ETV Bharat / lifestyle

ಬ್ಲ್ಯಾಕ್​​ ಫಂಗಸ್​ ಸೋಂಕು: ವೈದ್ಯರ ಸಲಹೆ ಹೀಗಿದೆ - ಬ್ಲ್ಯಾಕ್ ಫಂಗಸ್ ಸುದ್ದಿ

ಬ್ಲ್ಯಾಕ್ ಫಂಗಸ್​ ಎಂಬುದು ಫಂಗಸ್​ನಿಂದ ಬರುವ ರೋಗವಾಗಿದ್ದು, ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕಡಿಮೆಯಾದಾಗ ಈ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೂಗು, ಬಾಯಿ ಅಥವಾ ಶರೀರದ ಮೇಲಾದ ಗಾಯದ ಮೂಲಕ ಈ ಫಂಗಸ್​ ದೇಹವನ್ನು ಪ್ರವೇಶಿಸುತ್ತದೆ.

Expert opinion on black fungus in bihar
ಬ್ಲ್ಯಾಕ್ ಫಂಗಸ್​ ಸೋಂಕು; ವೈದ್ಯರ ಸಲಹೆ ಹೀಗಿದೆ..
author img

By

Published : May 15, 2021, 11:02 PM IST

ಪಾಟ್ನಾ: ಇಡೀ ದೇಶವು ಕೊರೊನಾ ಮಹಾಮಾರಿಯಿಂದ ಬಾಧಿತವಾಗಿದ್ದು, ಬಿಹಾರ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಕೊರೊನಾ ನಿರ್ಮೂಲನೆಯಾಗುವ ಮುನ್ನವೇ ಈಗ ಇನ್ನೊಂದು ರೋಗ ಹರಡುವ ಆತಂಕ ಎದುರಾಗಿದೆ. ಬ್ಲ್ಯಾಕ್ ಫಂಗಸ್​ ಎಂಬ ಸೋಂಕು ಇತ್ತೀಚಿನ ದಿನಗಳಲ್ಲಿ ಬಿಹಾರದಲ್ಲೂ ಕಾಣಿಸಿಕೊಂಡಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಕನಿಷ್ಠ 20 ಜನರಿಗೆ ಈ ಸೋಂಕು ತಗುಲಿರುವುದಾಗಿ ವರದಿಯಾಗಿದೆ.

ಬಿಹಾರದ ಪಾಟ್ನಾ ಏಮ್ಸ್​ನಲ್ಲಿ 7, ರೂಬನ್ ಆಸ್ಪತ್ರೆಯಲ್ಲಿ 2, ಪಾರಸ್​ ಆಸ್ಪತ್ರೆಯಲ್ಲಿ 2, ಐಜಿಐಎಂಎಸ್​ ನಲ್ಲಿ 4, ವೆಲ್ಲೋರ ಇ ಎನ್ ಟಿ ಕೇಂದ್ರದಲ್ಲಿ 3 ಮತ್ತು ಕೈಮೂರ ಆಸ್ಪತ್ರೆಯಲ್ಲಿ ಒಂದು ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ವರದಿಯಾಗಿವೆ. ಇನ್ನು ರಾಜ್ಯದ ಇನ್ನೂ ಕೆಲ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪ್ರಕರಣಗಳು ಕಂಡು ಬಂದಿರುವುದಾಗಿ ವರದಿಯಾಗಿದೆ.

"ಬ್ಲ್ಯಾಕ್ ಫಂಗಸ್​ ಎಂಬುದು ಫಂಗಸ್​ನಿಂದ ಬರುವ ರೋಗವಾಗಿದ್ದು, ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕಡಿಮೆಯಾದಾಗ ಈ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೂಗು, ಬಾಯಿ ಅಥವಾ ಶರೀರದ ಮೇಲಾದ ಗಾಯದ ಮೂಲಕ ಈ ಫಂಗಸ್​ ದೇಹವನ್ನು ಪ್ರವೇಶಿಸುತ್ತದೆ. ಮೂಗಿನಿಂದ ಸತತವಾಗಿ ನೀರು ಮತ್ತು ರಕ್ತ ಸೋರುವುದು ಹಾಗೂ ಕಪ್ಪು ಸಿಂಬಳ ಜಮಾಯಿಸುವುದು, ಕಣ್ಣುರಿ ಹಾಗೂ ಕಣ್ಣು ಮಂಜಾಗುವುದು ಈ ರೋಗದ ಲಕ್ಷಣಗಳಾಗಿವೆ." ಎಂದು ಪಾಟ್ನಾ ಏಮ್ಸ್​ ಉಪಾಧೀಕ್ಷಕ ಡಾ. ಅನಿಲ ಕುಮಾರ ಮಾಹಿತಿ ನೀಡಿದರು.

ಬ್ಲ್ಯಾಕ್ ಫಂಗಸ್​ ಪ್ರಮುಖ ಲಕ್ಷಣಗಳು

ಮೂಗಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಂತಾಗುವುದ, ಕಣ್ಣು ಮತ್ತು ಗಲ್ಲಗಳು ಊದಿಕೊಳ್ಳುವುದು ಇವು ಸಹ ಈ ಫಂಗಸ್​ನ ಲಕ್ಷಣಗಳಾಗಿವೆ. ಇಂಥ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಬಯಾಪ್ಸಿ ಮಾಡಿಸಬೇಕೆಂದು ವೈದ್ಯರು ಸೂಚಿಸುತ್ತಾರೆ. ಸೋಂಕು ಇದ್ದಲ್ಲಿ ತಕ್ಷಣವೇ ಆ್ಯಂಟಿ ಫಂಗಲ್ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ.

ಬ್ಲ್ಯಾಕ್ ಫಂಗಸ್​ ಇದೊಂದು ವಿಶೇಷ ರೀತಿಯ ಫಂಗಸ್​ ಆಗಿದ್ದು, ಶರೀರದಲ್ಲಿ ಬಹುಬೇಗನೆ ಹರಡುತ್ತದೆ. ಕೊರೊನಾ ಸೋಂಕು ತಗಲುವ ಮುನ್ನ ಬೇರೆ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಈ ಸೋಂಕು ತಗಲುವ ಸಾಧ್ಯತೆ ಜಾಸ್ತಿ. ಇನ್ನು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿಯೂ ಈ ರೋಗ ಹೆಚ್ಚಾಗಿ ಕಂಡು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.