ETV Bharat / jagte-raho

ಇನ್​ಸ್ಟಾಗ್ರಾಂನಲ್ಲಿ ಯುವತಿಗೆ ಪ್ರೇಮ ನಿವೇದನೆ: ರಿಜೆಕ್ಟ್​ ಮಾಡಿದ್ದಕ್ಕೆ ಯುವಕ ಆತ್ಮಹತ್ಯೆ - ಇನ್​ಸ್ಟಾಗ್ರಾಂನಲ್ಲಿ ಪ್ರೇಮ ನಿವೇದನೆ

ಇನ್​ಸ್ಟಾಗ್ರಾಂನಲ್ಲಿ ಫೋಟೋ ಕೂಡ ಅಪ್​ಲೋಡ್​ ಮಾಡಿರದ ಯುವತಿ ಮೇಲೆ ಪ್ರೀತಿಯಾಗಿದ್ದ ಯುವಕನೋರ್ವ ಆಕೆ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದಳೆಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Youth commits suicide
ಮೃತ ಆನಂದ್​ ಕುಮಾರ್
author img

By

Published : May 28, 2020, 6:50 PM IST

ತಿರುಚಿರಾಪಳ್ಳಿ(ತಮಿಳುನಾಡು): ಇನ್​ಸ್ಟಾಗ್ರಾಂನಲ್ಲಿ ಪ್ರೇಮ ನಿವೇದನೆಯನ್ನು ರಿಜೆಕ್ಟ್​ ಮಾಡಿದ್ದಕ್ಕೆ 23 ವರ್ಷದ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ನಡೆದಿದೆ.

ಮೃತ ಆನಂದ್​ ಕುಮಾರ್​ ಸೇಲಂನಲ್ಲಿ ಖಾಸಗಿ ಬ್ಯಾಂಕ್​ವೊಂದರ ಎಟಿಎಂಗೆ ಹಣ ತುಂಬುವ ಸಿಬ್ಬಂದಿಯಾಗಿದ್ದು, ಲಾಕ್​ಡೌನ್​ನಿಂದಾಗಿ ಕಳೆದೆರಡು ತಿಂಗಳಿನಿಂದ ತಿರುಚಿರಾಪಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ. ಇನ್​ಸ್ಟಾಗ್ರಾಂನಲ್ಲಿ ಫೋಟೋ ಕೂಡ ಅಪ್​ಲೋಡ್​ ಮಾಡಿರದ ಯುವತಿ ಮೇಲೆ ಆನಂದ್​ಗೆ ಪ್ರೀತಿಯಾಗಿತ್ತು. ಆದರೆ ಈತನ ಪ್ರೇಮ ನಿವೇದನೆಯನ್ನು ಆಕೆ ತಿರಸ್ಕರಿಸಿದ್ದಳು. ಬಳಿಕ ಆಕೆಯ ಖಾತೆಯನ್ನು ಬ್ಲಾಕ್​ ಮಾಡಿದ್ದನು. ಈ ಬೇಸರದಿಂದ ಹೊರಬರಲಾಗದೆ ಆನಂದ್​, ಸಂಬಂಧಿಕರ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ತಿರುವೆರುಂಬೂರ್ ಪೊಲೀಸ್​​ ಇನ್ಸ್​ಪೆಕ್ಟರ್​ ಜ್ಞಾನವೇಲನ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.