ETV Bharat / opinion

EXPLAINER: ಉಕ್ರೇನ್​​ನ 4​ ಪ್ರದೇಶಗಳಲ್ಲಿ ಜನಮತಗಣನೆ: ರಷ್ಯಾ ಸೇರ್ಪಡೆ ಕುರಿತು ಜನಾಭಿಪ್ರಾಯ

author img

By

Published : Sep 23, 2022, 4:11 PM IST

ಪ್ರತ್ಯೇಕತೆಯನ್ನು ಬಯಸುತ್ತಿರುವ ಡಾನ್​ ಬಾಸ್ ಎಂದು ಕರೆಯಲ್ಪಡುವ ಉಕ್ರೇನ್​ನ ಪೂರ್ವ ಭಾಗದ ಕೈಗಾರಿಕಾ ಕೇಂದ್ರಗಳಾದ ಲುಹಾಸ್ಕ್ ಮತ್ತು ಡೊನೆಸ್ಕ್​ ಗಳಲ್ಲಿ ರಷ್ಯಾದೊಳಗೆ ಸೇರ್ಪಡೆಯ ಕುರಿತು ಜನಮತಗಣನೆಯು ಶುಕ್ರವಾರದಿಂದ ನಡೆಯಲಿದೆ ಎಂದು ಏಕಾಏಕಿ ಅಧಿಕಾರಿಗಳು ಘೋಷಿಸಿದ್ದಾರೆ. ಖೇರ್ಸಾನ್ ಮತ್ತು ಝಾಪೋರಿಜಿಯಾಗಳಲ್ಲಿನ ಮಾಸ್ಕೊ ಬೆಂಬಲಿತ ಅಧಿಕಾರಿಗಳು ಕೂಡ ಜನಮತಗಣನೆಯನ್ನು ಘೋಷಿಸಿದ್ದಾರೆ.

ಉಕ್ರೇನ್​​ನ 4​ ಪ್ರದೇಶಗಳಲ್ಲಿ ಜನಮತಗಣನೆ: ರಷ್ಯಾ ಸೇರ್ಪಡೆ ಕುರಿತು ಜನಾಭಿಪ್ರಾಯ ಸಂಗ್ರಹ
EXPLAINER: What's behind referendums in occupied Ukraine?

ಮಾಸ್ಕೊ (ರಷ್ಯಾ): ರಷ್ಯಾ ಸ್ವಾಧೀನಪಡಿಸಿಕೊಂಡಿರುವ ಉಕ್ರೇನ್​ನ ನಾಲ್ಕು ವಲಯಗಳಲ್ಲಿ ಶುಕ್ರವಾರ ಜನಮತಗಣನೆ ಆರಂಭವಾಗಲಿದೆ. ಈ ನಾಲ್ಕು ವಲಯಗಳಲ್ಲಿನ ಜನತೆ ರಷ್ಯಾ ಸೇರಲು ಬಯಸುತ್ತಾರಾ ಎಂಬ ಬಗ್ಗೆ ಈ ಜನಮತಗಣನೆ ನಡೆಯುತ್ತಿದೆ. ಕಳೆದ ಏಳು ತಿಂಗಳಿಂದ ಯುದ್ಧ ನಡೆಯುತ್ತಿರುವ ಮಧ್ಯೆ, ಉಕ್ರೇನ್​ನ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ರಷ್ಯಾ ಮುಂದಾಗಿದೆ. ಜನಮತಗಣನೆಯು ಅನಧಿಕೃತ ಮತ್ತು ಇದು ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವ ಉಕ್ರೇನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ಧಿಕ್ಕರಿಸಿವೆ. ಈ ಸಂದರ್ಭದಲ್ಲಿ ಜನಮತಗಣನೆಗಳು ಮತ್ತು ಅವುಗಳ ಮಹತ್ವವನ್ನು ತಿಳಿಯೋಣ.

