ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಆ್ಯಂಡ್ರಾಯ್ಡ್ ಬಳಕೆದಾರರಿಗೆ ನೆಟ್ಫ್ಲಿಕ್ಸ್ ಹೊಸ ಫೀಚರ್ ಹೊರತಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಸಂಪೂರ್ಣ ಡೌನ್ಲೋಡ್ ಮಾಡಿಕೊಳ್ಳುವ ಮೊದಲೇ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆದರೆ, ಈ ಸೇವೆ ಹೊಂದಲು ಆ್ಯಂಡ್ರಾಯ್ಡ್ 7.64 ವರ್ಷನ್ಗಿಂತಲೂ ಮೇಲಿನ ಮೊಬೈಲ್ ಫೋನ್ ನಿಮ್ಮ ಬಳಿ ಇರಬೇಕು ಎಂದು ಸಂಸ್ಥೆ ತಿಳಿಸಿದೆ.
ಇದಕ್ಕೂ ಮೊದಲು ನೆಟ್ಫ್ಲಿಕ್ಸ್ನಲ್ಲಿ ಒಂದು ಸಿನಿಮಾ ಸಂಪೂರ್ಣ ಡೌನ್ಲೋನ್ ಆಗುವವರೆಗೂ ಚಿತ್ರ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕುರಿತು ಲಕ್ಷಾಂತರ ಬಳಕೆದಾರರು ಅಸಮಾಧಾನ ಹೊರಹಾಕಿದ್ದರು. ಇದೀಗ ಹೊಸದಾಗಿ ಅರ್ಧ ಸಿನಿಮಾ ಡೌನ್ಲೋಡ್ ಆದ ಬಳಿಕ ಆ ಚಿತ್ರ ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು, ಸಿನಿಮಾ ವೀಕ್ಷಿಸುತ್ತಲೇ ಹಿಂಬದಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ನೀಡಲಾಗಿದೆ.
ಈ ಸೇವೆಯನ್ನ ಮೊದಲು ಆ್ಯಂಡ್ರಾಯ್ಡ್ ಮೊಬೈಲ್ಸ್ ಮತ್ತು ಟ್ಯಾಬ್ಲೈಡ್ಗಳಲ್ಲಿ ಹೊರತಂದಿದ್ದು, ಭವಿಷ್ಯದಲ್ಲಿ ಆ್ಯಪಲ್ ಐಒಎಸ್ ಸಿಸ್ಟಂನಲ್ಲೂ ತರಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಓದಿ: ಪಾಕಿಸ್ತಾನದಲ್ಲಿ ಟಿಕ್ಟಾಕ್ ತಾತ್ಕಾಲಿಕ ಬ್ಯಾನ್ : ಸಿಂಧ್ ಹೈಕೋರ್ಟ್ ಆದೇಶ