ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಫೋಟೊಗಳ ಬಳಕೆದಾರರಿಗೆ ಗೂಗಲ್ ಒನ್ ಸದಸ್ಯತ್ವ ಪಡೆಯುವಂತೆ ಎಕ್ಸ್ಡಿಎ ಮೊಬೈಲ್ ಸಾಫ್ಟ್ವೇರ್ ಡವಲಪರ್ ಕಂಪನಿ ಸೂಚಿಸಿದೆ.
ಗೂಗಲ್ ಫೋಟೊ ಯೂಸರ್ಗಳು ಗೂಗಲ್ ಒನ್ ಸದಸ್ಯತ್ವವನ್ನು ಪಡೆದರೆ, ಇನ್ನೂ ಹೆಚ್ಚಿನ ಫೋಟೊಗಳು, ಎಡಿಟಿಂಗ್ ಫೀಚರ್ ಹಾಗು ಇನ್ನಿತರ ಹೆಚ್ಚುವರಿ ಫೀಚರ್ಗಳು ಮತ್ತು ವಿವಿಧ ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು ಎಕ್ಸ್ಡಿಎ ಹೇಳಿದೆ. ಅದಲ್ಲದೇ, ಗೂಗಲ್ ಒನ್ ಸದಸ್ಯತ್ವದಿಂದಾಗಿ ಈ ಫೋಟೋಗಳ ಬಳಕೆ ಗುಪ್ತವಾಗಿರಿಸಬಹುದು ಎಂದು ತಿಳಿಸಿದೆ.
ಗೂಗಲ್ ಒನ್ ಸದಸ್ಯತ್ವ ಹೊಂದಿದವರು, ತಮಗೆ ಬೇಕಾದ ಗುಪ್ತ ಫೋಟೋಗಳನ್ನ ಲಾಕ್ ಮಾಡಲು 'ಕಲರ್ ಪಾಪ್' ಎಂಬ ವಿಶಿಷ್ಟ ಫೀಚರ್ ನೀಡಲಾಗಿದೆ. ಅದಲ್ಲದೇ, ಈ ಫೀಚರ್ನಲ್ಲಿ ಮೊದಲಿನಿಗಿಂತಲೂ ಹೆಚ್ಚಿನ ಫೋಟೋಗಳನ್ನು ಸಂಗ್ರಹಿಸಬಹುದಾಗಿದೆ ಎಂದು ತಿಳಿಸಿದೆ.
ಗೂಗಲ್ ಒನ್ ಚಂದಾದಾರಿಕೆ ತಿಂಗಳಿಗೆ 1.99 ಯು.ಎಸ್.ಡಾಲರ್ನಿಂದ ಪ್ರಾರಂಭವಾಗುತ್ತದೆ (100 ಜಿಬಿ ಕ್ಲೌಡ್ ಸಂಗ್ರಹಕ್ಕಾಗಿ) ಎಂದು ಕಂಪನಿ ತಿಳಿಸಿದೆ.