ಜನಮತಗಣನೆಗಳು ಏಕೆ ನಡೆಯುತ್ತಿವೆ?: ಕ್ರೆಮ್ಲಿನ್ ಈ ಮೊದಲೇ ಈ ತಂತ್ರವನ್ನು ಬಳಸಿತ್ತು. 2014 ರಲ್ಲಿ ಉಕ್ರೇನ್​ನ ಕ್ರಿಮಿಯಾದಲ್ಲಿ ತರಾತುರಿಯಲ್ಲಿ ರಷ್ಯಾ ಜನಮತಗಣನೆ ನಡೆಸಿತ್ತು. ಆಗಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಇದನ್ನು ಅನಧಿಕೃತ ಎಂದಿದ್ದವು. ಕಪ್ಪು ಸಮುದ್ರದ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳಲು ರಷ್ಯಾ ಜನಮತಗಣನೆಯನ್ನು ಅಸ್ತ್ರವಾಗಿ ಬಳಸಿತ್ತು.

ಪ್ರತ್ಯೇಕತೆ ಬಯಸುತ್ತಿರುವ ಡಾನ್​ ಬಾಸ್ ಎಂದು ಕರೆಯಲ್ಪಡುವ ಉಕ್ರೇನ್​ನ ಪೂರ್ವ ಭಾಗದ ಕೈಗಾರಿಕಾ ಕೇಂದ್ರಗಳಾದ ಲುಹಾಸ್ಕ್ ಮತ್ತು ಡೊನೆಸ್ಕ್​ ಗಳಲ್ಲಿ ರಷ್ಯಾದೊಳಗೆ ಸೇರ್ಪಡೆಯ ಕುರಿತು ಜನಮತಗಣನೆಯು ಶುಕ್ರವಾರದಿಂದ ನಡೆಯಲಿದೆ ಎಂದು ಏಕಾಏಕಿ ಅಧಿಕಾರಿಗಳು ಘೋಷಿಸಿದ್ದಾರೆ. ಖೇರ್ಸಾನ್ ಮತ್ತು ಝಾಪೋರಿಜಿಯಾಗಳಲ್ಲಿನ ಮಾಸ್ಕೊ ಬೆಂಬಲಿತ ಅಧಿಕಾರಿಗಳು ಕೂಡ ಜನಮತಗಣನೆ ಘೋಷಿಸಿದ್ದಾರೆ.

ಜನಮತಗಣನೆಯ ಬಗ್ಗೆ ಮಾಸ್ಕೊ ಮತ್ತು ಪ್ರತ್ಯೇಕತಾವಾದಿ ನಾಯಕರ ತದ್ವಿರುದ್ಧ ನಿಲುವುಗಳ ನಂತರ ಈಗ ಜನಮತಗಣನೆ ನಡೆಸಲಾಗುತ್ತಿರುವುದು ಯುದ್ಧಭೂಮಿಯಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ. ಬೇಸಿಗೆಯಲ್ಲಿ ಇಡೀ ಡಾನ್​ಬಾಸ್ ಪ್ರದೇಶವನ್ನು ತ್ವರಿತವಾಗಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾಗ ಸೆಪ್ಟೆಂಬರ್​​ನಲ್ಲಿ ಜನಮತಗಣನೆ ನಡೆಸುವ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾತನಾಡಿದ್ದರು.

ರಷ್ಯಾದ ಪಡೆಗಳು ಮತ್ತು ಸ್ಥಳೀಯ ಪ್ರತ್ಯೇಕತಾವಾದಿ ಪಡೆಗಳು ವಾಸ್ತವಿಕವಾಗಿ ಎಲ್ಲಾ ಲುಹಾನ್ಸ್ಕ್ ಪ್ರದೇಶದ ಮೇಲೆ ಹಿಡಿತ ಸಾಧಿಸಿವೆ. ಆದರೆ ಡೊನೆಸ್ಕ್ ಪ್ರದೇಶದಲ್ಲಿ ಈ ಹಿಡಿತ ಶೇ 60 ರಷ್ಟು ಮಾತ್ರ ಇದೆ. ಪೂರ್ವ ಭಾಗದಲ್ಲಿ ರಷ್ಯಾ ಪಡೆಗಳ ನಿಧಾನಗತಿಯ ಕಾರ್ಯಾಚರಣೆ ಮತ್ತು ಖೇರ್ಸಾನ್ ವಲಯದ ಪ್ರದೇಶಗಳನ್ನು ಉಕ್ರೇನ್ ಮರಳಿ ವಶಪಡಿಸಿಕೊಂಡ ಕಾರಣಗಳಿಂದ ಜನಮತಗಣನೆಯನ್ನು ನವೆಂಬರ್​ವರೆಗೆ ಮುಂದೂಡುವ ಬಗ್ಗೆ ರಷ್ಯಾ ಚಿಂತನೆ ನಡೆಸಿತ್ತು.

