ETV Bharat / lifestyle

ಬೆಂಗಳೂರಲ್ಲಿ ಮನೆ ಮಾಲೀಕರಿಗೆ ಟ್ಯಾಕ್ಸ್ ತಲೆಬಿಸಿ: ಪಾಲಿಕೆ ವಲಯ ಬದಲಾವಣೆ ಮಾಹಿತಿ ನೀಡದೆಯೇ ದಂಡ ವಸೂಲಿ - policy change information

ನಾಲ್ಕು ವರ್ಷದ ಹೆಚ್ಚಿನ ತೆರಿಗೆಯನ್ನು ಬಡ್ಡಿ ಸಮೇತ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳು ಸ್ಪೀಡ್ ಪೋಸ್ಟ್ ಮತ್ತು ಮನೆ ಮನೆಗಳಿಗೆ ತೆರಳಿ ನೋಟಿಸ್ ನೀಡುತ್ತಿದ್ದಾರೆ. ಸಿ ಝೋನ್​ನಲ್ಲಿದ್ದ ಸಾವಿರಾರು ಮನೆಗಳನ್ನು 2016ರಲ್ಲಿ ಬಿಬಿಎಂಪಿ ಎ ಝೋನ್ ಎಂದು ಬದಲಾವಣೆ ಮಾಡಿದೆ. ಆದರೆ ಅದರ ಬಗ್ಗೆ ಮನೆ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

bbmp
ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ ನಾಯಕರು
author img

By

Published : Aug 8, 2021, 7:01 AM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗೊಂದಲದಿಂದ ಸಿಲಿಕಾನ್ ಸಿಟಿ ಆಸ್ತಿ ಮಾಲೀಕರು ಬಡ್ಡಿ ತೆರಬೇಕಾದ ಸ್ಥಿತಿ ಬಂದಿದೆ. ನಗರ ವ್ಯಾಪ್ತಿಯಲ್ಲಿ ಅನೇಕ ಮಾಲೀಕರಿಗೆ, ಆಸ್ತಿ ತೆರಿಗೆ ಪರಿಷ್ಕರಿಸಿ 2016-17ನೇ ಸಾಲಿನಿಂದ ವ್ಯತ್ಯಾಸದ ಮೊತ್ತಕ್ಕೆ ದಂಡ ಹಾಗೂ ಬಡ್ಡಿ ಸಮೇತ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ನಾಲ್ಕು ವರ್ಷದ ಹೆಚ್ಚಿನ ತೆರಿಗೆಯನ್ನು ಬಡ್ಡಿ ಸಮೇತ ಪಾವತಿಸುವಂತೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಸ್ಪೀಡ್ ಪೋಸ್ಟ್ ಮತ್ತು ಮನೆ ಮನೆಗಳಿಗೆ ತೆರಳಿ ನೋಟಿಸ್ ನೀಡುತ್ತಿದ್ದಾರೆ. ಸಿ ಝೋನ್​ನಲ್ಲಿದ್ದ ಸಾವಿರಾರು ಮನೆಗಳನ್ನು 2016ರಲ್ಲಿ ಬಿಬಿಎಂಪಿ ಎ ಝೋನ್ ಎಂದು ಬದಲಾವಣೆ ಮಾಡಿದೆ. ಆದರೆ ಅದರ ಬಗ್ಗೆ ಮನೆ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗ್ತಿದೆ. ಮನೆ ಮಾಲೀಕರು 2016 ರಿಂದ ಇಲ್ಲಿಯವರೆಗೆ ಸಿ ಝೋನ್ ದರದಲ್ಲಿ ತೆರಿಗೆ ಪಾವತಿ ಮಾಡಿಕೊಂಡು ಬಂದಿದ್ದಾರೆ. ಆನ್​ಲೈನ್​ನಲ್ಲಿ ಪಿಐಡಿ ನಂಬರ್, ಮನೆ ವಿಳಾಸ, ಸಂಪೂರ್ಣ ವಿವರ ನೀಡಿ ತೆರಿಗೆ ಪಾವತಿ ಮಾಡಿದ್ದಾರೆ.‌ ಆ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತೆರಿಗೆದಾರರಿಗೆ ನಿಮ್ಮ ಮನೆಗಳು ಸಿ ಜೋನ್​ನಿಂದ ಎ ಜೋನ್​ಗೆ ಸೇರ್ಪಡೆ ಮಾಡಲಾಗಿದೆ ಎಂದು ಯಾವುದೇ ನೋಟಿಸ್ ನೀಡಿಲ್ಲ. ಈಗ ಏಕಾಏಕಿ ಬಿಬಿಎಂಪಿ ಅಧಿಕಾರಿಗಳು ನಿಮ್ಮ ಮನೆ ಎ ಝೋನ್​ನಲ್ಲಿದೆ. ನೀವು ಎ ಝೋನ್ ತೆರಿಗೆ ಮತ್ತು ಅದಕ್ಕೆ ವನ್ ಟು ಡಬಲ್ ಬಡ್ಡಿ ಕಟ್ಟಬೇಕು ಎಂದು ಸಾವಿರಾರು ಮನೆಗಳಿಗೆ ನೋಟಿಸ್ ನೀಡ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಆಸ್ತಿ ಮಾಲೀಕರು ತಪ್ಪು ಮಾಡದೆಯೇ, ಅವರದಲ್ಲದ ತಪ್ಪಿಗೆ ದಂಡ, ಬಡ್ಡಿ ವಿಧಿಸಿರುವುದು ನ್ಯಾಯ ಸಮ್ಮತವಲ್ಲ ಎಂದು ಮಾಜಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಹಾಗೂ ಎಂ. ಶಿವರಾಜು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಬಿಬಿಎಂಪಿಯು 2008-09ನೇ ಸಾಲಿನಲ್ಲಿ ಜಾರಿಗೆ ತಂದ ಎಸ್ಎಎಸ್ ನಿಯಮಾವಳಿಯ ನಿಯಮ 12(1) ರಂತೆ ರಾಂಡಮ್ ಆಗಿ ಎಸ್ಎಎಸ್ ಅರ್ಜಿಗಳನ್ನು ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಅಧಿಸೂಚನೆಯಲ್ಲಿನ ಅಂಶಗಳನ್ನು ಪರಿಗಣಿಸದೆ ಲಕ್ಷಾಂತರ ಆಸ್ತಿಯ ಮಾಲೀಕರುಗಳಿಗೆ ತೆರಿಗೆ ಪರಿಷ್ಕರಿಸಿ, ಅಧಿಸೂಚನೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗಿದೆ. ಕೆಎಂಸಿ ಕಾಯ್ದೆ ಪ್ರಕಾರ ಆಸ್ತಿ ತೆರಿಗೆ ಪಾವತಿ ಅರ್ಜಿಗಳನ್ನು ಪರಿಶೀಲಿಸಿದ ನಂತರ ಪರಿಷ್ಕರಿಸಿದ ತೆರಿಗೆ ಹಾಗೂ ಪಾವತಿಸಿರುವ ತೆರಿಗೆಯ ವ್ಯತ್ಯಾಸದ ಮೊತ್ತಕ್ಕೆ 2% ರಷ್ಟು ದಂಡ ವಿಧಿಸಬಹುದು. ಆದರೆ ಈ ದಂಡವನ್ನು ಪ್ರತಿ ವರ್ಷ ವಿಧಿಸಲಾಗಿದೆ.

