ನವದೆಹಲಿ: ಮೀಟಿವೈ, ಮೈ ಜಿಓವಿ, ಡಿಜಿಟಲ್ ಇಂಡಿಯಾ, ಇಂಡಿಯಾ ಪೋಸ್ಟ್, ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (ಎನ್ಐಸಿ), ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫರ್ಮೇಷನ್ ಟೆಕ್ನಾಲಜಿ (ಎನ್ಐಇಎಲ್ಐಟಿ), ಕಾಮನ್ ಸರ್ವೀಸ್ ಸೆಂಟರ್, ಉಮಂಗ್ ಅಪ್ಲಿಕೇಶನ್, ಡಿಜಿ ಲಾಕರ್, ನ್ಯಾಷನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾ (ಎನ್ಐಎಕ್ಸ್ಐ), ಸೆಂಟ್ರಲ್ ಬೋರ್ಡ್ ಆಫ್ ಇನ್ಡೈರೆಕ್ಟ್ ಟ್ಯಾಕ್ಸ್ ಮತ್ತು ಕಸ್ಟಮ್ಸ್ (ಸಿಬಿಐಸಿ) ಇಲಾಖೆಗಳು 'ಕೂ' ಆ್ಯಪ್ ಪರಿಶೀಲನೆ ನಡೆಸಿವೆ ಮತ್ತು ತಮ್ಮ ಖಾತೆಯನ್ನು ಕೂನಲ್ಲಿ ತೆರೆದಿವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿ) ಪ್ರಮುಖ ಸಂಸ್ಥೆಗಳು ಭಾರತದ ಸ್ವಂತ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ 'ಕೂ'ನಲ್ಲಿ ಖಾತೆಗಳನ್ನು ತೆರೆದಿವೆ. ಆತ್ಮನಿರ್ಭರ ಅಡಿಯಲ್ಲಿ 'ಕೂ' ಆ್ಯಪ್ ಅನ್ನು ಸಾಮಾಜಿಕ ಜಾಲತಾಣ ವಿಭಾಗದ ಆತ್ಮನಿರ್ಭರ್ ಅಪ್ಲಿಕೇಶನ್ ಎಂದು ಘೋಷಿಸಲಾಯಿತು. ಇದನ್ನು ಭಾರತ ಸರ್ಕಾರ ಆಯೋಜಿಸಿದೆ.
-
I am now on Koo.
— Piyush Goyal (@PiyushGoyal) February 9, 2021 " class="align-text-top noRightClick twitterSection" data="
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
📱 Join me: https://t.co/zIL6YI0epM pic.twitter.com/REGioTdMfm
">I am now on Koo.
— Piyush Goyal (@PiyushGoyal) February 9, 2021
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
📱 Join me: https://t.co/zIL6YI0epM pic.twitter.com/REGioTdMfmI am now on Koo.
— Piyush Goyal (@PiyushGoyal) February 9, 2021
Connect with me on this Indian micro-blogging platform for real-time, exciting and exclusive updates.
Let us exchange our thoughts and ideas on Koo.
📱 Join me: https://t.co/zIL6YI0epM pic.twitter.com/REGioTdMfm
ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್ ಬಿದ್ವಕ್ತ ಅವರು 2020ರಲ್ಲಿ 'ಕೂ' ಆ್ಯಪ್ನ್ನು ಕಂಡುಹಿಡಿದರು. Bombinate Technologies Pvt Ltd ಈ ಆ್ಯಪ್ ಮಾಲೀಕತ್ವವನ್ನು ಹೊಂದಿದೆ.
ಇನ್ನು ಭಾರತ ಸರ್ಕಾರ ಕೂ ಗೆ ಬರಲು ಕಾರಣ ಇದೆ. ರೈತ ಪ್ರತಿಭಟನೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ 257 ಖಾತೆಗಳನ್ನು ರದ್ದು ಮಾಡುವಂತೆ ಭಾರತ ಸರ್ಕಾರ ಟ್ವಿಟ್ಟರ್ಗೆ ಸೂಚಿಸಿತ್ತು. ಆದರೆ ಈ ಖಾತೆಗಳನ್ನು ರದ್ದು ಮಾಡಿದ ಟ್ವಿಟರ್ ಕೆಲವೇ ಹೊತ್ತಿನಲ್ಲಿ ಮತ್ತೆ ಬ್ಯಾನ್ ಹಿಂಪಡೆದಿತ್ತು. ಇದು ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಟ್ವಿಟರ್ ಬದಲಿಗೆ ಕೂ ಬಳಸುವ ಆಲೋಚನೆ ಸರ್ಕಾರದ್ದು ಎನ್ನಲಾಗಿದೆ.
-
#Koo ऐप पर #MeitY के विचार सुनें |
— Ministry of Electronics & IT (@GoI_MeitY) February 10, 2021 " class="align-text-top noRightClick twitterSection" data="
फॉलो करें - https://t.co/PNPyvDVYwc#AatmaNirbharBharat #MadeinIndiaApp pic.twitter.com/DO8UXAK3xJ
">#Koo ऐप पर #MeitY के विचार सुनें |
— Ministry of Electronics & IT (@GoI_MeitY) February 10, 2021
फॉलो करें - https://t.co/PNPyvDVYwc#AatmaNirbharBharat #MadeinIndiaApp pic.twitter.com/DO8UXAK3xJ#Koo ऐप पर #MeitY के विचार सुनें |
— Ministry of Electronics & IT (@GoI_MeitY) February 10, 2021
फॉलो करें - https://t.co/PNPyvDVYwc#AatmaNirbharBharat #MadeinIndiaApp pic.twitter.com/DO8UXAK3xJ
ಕೂ ಅಪ್ಲಿಕೇಶನ್ ಬಳಸುವಾಗ ಹೀಗೆ ಮಾಡಬಹುದು: -
- ನಿಮ್ಮ ಅಭಿಪ್ರಾಯಗಳು/ನವೀಕರಣಗಳನ್ನು ಹಂಚಿಕೊಳ್ಳಿ
- ನೀವು ಆಡಿಯೊಗಳನ್ನು ಕಳುಹಿಸಬಹುದು.
- ಭಾರತೀಯ ಭಾಷೆಗಳಲ್ಲಿ ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಚರ್ಚಿಸಿ.
- ಬಾಲಿವುಡ್ ಕಲಾವಿದರು, ಪತ್ರಕರ್ತರು, ರಾಜಕಾರಣಿಗಳು, ಕ್ರಿಕೆಟಿಗರು, ನಟ/ನಟಿಯರು, ಕಾರ್ಯಕರ್ತರು ಮತ್ತು ಇತರರನ್ನು ಫಾಲೋ ಮಾಡಬಹುದು.
- ನೀವು ಅನುಸರಿಸುವ ಜನರು ಏನು ಹೇಳುತ್ತಾರೆಂದು ನೋಡುವ ಮೂಲಕ ನಿಮ್ಮ ಫೀಡ್ ಅನ್ನು ಭಾರತೀಯ ಭಾಷೆಗಳಲ್ಲಿ ವೀಕ್ಷಿಸಿ ಟ್ರೆಂಡಿಂಗ್ ಕೂನಲ್ಲಿ ನೀವು ಎಲ್ಲಾ ಹಂತದ ಆಸಕ್ತಿದಾಯಕ ಭಾರತೀಯರನ್ನು ಅನುಸರಿಸಬಹುದು.
ಸದ್ಗುರು, ರವಿಶಂಕರ್ ಪ್ರಸಾದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮುಂತಾದ ಅನೇಕ ಪ್ರಮುಖ ವ್ಯಕ್ತಿಗಳು ಪ್ರತಿದಿನ ತಮ್ಮನ್ನು ತಾವು ವ್ಯಕ್ತಪಡಿಸಲು ಕೂ ಅನ್ನು ಬಳಸುತ್ತಾರೆ.