ಈಶಾನ್ಯದ ಖಾರ್ಕೀವ್ ಪ್ರದೇಶದಲ್ಲಿ ಮತ್ತೆ ಉಕ್ರೇನ್ ಮಿಂಚಿನ ಆಕ್ರಮಣ ನಡೆಸಿದ ನಂತರ ರಷ್ಯಾ ಯೋಜನೆಗಳು ಮತ್ತೆ ಬದಲಾದವು. ಸದ್ಯ ಹಿಡಿತದಲ್ಲಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಹಾಕಿರುವ ರಷ್ಯಾ, ಒಂದು ಕಡೆ ಉಕ್ರೇನ್ ದಾಳಿಯನ್ನು ನಿಲ್ಲಿಸುವ ಮತ್ತು ಒಂದು ವೇಳೆ ರಷ್ಯಾದ ಪ್ರಭುತ್ವವನ್ನು ಒಪ್ಪಿಕೊಳ್ಳದಿದ್ದರೆ ಅನಾಹುತಕಾರಿ ಪ್ರತಿದಾಳಿ ನಡೆಸುವ ಬೆದರಿಕೆಯನ್ನು ಅದು ಹಾಕುತ್ತಿದೆ.

ಮತದಾನ ನಡೆಯುವ ಪ್ರದೇಶಗಳಲ್ಲಿ ಏನಾಗುತ್ತಿದೆ?: 2014ರಲ್ಲಿ ಕ್ರಿಮಿಯಾದಲ್ಲಿ ರಷ್ಯಾ ಪಡೆಗಳ ನಿಕಟ ನಿಗಾದಲ್ಲಿ ಜನಮತಗಣನೆ ನಡೆದಿತ್ತು. ಆಗ ಅಲ್ಲಿನ ಹೆಚ್ಚಿನ ನಿವಾಸಿಗಳು ಮಾಸ್ಕೊ ಪರವಾಗಿದ್ದರು. 2014ರಿಂದ ಡಾನ್​ಬಾಸ್ ನಿಯಂತ್ರಿಸುತ್ತಿದ್ದ ಪ್ರತ್ಯೇಕತಾವಾದಿಗಳು ರಷ್ಯಾದೊಂದಿಗೆ ಸೇರಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದ್ದರು. ಮತ್ತು ಇದಕ್ಕೆ ವಿರೋಧ ವ್ಯಕ್ತಪಡಿಸಿದವರ ಬಗ್ಗೆ ಅಸಹಿಷ್ಣುತೆಯನ್ನು ಹೊಂದಿದ್ದರು. ಯಾವಾಗ ಇಲ್ಲಿ ಬಂಡಾಯಗಳು ಆರಂಭವಾದವೋ ಆಗ ಪ್ರತ್ಯೇಕತಾವಾದಿಗಳು ತಕ್ಷಣವೇ ಜನಮತಗಣನೆ ನಡೆಸಿದರು. ಇದರಲ್ಲಿ ಬಹುಪಾಲು ಜನ ರಷ್ಯಾ ಸೇರಲು ಮತ ಚಲಾಯಿಸಿದ್ದರು. ಆದರೆ, ಈ ಜನಮತಗಣನೆಯ ಫಲಿತಾಂಶವನ್ನು ನಂತರದ ದಿನಗಳಲ್ಲಿ ರಷ್ಯಾ ಕಡೆಗಣಿಸಿತು.

