ETV Bharat / lifestyle

ನ್ಯೂಯಾರ್ಕ್​ನ ಶಾಲೆಗಳಲ್ಲಿ ಸಸ್ಯಾಹಾರ ಉತ್ತೇಜನಕ್ಕೆ 'ವೀಗನ್ ಫ್ರೈಡೇ' ಜಾರಿ.. ಕಾರಣ ಏನು ಗೊತ್ತೇ? - ನ್ಯೂಯಾರ್ಕ್ ಪಬ್ಲಿಕ್ ಸ್ಕೂಲ್​ಗಳಲ್ಲಿ ಸಸ್ಯಾಹಾರಿ

ನ್ಯೂಯಾರ್ಕ್​ ನಗರದ ಪಬ್ಲಿಕ್ ಶಾಲೆಗಳಲ್ಲಿ ವೀಗನ್ ವೀಗನ್ ಫ್ರೈಡೇ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

new-york-city-school-lunch-menu-going-vegan-on-fridays
ನ್ಯೂಯಾರ್ಕ್​ನ ಶಾಲೆಗಳಲ್ಲಿ ಸಸ್ಯಾಹಾರ ಉತ್ತೇಜನಕ್ಕೆ 'ವೀಗನ್ ಫ್ರೈಡೆ' ಜಾರಿ
author img

By

Published : Feb 5, 2022, 8:47 AM IST

Updated : Feb 5, 2022, 9:00 AM IST

ನ್ಯೂಯಾರ್ಕ್​(ಅಮೆರಿಕ): ಹೊಸ ಪರಿಕಲ್ಪನೆಯೊಂದು ಅಮೆರಿಕದ ನ್ಯೂಯಾರ್ಕ್​ನಲ್ಲಿ ಜನ್ಮತಾಳಿದೆ. ಇಲ್ಲಿನ ಪಬ್ಲಿಕ್ ಶಾಲೆಗಳಲ್ಲಿ 'ಸಸ್ಯಾಹಾರ ಶುಕ್ರವಾರ' (ವೀಗನ್ ಫ್ರೈಡೇ) ಜಾರಿ ಮಾಡಲಾಗುತ್ತಿದೆ. ನ್ಯೂಯಾರ್ಕ್​ನ ಎಲ್ಲಾ ಶಾಲೆಗಳ ಕೆಫೆಟೇರಿಯಾ ಪ್ರತಿ ಶುಕ್ರವಾರ ಸಸ್ಯಾಹಾರದಿಂದ ತುಂಬಿರಲಿದೆ.

ಶುಕ್ರವಾರದಿಂದ ಈ ಪರಿಕಲ್ಪನೆ ಆರಂಭಗೊಂಡಿದ್ದು, ನ್ಯೂಯರ್ಕ್​​ ನಗರದ ಹೊಸ ಮೇಯರ್ ಆಗಿ ಆಯ್ಕೆಯಾಗಿರುವ ಎರಿಕ್ ಆ್ಯಡಮ್ಸ್ ಈ ಕ್ರಮವನ್ನು ಒತ್ತಿ ಹೇಳಿದ್ದಾರೆ. ಅವರೂ ಕೂಡಾ ಸಸ್ಯಾಹಾರವನ್ನೇ ಪಾಲಿಸುತ್ತಿದ್ದು, ತಮ್ಮ ಆರೋಗ್ಯಕ್ಕೆ ಸಸ್ಯಾಹಾರವೇ ಕಾರಣವೆಂದು ಪ್ರಚಾರ ಮಾಡುತ್ತಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಯಾವ ರೀತಿಯ ಆಹಾರವನ್ನು ತಿನ್ನಬೇಕೆಂದು ನಾನು ಜನರಿಗೆ ಹೇಳುವುದಿಲ್ಲ. ಆದರೆ, ನಮ್ಮ ಜೈಲುಗಳಲ್ಲಿ, ನಮ್ಮ ಆಸ್ಪತ್ರೆಗಳಲ್ಲಿ ಮತ್ತು ಮುಖ್ಯವಾಗಿ ನಮ್ಮ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯಕರ ಆಹಾರವನ್ನು ಸಲಹೆ ನೀಡಬೇಕೆಂದು WNBC ಟಿವಿಗೆ ನೀಡಿದ ಸಂದರ್ಶನದಲ್ಲಿ ಆ್ಯಡಮ್ಸ್ ಸಲಹೆ ನೀಡಿದರು.

