ಬೀಜಿಂಗ್ (ಚೀನಾ): ಚೀನಾ ಮೊಬೈಲ್ ತಯಾರಿಕಾ ಕಂಪನಿಯಾಗಿರುವ ಒಪ್ಪೊ ತನ್ನ ರೆನೋ-6 ಸೀರಿಸ್ ಲಾಂಚ್ ಮಾಡಲು ಮುಂದಾಗಿದೆ. ಮೊದಲ ಬಾರಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಪವರ್ಫುಲ್ ಪ್ರೊಸೆಸರ್ನೊಂದಿಗೆ ಹೊರಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಒಪ್ಪೊ ಮೊಬೈಲ್ಗಳು ಮಾಡೆಲ್ ನಂಬರ್ PEQM00, PEPM00 ಮತ್ತು PENM00ಗಳನ್ನು ಚೀನಾದಲ್ಲಿ ರೆನೋ06, ರೆನೋ06ಪ್ರೋ, ರೆನೋ06 ಪ್ರೋ ಪ್ಲಸ್ ಎಂಬ ಹೆಸರಿನಲ್ಲಿ ಲಾಂಚ್ ಆಗಲಿವೆ.
ಈ ಮೊದಲು ಡೈಮೆನ್ಸಿಟಿ 900 ಮಾಡೆಲ್ ಫೋನ್ಗಳನ್ನು ಹೊರತಂದಿರುವ ಒಪ್ಪೊ ಇದೀಗ ಅದರ ಪ್ರೋ ಮಾಡೆಲ್ನಲ್ಲಿ ಡೈಮೆನ್ಸಿಟಿ 1200 ಪ್ರೊಸೆಸರ್ ಇರಲಿದೆ. ಇದರಲ್ಲಿ ರೆನೊ06 ನಲ್ಲಿ 6ಎನ್ಎಂ ಚಿಪ್ಸೆಟ್ ಜೊತೆ ಡೈಮೆನ್ಸಿಟಿ 900 ಇರಲಿದ್ದು, ಇದು ಸ್ನ್ಯಾಪ್ಡ್ರ್ಯಾಗನ್ 786ಜಿ ಪ್ರೊಸೆಸರ್ಗಿಂತಲೂ ಹೆಚ್ಚು ಪವರ್ಫುಲ್ ಆಗಿರಲಿದೆ. ಆದರೆ ರೆನೊ06 ಪ್ರೋ ಪ್ಲಸ್ ಮೊಬೈಲ್ನಲ್ಲಿ ಮಾತ್ರ ಸ್ನ್ಯಾಪ್ಡ್ರ್ಯಾಗನ್ 870 ಚಿಪ್ಸೆಟ್ ಹೊಂದಿರಲಿದೆ.
ಈ ಮೊದಲು ಮಾರ್ಚ್ 22ರಂದು ಮೊಬೈಲ್ ಹೊರಬರಲಿದೆ ಎನ್ನಲಾಗಿತ್ತು. ಆದ್ರೀಗ ಮೇ 27ರಂದು ಅನೌನ್ಸ್ ಅಗಲಿದೆ ಎಂದು ವರದಿಯಾಗಿದೆ. ರೆನೊ06 ಪ್ರೋ ಮೊಬೈಲ್ನಲ್ಲಿ 6.55 ಇಂಚಿನ ಓಎಲ್ಇಡಿ ಜೊತೆ 32 ಎಂಪಿ ಕ್ಯಾಮರಾ ಇದ್ದು, ಮುಖ್ಯ ಕ್ಯಾಮರಾ 64 ಎಂಪಿ ಆಗಿರಲಿದೆ. ಅಲ್ಲದೆ 4,500 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ, ಹಾಗೂ 65 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಿಗಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಆದರೆ ಇದರ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಜೊತೆಗೆ ಭಾರತದಲ್ಲಿ ಯಾವಾಗ ರಿಲೀಸ್ ಆಗಲಿದೆ ಎಂಬ ಕುರಿತು ಮಾಹಿತಿ ನೀಡಿಲ್ಲ.