ETV Bharat / jagte-raho

ಪೊಲೀಸ್​ ಕಂಟ್ರೋಲ್​ ರೂಂಗೇ ಬೆತ್ತಲೆ ವಿಡಿಯೋ ಕಳುಹಿಸಿದ ಯುವಕನ ಬಂಧನ - Youth sent obscene video to police control room

ತನ್ನದೇ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿ ಮತ್ಯಾರಿಗೋ ಕಳುಹಿಸಲು ಹೋಗಿ ತಪ್ಪಾಗಿ ಪೊಲೀಸ್​ ಕಂಟ್ರೋಲ್​ ರೂಂಗೆ ಕಳುಹಿಸಿದ ಯುವಕನನ್ನು ಬಂಧಿಸಲಾಗಿದೆ.

Youth sent obscene video to police control room
ಯುವಕನ ಬಂಧನ
author img

By

Published : Jun 22, 2020, 12:37 PM IST

ಕೊಯಮತ್ತೂರು​: ತಮಿಳುನಾಡಿನ ರಾಮನಾಥಪುರಂ ಜಿಲ್ಲಾ ಪೊಲೀಸ್ ಕಂಟ್ರೋಲ್​ ರೂಂನ ವಾಟ್ಸ್​ಆ್ಯಪ್​​​ ನಂಬರ್​ಗೆ ಅಶ್ಲೀಲ ವಿಡಿಯೋ ಕಳುಹಿಸಿದ ಯುವಕನನ್ನು ಬಂಧಿಸಲಾಗಿದೆ.

ಯುವಕನೊಬ್ಬನ ಬೆತ್ತಲೆ ವಿಡಿಯೋವೊಂದನ್ನು ಕಳುಹಿಸಿದ್ದನ್ನು ಕಂಡು ಶಾಕ್​ ಆದ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಸರವನಂಪಟ್ಟಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕೊಯಮತ್ತೂರು ಜಿಲ್ಲೆಯ ಚೆರಣ್ಮಾ ನಗರದ ನಿವಾಸಿ ಪ್ರೇಮ್ ಕುಮಾರ್ ಎಂಬ ಯುವಕನೇ ವಿಡಿಯೋ ಕಳುಹಿಸಿದ್ದು ಎಂಬುದು ತಿಳಿದು ಬಂದಿದೆ.

ವಿಚಿತ್ರ ಎಂದರೆ ಪ್ರೇಮ್ ಕುಮಾರ್​, ತನ್ನದೇ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿ ಮತ್ಯಾರಿಗೋ ಕಳುಹಿಸಲು ಹೋಗಿ ತಪ್ಪಾಗಿ ರಾಮನಾಥಪುರಂ ಪೊಲೀಸ್​ ಕಂಟ್ರೋಲ್​ ರೂಂಗೆ ಕಳುಹಿಸಿಬಿಟ್ಟಿದ್ದಾನೆ. ಸದ್ಯ ಯುವಕ ಐಟಿ ಕಾಯ್ದೆಯಡಿ ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.