ಈಗಲೂ ಅಲ್ಲಿನ ಪಬ್ಲಿಕ್ ಸ್ಕೂಲ್​ಗಳಲ್ಲಿ ಸಸ್ಯಾಹಾರಿ ಆಯ್ಕೆಗಳಿವೆ. ಈ ಶುಕ್ರವಾರದಿಂದ ಆರಂಭವಾಗಿರುವ ವೀಗನ್ ಫ್ರೈಡೆ, ಪ್ರತಿ ಶುಕ್ರವಾರ ನಡೆಯಲಿದೆ. ಇಲ್ಲಿ ಸಸ್ಯಾಹಾರವನ್ನು ಕೆಫೆಟೇರಿಯಾಗಳಲ್ಲಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿವೆ.

ವಿದ್ಯಾರ್ಥಿಗಳು ಈಗಲೂ ಬೇಕಿದ್ದರೆ, ಮಾಂಸಾಹಾರಕ್ಕೆ ಮನವಿ ಸಲ್ಲಿಸಬಹುದು ಎಂದು ನ್ಯೂಯಾರ್ಕ್​ನ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಅಂದಹಾಗೆ ಸಸ್ಯಾಹಾರದಲ್ಲಿ ಹಾಲು, ಪೀನಟ್ ಬಟರ್​​ ಮತ್ತು ಜೆಲ್ಲಿ ಸ್ಯಾಂಡ್‌ವಿಚ್‌ಗಳು, ಹಮ್ಮಸ್ ಮತ್ತು ಪ್ರಿಟ್ಜೆಲ್‌ಗಳನ್ನು (ಒಂದು ರೀತಿಯ ಸಸ್ಯಾಹಾರ) ನೀಡಲಾಗುತ್ತದೆ. ಈ ಆಹಾರಗಳು ಯಾವಾಗಲೂ ಲಭ್ಯವಿರುತ್ತವೆ.

ಸುಮಾರು 9,38,000 ವಿದ್ಯಾರ್ಥಿಗಳನ್ನು ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳು ಹೊಂದಿದ್ದು, 2019ರಿಂದ ಕೆಲವು ಶಾಲೆಗಳಲ್ಲಿ ಮಾಂಸರಹಿತ ಸೋಮವಾರ (Meatless Mondays) ನಿಯಮವನ್ನು ಅನುಸರಿಸಿಕೊಂಡು ಬರಲಾಗುತ್ತಿತ್ತು.

ಇದನ್ನೂ ಓದಿ: Cause of Migraine: ಮೈಗ್ರೇನ್‌ ತಲೆನೋವಿಗೆ ಮುಖ್ಯ ಕಾರಣ ಇವೇ ನೋಡಿ...

ಸ್ಕೂಲ್ ನ್ಯೂಟ್ರಿಷನ್ ಅಸೋಸಿಯೇಷನ್‌ ನಡೆಸಿದ 2018ರ ಸಮೀಕ್ಷೆಯ ಪ್ರಕಾರ, ಅಮೆರಿಕದಾದ್ಯಂತ ಶೇಕಡಾ 14ರಷ್ಟು ಜಿಲ್ಲೆಗಳಲ್ಲಿ ಶೇಕಡಾ 56ರಷ್ಟು ಸಸ್ಯಾಹಾರವನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ನ್ಯೂಯಾರ್ಕ್ ಈಗ ಅಳವಡಿಸಿಕೊಂಡಿರುವಂತೆ ಬೇರೆ ನಗರಗಳ ಶಾಲೆಗಳಲ್ಲಿ ಅಳವಡಿಸಕೊಳ್ಳಲಾಗುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ನ್ಯೂಯಾರ್ಕ್ ನಗರದ ಶಾಲೆಗಳ ಸಸ್ಯಾಹಾರಿ ಊಟ ನಿಯಮಕ್ಕೆ ವಿದ್ಯಾರ್ಥಿಗಳ ಗುಂಪುಗಳು ಅನುಮೋದನೆ ನೀಡಿವೆ ಎಂದು ತಿಳಿದು ಬಂದಿದೆ.

ಆ್ಯಡಮ್ಸ್ ಹೇಳುವಂತೆ ಮಧುಮೇಹವನ್ನು ಸಸ್ಯಾಹಾರದಿಂದ ಹತೋಟಿಗೆ ತರಬಹುದು. ಜಂಕ್ ಫುಡ್‌ ಜೀವನಶೈಲಿಯಲ್ಲಿ ಆರೋಗ್ಯಕ್ಕೆ ಮಾರಕವಾಗಿದೆ. ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಯ ಶೇಕಡಾ 40ರಷ್ಟು ಮಕ್ಕಳು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದರು. ಇದಕ್ಕೆಲ್ಲಾ ಮಾಂಸಾಹಾರ ಮತ್ತು ಜಂಕ್​ಪುಡ್ ಕಾರಣ ಎಂದು ಹೇಳಲಾಗುತ್ತಿದೆ.

Last Updated : Feb 5, 2022, 9:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.