ನವದೆಹಲಿ: ವಾಟ್ಸ್ಆ್ಯಪ್ನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡಬ್ಲ್ಯುಎಬೆಟಾಇನ್‌ಫೊ ಗಮನಿಸಿದಂತೆ, ಫೇಸ್‌ಬುಕ್ ಒಡೆತನದ ಕಂಪನಿಯು ಈಗ ಮ್ಯೂಟ್ ವಿಡಿಯೋ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಸದ್ಯ ಇದು ಬೀಟಾ ಅಪ್‌ಡೇಟ್‌ನಲ್ಲಿ ಕಾಣಿಸಿಕೊಂಡಿದೆ.
ವಾಟ್ಸ್ಆ್ಯಪ್ ವೈಶಿಷ್ಟ್ಯಗಳ ಟ್ರ್ಯಾಕರ್ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ, ಟ್ರಿಮ್ಮಿಂಗ್ ಆಯ್ಕೆಯೊಂದಿಗೆ ವಿಡಿಯೋವನ್ನು ಮ್ಯೂಟ್ ಮಾಡುವ ಆಯ್ಕೆಯೂ ಲಭ್ಯವಾಗಲಿದೆ. "ವಾಲ್‌ಪೇಪರ್ ವೈಶಿಷ್ಟ್ಯಗಳು ಮತ್ತು ಕಣ್ಮರೆಯಾಗುತ್ತಿರುವ ಸಂದೇಶಗಳನ್ನು ಸಕ್ರಿಯಗೊಳಿಸಿದ ನಂತರ, ವಾಟ್ಸ್ಆ್ಯಪ್ ಈಗ ಹೊಸ ವೈಶಿಷ್ಟ್ಯಗಳನ್ನು ಜಾರಿಗೊಳಿಸುತ್ತಿದೆ. ಮುಂದಿನ ಅಪ್‌ಡೇಟ್‌ನಲ್ಲಿ ಮ್ಯೂಟ್ ವಿಡಿಯೋ ಆಯ್ಕೆ ಕಾಣಿಸಿಕೊಳ್ಳಲಿದೆ" ಎಂದು ಡಬ್ಲ್ಯುಎಬೆಟಾಇನ್‌ಫೊ ವರದಿ ಮಾಡಿದೆ.
ವಾಟ್ಸ್ಆ್ಯಪ್ ಹೆಚ್ಚಿನ ಬಳಕೆದಾರರಿಗೆ ವಾಲ್‌ಪೇಪರ್ ವೈಶಿಷ್ಟ್ಯಗಳನ್ನು ಹೊರತರಲು ಪ್ರಾರಂಭಿಸಿದೆ. ಈ ವೈಶಿಷ್ಟ್ಯವು ಪ್ರತಿ ಚಾಟ್‌ಗೆ ವಿಭಿನ್ನ ವಾಲ್‌ಪೇಪರ್ ಹೊಂದಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ವಾಟ್ಸ್ಆ್ಯಪ್ನಲ್ಲಿನ ಎಲ್ಲಾ ಚಾಟ್‌ಗಳಿಗೆ ಒಂದು ವಾಲ್‌ಪೇಪರ್ ಅನ್ನು ಹೊಂದಿಸಲು ನೀವು ಆಯ್ಕೆ ಮಾಡಬಹುದು.
ಇತ್ತೀಚೆಗೆ, ವಾಟ್ಸ್ಆ್ಯಪ್ ಬಹುನಿರೀಕ್ಷಿತ 'ಕಣ್ಮರೆಯಾಗುತ್ತಿರುವ ಸಂದೇಶಗಳು' ವೈಶಿಷ್ಟ್ಯವನ್ನು ಪರಿಚಯಿಸಿತ್ತು.