ನವದೆಹಲಿ: ಆ್ಯಪಲ್ ಐಫೋನ್ 13 ನೇ ಆವೃತ್ತಿ (Apple iPhone 13) ಯ ಬಿಡುಗಡೆಯ ಮುನ್ನವೇ ಐಫೋನ್ 14 ಪ್ರೊ (Apple iPhone 14 Pro) ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ.
ಮುಂದಿನ ವರ್ಷ ಬಿಡುಗಡೆ ಸಾಧ್ಯತೆ ಇರುವ ಐಫೋನ್ 14 ಪ್ರೊನ ಬಾಡಿ ಅಥವಾ ಮೇಲ್ಮೈಯನ್ನು ಹಿಂದೆಂದಿಗಿಂತಲೂ ವಿಭಿನ್ನವಾಗಿ ಮತ್ತು ಬಲಿಷ್ಠವಾಗಿ ಟೈಟಾನಿಯಂ (Titanium) ನಿಂದ ತಯಾರಿಸಲು ಆ್ಯಪಲ್ ಪ್ಲ್ಯಾನ್ ಮಾಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಓದಿ : Apple iPhone 13 series ನಲ್ಲಿ ಇರಲಿದೆ 25 W ಫಾಸ್ಟ್ ಚಾರ್ಜಿಂಗ್ ಫೀಚರ್
ಟೈಟಾನಿಯಂ ಅತ್ಯಂತ ಬಲಿಷ್ಠವಾದ ಸಾಧನವಾಗಿದ್ದು ಫೋನ್ಗೆ ಯಾವುದೇ ಸ್ಕ್ರಾಚ್ ಆಗದಂತೆ ತಡೆಯುತ್ತದೆ. ಇದು ಸ್ಟೀಲ್ಗಿಂತ ಹಗುರವಾದ ಸಾಧನವಾಗಿದೆ. ಆದರೆ, ಟೈಟಾನಿಯಂನ ವೈಫಲ್ಯತೆ ಅಂದರೆ ಇದು ಸ್ವಲ್ಪ ಹಾರ್ಡ್ ಆಗಿರುವುದರಿಂದ ಕೈಯಲ್ಲಿ ಹಿಡಿದುಕೊಳ್ಳಲು ಮತ್ತು ಫಿಂಗರ್ ಪ್ರಿಂಟ್ಗೆ ಸಮಸ್ಯೆಯಾಗುತ್ತದೆ. ಈ ಎರಡು ಸಮಸ್ಯೆಗಳನ್ನು ಪರಿಹರಿಸಲು ಆ್ಯಪಲ್ ಮುಂದಾಗಿರುವುದಾಗಿ ವದಿಯಾಗಿದೆ.