2008-09ರ ನಿಯಮಾವಳಿಯಂತೆ ಕೆಲವು ಆಸ್ತಿಗಳು 'ಎಫ್' ವಲಯದಲ್ಲಿದ್ದು, 2016-17ರ ನಿಯಮಾವಳಿಯಂತೆ ಈ ಆಸ್ತಿಗಳು 'ಡಿ' ವಲಯದಲ್ಲಿದ್ದು, ಇತರ ಆಸ್ತಿಗಳ ಮಾಲೀಕರು ಒಂದು ವಲಯಕ್ಕೆ ಹೆಚ್ಚಿಸಿ 'ಇ' ವಲಯ ದರ ಪರಿಗಣಿಸಿ ತೆರಿಗೆ ಪಾವತಿಸಬಹುದು. ಆದರೆ 2016- 17ರಲ್ಲಿ ಈ ರೀತಿ ಪಾವತಿಗೆ ಬಿಬಿಎಂಪಿಯ ಗಣಕಯಂತ್ರದ ತಂತ್ರಾಂಶ ಅವಕಾಶ ನೀಡದೆ ಇದ್ದು, ಅನೇಕ ಮಾಲೀಕರುಗಳು 'ಎಫ್' ವಲಯದ ದರದಲ್ಲಿ ತೆರಿಗೆ ಪಾವತಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಈ ಪರಿಸ್ಥಿತಿಯಿಂದ ಇನ್ನೂ ಸಾರ್ವಜನಿಕರು ಸುಧಾರಿಸಿಕೊಳ್ಳಲಾಗಿಲ್ಲ. ಇಂತಹ ಸಂದರ್ಭದಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವುದು ಸಮಂಜಸವಲ್ಲ. ಈ ಹೆಚ್ಚುವರಿ ಬಾಕಿ ತೆರಿಗೆಗೆ ವಾರ್ಷಿಕ ಶೇ.24 ರಷ್ಟು ಬಡ್ಡಿದರ ವಿಧಿಸಲಾಗಿದೆ. ಅಲ್ಲದೆ, ಕಳೆದ ಫೆಬ್ರವರಿಯಲ್ಲೇ ನೋಟೀಸ್ ಸಿದ್ಧಪಡಿಸಿದ್ದರೂ ಐದು ತಿಂಗಳು ತಡವಾಗಿ ಜುಲೈನಲ್ಲಿ ನೀಡಿ ತೆರಿಗೆ ಪಾವತಿ ವಿಳಂಬಕ್ಕೆ ಮಾಸಿಕ ಶೇ.2 ರಷ್ಟು ಬಡ್ಡಿ ದರ ನೀಡಬೇಕೆಂದು ಸೂಚಿಸಲಾಗಿದೆ. ನೋಟಿಸ್ ವಿಳಂಬಕ್ಕೆ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಹೊರತು ತೆರಿಗೆದಾರರಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಪರಿಷ್ಕರಿಸಿರುವುದನ್ನು ಕೈ ಬಿಡಬೇಕೆಂದು ಕೋರುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತಾ ಮಾತನಾಡಿ, ಈ ಬಗ್ಗೆ ದೂರು ಬಂದಿದೆ, ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.