ಕೋವಿಡ್ ಅವಧಿ ಶುರುವಾದಾಗಿನಿಂದ ಮನೆಯಲ್ಲಿ ಟಿವಿ, ಫ್ರಿಡ್ಜ್, ಸೋಫಾಗೆ ಜಾಗ ಮೀಸಲಿಟ್ಟಂತೆ, ಲ್ಯಾಪ್ಟಾಪ್ಗೂ ಜಾಗ ಮೀಸಲಿರಿಸುವ ಕಾಲ ಬಂದಾಗಿದೆ. ಕೆಲವರ ಮನೆಗಳು ವಿಶಾಲವಾಗಿದ್ದರೆ, ಇನ್ನೂ ಕೆಲವರ ಮನೆಗಳು ಚಿಕ್ಕದಾಗಿರುತ್ತವೆ. ಲ್ಯಾಪ್ ಇಡುವುದೆಲ್ಲಿ ಎಂದು ಚಿಂತೆಗೀಡಾಗುತ್ತಾರೆ.
ಕಳೆದ ಎರಡು ವರ್ಷಗಳಿಂದ ಅದೆಷ್ಟೋ ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹೋಮ್ ಸೆಟಪ್ ಬಹಳ ಮುಖ್ಯ. ಅದಕ್ಕಾಗಿಯೇ ಅರಿಯಾನಾ ಡೆಜಿನರ್ ಕ್ರಿಯೇಷನ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಮರು ವಿನ್ಯಾಸಗೊಳಿಸಿದ ಹೋಮ್ ಸೆಟಪ್‌ಗಾಗಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಿಮ್ಮ ಮನೆಗೆ ನೈಸರ್ಗಿಕ ಬೆಳಕು ಬರುವಂತಿದ್ದರೆ ತುಂಬಾ ಸಂತೋಷ. ರೆಡಿಮೇಡ್ ಅಥವಾ ಕಸ್ಟಮ್ ಮೇಡ್ ಸ್ಕ್ರೀನ್ಗಳನ್ನು ಕಿಟಕಿ ಬಾಗಿಲುಗಳಿಗೆ ಅಳವಡಿಸಬಹುದು. ಅಥವಾ ಡಾರ್ಕ್ ಟೋನ್ ಸ್ಕ್ರೀನ್ಗಳನ್ನೂ ಬಳಸಬಹುದು. ಡಾರ್ಕ್ ಸ್ಕ್ರೀನ್ಗಳು ಅತಿ ಹೆಚ್ಚು ಬೆಳಕು ಬರುವುದನ್ನು ತಡೆಯುತ್ತವೆ. ಹೆಚ್ಚು ಬೆಳಕು ಬಂದರೆ, ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ.
ವರ್ಕ್ ಫ್ರಂ ಹೋಂ ಮಾಡುವ ಸಂದರ್ಭದಲ್ಲಿ ನೀವು ಕುಳಿತುಕೊಳ್ಳುವ ಜಾಗದ ಸುತ್ತಲಿನ ಗೋಡೆಗಳ ಮೇಲೆ ಟೆಕ್ಸ್ಟ್ಚರ್ಡ್ ವಾಲ್ಪೇಪರ್ ಅಂಟಿಸುವುದರಿಂದ ಕೊಠಡಿ ಆಕರ್ಷಿತವಾಗಿರುತ್ತದೆ. ಇಲ್ಲದಿದ್ದರೆ, ನಿಮಗೆ ಇಷ್ಟವಾಗುವ ಪೇಂಟ್ ಅನ್ನೂ ಬಳಿಯಬಹುದು.
ಮಲ್ಟಿ ಫಂಕ್ಷನಲ್ ಪೀಠೋಪಕರಣಗಳು ಮನೆಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತವೆ. ಪೋರ್ಟಬಲ್ ಮತ್ತು ಬಹುಪಯೋಗಿ ವಸ್ತುಗಳನ್ನು ಲ್ಯಾಪ್ಟಾಪ್ ಇಡಲು, ಸ್ಟಡಿ ಟೇಬಲ್ ಆಗಿ ಬಳಸಬಹುದು. ಗೋಡೆಗಳಲ್ಲಿಯೇ ಕಬೋರ್ಡ್ ನಿರ್ಮಿಸುವುದರಿಂದ ನೆಲದ ಮೇಲೆ ಸಾಕಷ್ಟು ಜಾಗ ಉಳಿಯುತ್ತದೆ.
ಲೆನಿನ್ ಬೆಡ್ಶೀಟ್ಗಳು, ಕುಶನ್ ಬೆಡ್ಗಳ ಮೇಲೆ ವಿಶ್ರಾಂತಿ ಪಡೆದರೆ, ಆಯಾಸ ಬೇಗ ಕಡಿಮೆಯಾಗುತ್ತದೆ. ಆಹಾರವನ್ನು ಮೈಕ್ರೋವೇವ್-ಸುರಕ್ಷಿತ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಹಾಗೂ ತೊಳೆಯುವ ಪಾತ್ರೆಗಳ ಸಂಖ್ಯೆಯನ್ನು ಕಡಿಮೆ ಮಾಡಿ.
ಎಲ್ಲಾ ವಸ್ತುಗಳನ್ನು ಅದರದರ ಜಾಗದಲ್ಲಿಯೇ ಇರುವಂತೆ ಮಾಡಿ. ಆಗ ನೆಲವು ವಿಶಾಲವಾಗಿ ಕಾಣುತ್ತದೆ. ಗೋಡೆಗಳಿಗೆ ಸಾಧ್ಯವಾದಷ್ಟು ನೀಲಿ ಅಥವಾ ಬೂದು ಬಣ್ಣವನ್ನು ಪೇಂಟ್ ಮಾಡಿ. ಈಗ ಮನೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ.