ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಪತ್ರಿಕೋದ್ಯಮ ಉದ್ಯಮಿಗಳ ಆಲೋಚನೆಗಳನ್ನು ನೈಜ ವ್ಯವಹಾರಗಳಾಗಿ ಪರಿವರ್ತಿಸಲು ಮುಂದಾಗಿದೆ. 2021 ಗೂಗಲ್ ನ್ಯೂಸ್ ಇನಿಶಿಯೇಟಿವ್ (ಜಿಎನ್‌ಐ) ಸ್ಟಾರ್ಟ್ಅಪ್ ಬೂಟ್ ಕ್ಯಾಂಪ್‌ಗಾಗಿ ಅಮೆರಿಕ ನಿವಾಸಿಗಳಿಗೆ ಈಗ ಅರ್ಜಿಗಳು ಲಭ್ಯ ಇವೆ.
7 ರಿಂದ ನವೆಂಬರ್ 5 ರವರೆಗೆ 24 ಯೋಜನೆಗಳನ್ನು ಸ್ವೀಕರಿಸುವ ಗುರಿ ಹೊಂದಿದೆ. ಅಪ್ಲಿಕೇಶನ್ ವಿಂಡೋ ಆಗಸ್ಟ್ 1 ರಂದು ಕೊನೆಗೊಳ್ಳಲಿದೆ.
"ನೀವು ಹೊಸ ಯೋಜನೆಯನ್ನು ಪ್ರಾರಂಭಿಸಲು ಸಿದ್ಧರಾಗಿರುವ ಪತ್ರಕರ್ತರಾಗಿದ್ದರೆ, ನಾವು ಸಹಾಯ ಮಾಡಲು ಮುಂದಾಗುತ್ತೇವೆ" ಎಂದು ಜಿಎನ್‌ಐ ಸ್ಟಾರ್ಟ್ಅಪ್ ಬೂಟ್ ಕ್ಯಾಂಪ್‌ನ ನಿರ್ದೇಶಕ ಫಿಲಿಪ್ ಸ್ಮಿತ್ ಹೇಳಿದರು.
"ನೀವು ಬೂಟ್‌ಕ್ಯಾಂಪ್ ಸೇರಿದರೆ ಜಗತ್ತಿನಲ್ಲಿ ನಡೆಯುವ ವಿಚಾರಗಳ ಬಗ್ಗೆ ಸಾಮೂಹಿಕ ಅನುಭವ ಮತ್ತು ಬುದ್ಧಿವಂತಿಕೆಯಿಂದ ಸವಾಲುಗಳನ್ನು ಎದುರಿಸುವ ಕಲೆಯನ್ನು ನೀವು ಕಲಿಯಬಹುದು "ಎಂದು ಸ್ಮಿತ್ ಹೇಳಿದರು.
ಆಯ್ದ ಪತ್ರಕರ್ತರು ಜಿಎನ್‌ಐ ಸ್ಟಾರ್ಟ್ಅಪ್ ಪ್ಲೇಬುಕ್ ಆಧಾರಿತ ಪಠ್ಯಕ್ರಮದಿಂದಲೂ ಪ್ರಯೋಜನ ಪಡೆಯಬಹುದು. ಸ್ಟಾರ್ಟ್ಅಪ್ ಬೂಟ್ ಕ್ಯಾಂಪ್ ಪತ್ರಕರ್ತರಿಗೆ ತರಬೇತಿ, ಬೆಂಬಲ ಮತ್ತು ಧನಸಹಾಯವನ್ನು ಒದಗಿಸುತ್ತದೆ. ಈ ವರ್ಷದ ಕೊನೆಯಲ್ಲಿ, ಕೆನಡಾದ ಸಂಸ್ಥಾಪಕರಿಗೆ ಮಾತ್ರ ಮೀಸಲಾಗಿರುವ ತನ್ನ ಮೊದಲ ಸ್ಟಾರ್ಟ್ಅಪ್ ಬೂಟ್ ಕ್ಯಾಂಪ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗೂಗಲ್ ಹೇಳಿದೆ.