ಖೇರ್ಸಾನ್ ವಲಯ ಮತ್ತು ಝಾಪೋರಿಜಿಯಾದ ಭಾಗಶಃ ಪ್ರದೇಶಗಳನ್ನು ರಷ್ಯಾ ಪಡೆಗಳು ವಶಪಡಿಸಿಕೊಂಡ ನಂತರ ಅಲ್ಲಿ ಮಾಸ್ಕೊ ನಿಯೋಜಿತ ಅಧಿಕಾರಿಗಳು ಉಕ್ರೇನ್ ಟಿವಿ ಪ್ರಸಾರವನ್ನು ಸ್ಥಗಿತಗೊಳಿಸಿದ್ದಾರೆ. ಅದರ ಬದಲಾಗಿ ಈಗ ಅಲ್ಲಿನ ಟಿವಿಗಳಲ್ಲಿ ರಷ್ಯಾ ಟಿವಿ ಪ್ರಸಾರವಾಗುತ್ತಿದೆ. ಅಧಿಕಾರಿಗಳು ಅಲ್ಲಿನ ಜನರಿಗೆ ರಷ್ಯಾ ಪಾಸ್​ಪೋರ್ಟ್​ ನೀಡಿದ್ದು, ರೂಬಲ್ ಅನ್ನು ಚಲಾವಣೆಗೆ ತಂದಿದ್ದಾರೆ. ಇಷ್ಟು ಮಾತ್ರವಲ್ಲದೇ ರಷ್ಯಾ ಲೈಸೆನ್ಸ್​ ಫಲಕಗಳನ್ನು ಸಹ ನೀಡಿದ್ದು ಈ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ದಾರಿಗಳನ್ನು ಸುಗಮಗೊಳಿಸಲಾಗಿದೆ.

ಮತದ ನ್ಯಾಯಸಮ್ಮತತೆಯ ಬಗ್ಗೆ ಏನು ಹೇಳಲಾಗುತ್ತಿದೆ?: ಐದು ದಿನಗಳ ಮತದಾನ ಪ್ರಕ್ರಿಯೆಯು ಸ್ವತಂತ್ರ ಮಾನಿಟರ್‌ಗಳ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ ಮತ್ತು ಫಲಿತಾಂಶವನ್ನು ಬುಡಮೇಲು ಮಾಡುವ ಸಾಧ್ಯತೆಗಳಿವೆ. ಈ ವಾರದ ಆರಂಭದಲ್ಲಿ ಜನಮತಗಣನೆಯನ್ನು ಘೋಷಿಸಿದಾಗ, ಪಾಶ್ಚಿಮಾತ್ಯ ರಾಷ್ಟ್ರಗಳು ತಕ್ಷಣವೇ ಅವುಗಳ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತಿವೆ.

ರಷ್ಯಾದ ಮಿಲಿಟರಿ ಸಿದ್ಧತೆಗೂ ಇದಕ್ಕೂ ಏನು ಸಂಬಂಧ?: ಜನಮತಗಣನೆ ಘೋಷಿಸಿದ ಒಂದು ದಿನದ ನಂತರ ತನ್ನ ಸೇನೆಗಳ ಭಾಗಶಃ ಸಜ್ಜುಗೊಳಿಸುವಿಕೆಗೆ ಪುಟಿನ್ ಆದೇಶ ನೀಡಿದರು. ರಷ್ಯಾ ಭೌಗೋಳಿಕ ಪ್ರದೇಶದ ಮೇಲೆ ಯಾರೇ ಆದರೂ ಅತಿಕ್ರಮಣ ಮಾಡಲು ಯತ್ನಿಸಿದಲ್ಲಿ ಪರಮಾಣು ದಾಳಿ ನಡೆಸಲು ತಾವು ಹಿಂದೆ ಮುಂದೆ ನೋಡಲ್ಲ ಎಂದು ಪುಟಿನ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಅತಿದೊಡ್ಡದು ಎಂದು ಹೇಳಲಾಗುತ್ತಿರುವ ಪ್ರಮಾಣದ ಸೈನ್ಯ ಜಮಾವಣೆ ಮಾಡುತ್ತಿರುವ ರಷ್ಯಾ, ಯುದ್ಧಕ್ಕಾಗಿ 3 ಮಿಲಿಯನ್ ಕಾಯ್ದಿಟ್ಟ ಯೋಧರನ್ನು ಸಜ್ಜುಗೊಳಿಸುತ್ತಿದೆ. ಆದಾಗ್ಯೂ ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಮಿಲಿಟರಿ ಬಲ ಸಂಗ್ರಹಿಸುವ ಸಾಮರ್ಥ್ಯ ರಷ್ಯಾಕ್ಕಿದೆ. ರಹಸ್ಯ ಒಪ್ಪಂದವೊಂದರ ಪ್ರಕಾರ 1 ಮಿಲಿಯನ್ ಸೈನಿಕರನ್ನು ಯುದ್ಧಕ್ಕಿಳಿಸುವ ತಯಾರಿ ಮಾಡಿಕೊಂಡಿದೆಯಂತೆ.

