ETV Bharat / lifestyle

ಇನ್ಮುಂದೆ ವಿಂಡೋಸ್ 10 ಡಿವೈಸ್​ಗಳಲ್ಲೂ ಲಭ್ಯವಿದೆ ಅಮೆಜಾನ್​ ಪ್ರೈಮ್ - ಮೈಕ್ರೋಸಾಫ್ಟ್ ಸ್ಟೋರ್

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿನ ಅಪ್ಲಿಕೇಶನ್ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು ಡೆಸ್ಕ್‌ಟಾಪ್ ಪಿಸಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನೂ ಒಳಗೊಂಡಿದೆ. ಇನ್ನು ಆನ್‌ಲೈನ್ ಸ್ಟ್ರೀಮಿಂಗ್ ಅನುಭವವು ಪ್ರೈಮ್ ವಿಡಿಯೋ ವೆಬ್‌ಸೈಟ್‌ನಲ್ಲಿನ ಪ್ರಸ್ತುತ ಅನುಭವದಂತೆಯೇ ಇರುತ್ತದೆ.

prime
ಅಮೇಜಾನ್​ ಪ್ರೈಮ್
author img

By

Published : Jul 4, 2020, 1:18 PM IST

ನವದೆಹಲಿ: ವಿಂಡೋಸ್ 10 ಡಿವೈಸ್​ಗಳಲ್ಲಿನ ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ಲಭ್ಯವಿರುವ ಮೀಸಲಾದ ಆ್ಯಪ್ ಮೂಲಕ ಭಾರತದಲ್ಲಿನ ಗ್ರಾಹಕರು ಈಗ ಪ್ರೈಮ್ ವಿಡಿಯೋವನ್ನು ಪಡೆಯಬಹುದು ಎಂದು ಅಮೆಜಾನ್ ಪ್ರಕಟಿಸಿದೆ.

ವಿಂಡೋಸ್ ಅಪ್ಲಿಕೇಶನ್‌ನಲ್ಲಿ ಹೊಸ ಅಮೆಜಾನ್ ಪ್ರೈಮ್ ವಿಡಿಯೋ ಡೌನ್​ಲೋಡ್​ ಮಾಡಿಕೊಂಡು ಆನ್‌ಲೈನ್‌ ಸ್ಟ್ರೀಮ್ ಬಳಸಿಕೊಂಡು ವಿಡಿಯೋ ವೀಕ್ಷಿಸಬಹುದು, ಅಥವಾ ವಿಡಿಯೋ ಡೌನ್​ಲೋಡ್​ ಮಾಡಿಕೊಂಡು ಆಫ್​ಲೈನ್​ನಲ್ಲೂ ಕೂಡಾ ವೀಕ್ಷಿಸುವ ಅವಕಾಶವಿದೆ.

ಈ ವೈಶಿಷ್ಟ್ಯವು ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿನ ಅಪ್ಲಿಕೇಶನ್ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು ಡೆಸ್ಕ್‌ಟಾಪ್ ಪಿಸಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನೂ ಒಳಗೊಂಡಿದೆ. ಇನ್ನು ಆನ್‌ಲೈನ್ ಸ್ಟ್ರೀಮಿಂಗ್ ಅನುಭವವು ಪ್ರೈಮ್ ವಿಡಿಯೋ ವೆಬ್‌ಸೈಟ್‌ನಲ್ಲಿನ ಪ್ರಸ್ತುತ ಅನುಭವದಂತೆಯೇ ಇರುತ್ತದೆ.

ಗ್ರಾಹಕರು ತಮ್ಮ ವಿಂಡೋಸ್ 10 ಡಿವೈಸ್​ಗಳಲ್ಲಿ, ಮೈಕ್ರೋಸಾಫ್ಟ್ ಸ್ಟೋರ್ ಮೂಲಕ ಪಿಸಿ ಅಪ್ಲಿಕೇಶನ್‌ಗಾಗಿ ಹೊಸ ಅಮೆಜಾನ್ ಪ್ರೈಮ್ ವಿಡಿಯೋ ಪಡೆಯಬಹುದು.

ಇತ್ತೀಚೆಗೆ ಅಮೆಜಾನ್ ಪ್ರೈಮ್ ವಿಡಿಯೋ ವಾಚ್ ಪಾರ್ಟಿ ವೈಶಿಷ್ಟ್ಯವನ್ನು ಪರಿಚಯಿಸಿತು. ಅದು ತನ್ನ ಪ್ರೈಮ್ ಸದಸ್ಯರಿಗೆ ವಿವಿಧ ಸ್ಥಳಗಳಿಂದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಒಟ್ಟಿಗೆ ವೀಕ್ಷಿಸಲು ಅನುವು ಮಾಡಿಕೊಟ್ಟಿತ್ತು. ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ 100 ಸ್ನೇಹಿತರೊಂದಿಗೆ ಚಾಟ್ ಮಾಡಬಹುದಾದ ಹೊಸ ಫೀಚರ್​ನ್ನು ಮಾಡಿಕೊಟ್ಟಿತ್ತು. ಈಗ ವಿಂಡೋಸ್​ಗಳಿಗೆ ಪ್ರೈಮ್​ ನೀಡುವ ಮೂಲಕ ಇನ್ನೊಂದು ಹೆಜ್ಜೆ ಇಟ್ಟಿದೆ ಅಮೆಜಾನ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.