಕೃಷ್ಣಗೆ ಪದ್ಮವಿಭೂಷಣ, ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.