ETV Bharat / lifestyle

World AIDS Day: ಹೆಚ್ಐವಿ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳು..

author img

By

Published : Dec 1, 2021, 1:13 PM IST

2030ಕ್ಕೆ ಜಗತ್ತಿನಾದ್ಯಂತ ಏಡ್ಸ್​ ರೋಗವನ್ನು ಕೊನೆಗಾಣಿಸುವ ಗುರಿಯನ್ನು ವಿಶ್ವಸಂಸ್ಥೆ ಹೊಂದಿದೆ. 2021ರ ಏಡ್ಸ್​ ದಿನವು ಏಡ್ಸ್ ರೋಗಿಗಳ ಮತ್ತು ಸಾಮಾನ್ಯರ ನಡುವಿನ ಅಸಮಾನತೆಯನ್ನು ಎಲ್ಲೆಡೆ ಕೊನೆಗಾಣಿಸಬೇಕು ಮತ್ತು ಇತರ ರೋಗಗಳನ್ನೂ ಕೊನೆಗಾಣಿಸಬೇಕು ಎಂಬ ಘೋಷವಾಕ್ಯವನ್ನು ಇಟ್ಟುಕೊಂಡಿದೆ.

World AIDS Day 2021, theme and some basics about the disease
World AIDS Day 2021: ಹೆಚ್ಐವಿ ಸೋಂಕಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾರ ಕೆಲವು ವಿಚಾರಗಳು

ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಲು ಹಾಗೂ ಏಡ್ಸ್​ ರೋಗದಿಂದ ಪ್ರಾಣ ಕಳೆದುಕೊಂಡವರನ್ನು ನೆನಪಿಸಿಕೊಳ್ಳುವ ಉದ್ದೇಶ ಹೊಂದಿದೆ. ಈ ರೋಗದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.

ವಿಶ್ವ ಏಡ್ಸ್ ದಿನ- 2021

ಪ್ರತಿವರ್ಷ ಒಂದು ಹೊಸ ಘೋಷವಾಕ್ಯದೊಂದಿಗೆ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿ 'ಅಸಮಾನತೆಯನ್ನು ಕೊನೆಗೊಳಿಸಿ, ಏಡ್ಸ್​ ಅನ್ನು ಕೊನೆಗೊಳಿಸಿ, ಮಹಾಮಾರಿಯನ್ನು ಕೊನೆಗೊಳಿಸಿ' (End inequalities. End AIDS. End pandemics) ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.

ಈ ಬಾರಿಯ ವಿಶ್ವ ಏಡ್ಸ್ ದಿನವು ಏಡ್ಸ್ ರೋಗಿಗಳ ಮತ್ತು ಸಾಮಾನ್ಯರ ನಡುವಿನ ಅಸಮಾನತೆಯನ್ನು ವಿಶ್ವದಾದ್ಯಂತ ಕೊನೆಗಾಣಿಸಬೇಕು ಮತ್ತು ಇತರ ರೋಗಗಳನ್ನೂ ಕೊನೆಗಾಣಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದೆ. ಅಸಮಾನತೆಯನ್ನು ಕೊನೆಗಾಣಿಸಲು ದೃಢ ನಿರ್ಧಾರ ಕೈಗೊಳ್ಳದಿದ್ದರೆ, 2030ಕ್ಕೆ ಏಡ್ಸ್​ ನಿರ್ಮೂಲನೆ ವಿಚಾರದಲ್ಲಿ ಇಟ್ಟುಕೊಂಡಿರುವ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಹೆಚ್‌ಒ) ಅಂಕಿಅಂಶಗಳ ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ ಹೊಸದಾಗಿ 15 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ವೇಳೆಗೆ ಒಟ್ಟು 3 ಕೋಟಿ 77 ಲಕ್ಷ ಮಂದಿ ಹೆಚ್​ಐವಿ ಸೋಂಕಿನಿಂದ ಬಳಲುತ್ತಿದ್ದರು. ಇದರಲ್ಲಿ ಶೇಕಡಾ 73ರಷ್ಟು ಸೋಂಕಿತರು ಏಡ್ಸ್​​ಗಿರುವ ಆ್ಯಂಟಿ ರೆಟ್ರೋವೈರಲ್ ಚಿಕಿತ್ಸೆಯನ್ನು (ಎಆರ್‌ಟಿ) ಪಡೆದಿದ್ದಾರೆ.

ಏಡ್ಸ್ ಎಂದರೇನು?

ಏಡ್ಸ್​ ಎಂಬುದು ಎಚ್​ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್​) ಎಂಬ ವೈರಸ್​ನಿಂದ ಬರುವ ಸೋಂಕಾಗಿದ್ದು, ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ದಾಳಿ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ದೇಹದ ರೋಗ ನಿರೋಧಕ ಶಕ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿ ರಕ್ತಕಣಗಳಾದ CD4 cell (ಸಿಡಿ4 ಜೀವಕೋಶಗಳು) ಅಥವಾ T-cells (ಟಿ ಜೀವಕೋಶಗಳು) ಮೇಲೆ ದಾಳಿ ಮಾಡಿ, ಸೋಂಕಿತ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಈ ರೀತಿಯಾಗಿ ಸಿಡಿ4 ಜೀವಕೋಶಗಳು ನಾಶವಾದಂತೆ ಸೋಂಕಿತ ವ್ಯಕ್ತಿ ತುಂಬಾ ದುರ್ಬಲನಾಗುತ್ತಾನೆ. ಇದು ಶೇಕಡಾ 20ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಏಡ್ಸ್ ಹೇಗೆ ಹರಡುತ್ತದೆ?

