ETV Bharat / lifestyle

ಇನ್ಮುಂದೆ ಟ್ಯಾಟೋ ಬಣ್ಣ ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು.. ಅದ್ಹೇಗೆ?

ವಿಜ್ಞಾನಿಗಳು ಹಚ್ಚೆ ಮೂಲಕ ಆರೋಗ್ಯದಲ್ಲಿನ ಏರಿಳಿತಗಳನ್ನು ಪತ್ತೆಹಚ್ಚುವ ತಂತ್ರವನ್ನು ಕಂಡುಹಿಡಿದಿದ್ದಾರೆ.

author img

By

Published : Aug 5, 2019, 7:01 PM IST

tattoos

ಬರ್ಲಿನ್​( ಜರ್ಮನಿ): ಟ್ಯಾಟೋ ಸದ್ಯ ಯುವ ಜನಾಂಗದ ಕ್ರೇಜ್. ಅಲ್ಲದೇ ತಮಗಿಷ್ಟವಾದ ವ್ಯಕ್ತಿಗಳು, ಸಾಕು ಪ್ರಾಣಿಗಳು, ತಂದೆ-ತಾಯಿ ಹೀಗೆ ನಾನಾ ಬಗೆಯ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಾರೆ. ಈಗ, ವಿಜ್ಞಾನಿಗಳು ಹಚ್ಚೆ ಮೂಲಕ ಆರೋಗ್ಯದಲ್ಲಿನ ಏರಿಳಿತಗಳನ್ನು ಪತ್ತೆಹಚ್ಚುವ ತಂತ್ರವನ್ನು ಕಂಡುಹಿಡಿದಿದ್ದಾರೆ.

ಮ್ಯೂನಿಚ್‌ನ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ರಕ್ತದಲ್ಲಿನ ಬದಲಾವಣೆ ಮೂಲಕ ದೇಹದ ಆರೋಗ್ಯ ಪತ್ತೆ ಹಚ್ಚುವ ದ್ರವವೊಂದನ್ನು ಶೋಧಿಸಿದ್ದಾರೆ. ದೇಹದ ಆರೋಗ್ಯ ಸ್ಥಿತಿ ಕ್ಷೀಣಿಸಿದಾಗ ಬಣ್ಣವನ್ನು ಬದಲಾಯಿಸುವ ದ್ರವದಿಂದ ಹಚ್ಚೆ ಮಾಡುವ ವಿಧಾನ ಅಭಿವೃದ್ಧಿಪಡಿಸಿದ್ದಾರೆ ಎಂದು ಫಾಸ್ಟ್ ಕಂಪನಿ ವರದಿ ಮಾಡಿದೆ.

ಈ ದ್ರವವು ವ್ಯಕ್ತಿಯ ಚಯಾಪಚಯ ವ್ಯವಸ್ಥೆ(metabolic system)ಯ ಅಂಶಗಳೊಂದಿಗೆ ಪ್ರತಿಕ್ರಿಯಿಸುವ ವಿಭಿನ್ನ ಬಣ್ಣಗಳಿಂದ ಮಾಡಲ್ಪಟ್ಟಿದೆ. ಬಣ್ಣ ಬದಲಾಯಿಸುವ ನಡವಳಿಕೆಯನ್ನು ಅಪ್ಲಿಕೇಶನ್ ಬಳಸಿ ಅಳೆಯಲಾಗುತ್ತದೆ. ಉದಾಹರಣೆಗೆ, ಪಿಹೆಚ್​ ಲೆವೆಲ್​ ಹೆಚ್ಚಾದಲ್ಲಿ ಬಣ್ಣವು ಹಳದಿಯಿಂದ ನೀಲಿಗೆ ಬದಲಾಗುತ್ತದೆ. ಗ್ಲೂಕೋಸ್ ಸ್ಪೈಕ್ ಆಗಿದ್ದರೆ, ತಿಳಿ ಹಸಿರು ಬಣ್ಣದಿಂದ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತದೆ. ಈ ತಂತ್ರವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳನ್ನು ಕನಿಷ್ಠ ವೆಚ್ಚದಲ್ಲಿ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Intro:Body:

national

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.