ದೀರ್ಘಾವಧಿಯಿಂದಲೂ ರಷ್ಯಾ ಇಂಥದೊಂದು ಜನಪ್ರಿಯವಲ್ಲದ ಕ್ರಮ ತೆಗೆದುಕೊಳ್ಳುವುದರಿಂದ ಹಿಂದೆ ಸರಿದಿತ್ತು. ಆದರೆ ಈಗಿನ ಉಕ್ರೇನ್​ನ ಪ್ರತಿದಾಳಿಯು, ತನ್ನ ಸಣ್ಣ ಪ್ರಮಾಣದ ಸ್ವಯಂ ಸೇವಕ ಸೈನಿಕರ ಬಲದಿಂದ 1000 ಕಿಲೋಮೀಟರ್ ಉದ್ದದ ಗಡಿಯನ್ನು ರಕ್ಷಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತಿದೆ. ಆದರೆ ಕಾಯ್ದಿಟ್ಟ ಸೇನಾಪಡೆಯ ಹೊಸ ಯೋಧರು ನಿಜವಾದ ಯುದ್ಧಕ್ಕೆ ಸಿದ್ಧವಾಗಬೇಕಾದರೆ ಕೆಲ ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಜನಮತಗಣನೆಗೂ ಪುಟಿನ್​ರ ಪರಮಾಣು ಬೆದರಿಕೆಗೂ ಸಂಬಂಧವಿದೆಯಾ?: ಸದ್ಯ ಪುಟಿನ್ ಮತ್ತಷ್ಟು ಆಘಾತಕಾರಿ ಸೋಲುಗಳನ್ನು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಲ್ಲದೇ ತನ್ನ ಪ್ರದೇಶಗಳನ್ನು ಸಂರಕ್ಷಿಸಲು ಪರಮಾಣು ಅಸ್ತ್ರ ಬಳಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಂದರೆ ಈಗಾಗಲೇ ರಷ್ಯಾ ವಶಪಡಿಸಿಕೊಂಡಿರುವ ಪ್ರದೇಶಗಳ ಮೇಲೆ ಉಕ್ರೇನ್ ಪ್ರತಿದಾಳಿ ಮಾಡುವುದನ್ನು ನಿಲ್ಲಿಸದಿದ್ದರೆ ಪರಮಾಣು ಯುದ್ಧ ನಡೆಸುವುದಾಗಿ ಪುಟಿನ್ ಹೇಳಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಉಕ್ರೇನ್ ಮತ್ತು ಅದರ ಮಿತ್ರ ರಾಷ್ಟ್ರಗಳು ಒಂದೋ ಯುದ್ಧದಿಂದ ಹಿಂದೆ ಸರಿಯಬೇಕು, ಇಲ್ಲವಾದರೆ ಪರಮಾಣು ದಾಳಿಯನ್ನು ಎದುರಿಸಬೇಕು ಎಂಬುದು ಪುಟಿನ್ ಎಚ್ಚರಿಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಪರಮಾಣು ಬೆದರಿಕೆಗಳನ್ನು ಗೊಡ್ಡು ಬೆದರಿಕೆಗಳೆಂದು ತಳ್ಳಿ ಹಾಕಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾ ವಶಪಡಿಸಿಕೊಂಡ ಪ್ರದೇಶಗಳನ್ನು ಮರಳಿ ಪಡೆಯುವುದಾಗಿ ಶಪಥ ಮಾಡಿದ್ದಾರೆ.

ಇದನ್ನು ಓದಿ:ಕರ್ನಾಟಕದಿಂದ ಇರಾನ್‌ವರೆಗೆ...: ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್‌ ವಿರೋಧಿಸಿ ಮಹಿಳೆಯರ ಒಕ್ಕೊರಲ ಧ್ವನಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.