ಹೆಚ್ಐವಿ ಸೋಂಕಿತ ವ್ಯಕ್ತಿಯ ರಕ್ತ, ವೀರ್ಯ, ಎದೆಹಾಲು ಹಾಗೂ ಇತರ ದೈಹಿಕ ದ್ರವಗಳೊಂದಿಗೆ ದೈಹಿಕ ಸಂಪರ್ಕಕ್ಕೆ ಬರುವ ಬೇರೆ ವ್ಯಕ್ತಿಗಳಿಗೆ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಗಾಗಿ ಬಳಸಿದ ಸೂಜಿಗಳು, ಸಿರಿಂಜ್​​ಗಳು, ಇತರ ಇಂಜೆಕ್ಷನ್ ಉಪಕರಣಗಳು, ಶಸ್ತ್ರಚಿಕಿತ್ಸಾ ಉಪಕರಣಗಳು ಅಥವಾ ಇತರ ಚೂಪಾದ ಉಪಕರಣಗಳನ್ನು ಬೇರೊಬ್ಬ ವ್ಯಕ್ತಿಗೆ ಬಳಸಿದರೂ, ಸೋಂಕು ಹರಡುತ್ತದೆ. ಸೋಂಕಿತ ರಕ್ತವನ್ನು ಬೇರೊಬ್ಬ ವ್ಯಕ್ತಿ ಪಡೆಯುವುದರಿಂದಲೂ ಸೋಂಕು ಹರಡುತ್ತದೆ.

ಹೆಚ್​ಐವಿ ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತನ್ನ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಹೆಚ್​ಐವಿ ಸೋಂಕಿತ ವ್ಯಕ್ತಿ ಆ್ಯಂಟಿ ರೆಟ್ರೋ ವೈರಲ್ ಚಿಕಿತ್ಸೆ (ಎಆರ್‌ಟಿ) ಪಡೆದಿದ್ದರೆ, ಆ ವ್ಯಕ್ತಿಯ ದೇಹದ ವೈರಸ್ ಬೇರೊಬ್ಬ ವ್ಯಕ್ತಿಗೆ ರವಾನೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಏಡ್ಸ್ ರೋಗ ಲಕ್ಷಣಗಳು ಯಾವುವು?

  • ಜ್ವರ
  • ಚಳಿ
  • ಸ್ನಾಯು ನೋವುಗಳು
  • ಗಂಟಲು ಕೆರೆತ
  • ದೇಹದ ಮೇಲೆ ಊತ
  • ರಾತ್ರಿ ಬೆವರುವಿಕೆ
  • ಆಯಾಸ
  • ಬಾಯಿ ಹುಣ್ಣುಗಳು

ವಾಂತಿ, ವಾಕರಿಕೆ, ತಲೆನೋವು ಕೂಡಾ ಏಡ್ಸ್ ರೋಗದ ಲಕ್ಷಣಗಳಾಗಿದ್ದು, ಹೆಚ್​ಐವಿ ವೈರಸ್​ ದೇಹದೊಳಗೆ ಪ್ರವೇಶಿಸಿದ 2ರಿಂದ 4 ವಾರಗಳೊಳಗೆ ಲಕ್ಷಣಗಳು ಗೊತ್ತಾಗುತ್ತವೆ. ಈ ಲಕ್ಷಣಗಳು ಕಂಡುಬಂದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆಗೆ ಒಳಪಡಬೇಕಾಗುತ್ತದೆ.

ಏಡ್ಸ್​ ಅನ್ನು ತಡೆಯುವುದು ಹೇಗೆ?

ಏಡ್ಸ್ ರೋಗವನ್ನು ತಡೆಲು ನ್ಯಾಷನಲ್ ಹೆಲ್ತ್​ ಪೋರ್ಟಲ್​ ಆಫ್ ಇಂಡಿಯಾ (National Health Portal) ಕೆಲವೊಂದು ಕ್ರಮಗಳನ್ನು ಸೂಚಿಸಿದೆ. ಅವುಗಳೆಂದರೆ..

  • ಸುರಕ್ಷಿತ ಲೈಂಗಿಕ ಕ್ರಿಯೆಯಾಗಿ ಕಾಂಡೋಮ್ ಧರಿಸುವುದು, ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುವುದು
  • ಲೈಂಗಿಕತೆಯಿಂದ ಹರಡುವ ರೋಗಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಚಿಕಿತ್ಸೆ
  • ಒಬ್ಬರಿಗೆ ಉಪಯೋಗಿಸಿದ ಸೂಜಿ, ಸಿರಿಂಜ್​ಗಳನ್ನು ಬೇರೊಬ್ಬರಿಗೆ ಉಪಯೋಗಿಸುವುದನ್ನು ತಡೆಯುವುದು
  • ಗರ್ಭಿಣಿ ಸ್ತ್ರೀಯರು, ಸೋಂಕು ಪರೀಕ್ಷೆ ಮಾಡಿಸಿಕೊಂಡು,ಸೋಂಕು ಕಂಡುಬಂದರೆ ಕ್ರಮ ವಹಿಸುವುದು

ಇದನ್ನೂ ಓದಿ: ಮನುಷ್ಯನ ದೇಹದಲ್ಲಿವೆ ಶೃಂಗಾರ ಉತ್ತೇಜಿಸುವ ಹಾರ್ಮೋನ್​ಗಳು: ಇವು ಲವಲವಿಕೆಯಿಂದಿರಲೂ ಸಹಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.