ETV Bharat / jagte-raho

ನಾಪತ್ತೆಯಾದ ಯುವಕ ಕೊಲೆಯಾದನಾ? ಶಂಕೆ ವ್ಯಕ್ತಪಡಿಸಿದ ಸಹೋದರ - Missing

ಯುವಕನೋರ್ವ ನಾಪತ್ತೆಯಾಗಿದ್ದು ಆತ ಬಿಟ್ಟು ಹೋದ ಬೈಕ್​ ಬಳಿ ರಕ್ತದ ಕಲೆಗಳು ಕಂಡು ಬಂದಿವೆ. ಹಾಗಾಗಿ ಈತನ ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ನಾಪತ್ತೆಯಾದ ಹೊಸಮನೆ ನಿವಾಸಿ ವಿನಯ್
author img

By

Published : Apr 9, 2019, 1:28 PM IST

ಶಿವಮೊಗ್ಗ: ನಗರದ ನಿವಾಸಿಯೊಬ್ಬ ಕಳೆದ ರಾತ್ರಿ ನಾಪತ್ತೆಯಾಗಿದ್ದು ಆತ ಬಿಟ್ಟು ಹೋದ ಬೈಕ್​ ಬಳಿ ರಕ್ತದ ಕಲೆಗಳು ಪತ್ತೆಯಾಗಿದೆ. ಹೊಸಮನೆ ನಿವಾಸಿ ವಿನಯ್ ಎಂಬುವನು ಕಾಣೆಯಾಗಿದ್ದು ಈ ಬಗ್ಗೆ ಇಲ್ಲಿನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಬೆಳಿಗ್ಗೆ ಜಯನಗರ ಪೊಲೀಸ್​ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿರುವ ವಿನಯ್ ಸಹೋದರ ರವಿ, ನನ್ನ ಅಣ್ಣ ಕಾಣೆಯಾದ ಸ್ಥಳದಲ್ಲಿ ಆತನ ಬೈಕ್​ ಪತ್ತೆಯಾಗಿದೆ. ಅಲ್ಲದೆ ಸ್ಥಳದಲ್ಲಿ ರಕ್ತ ಬಿದ್ದಿದ್ದು ರೌಡಿ ಶೀಟರ್​ ಕಡ್ಡಿ ಮಧು ಎಂಬಾತ ಕೊಲೆ ಮಾಡಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ತೀವ್ರ ಶೋಧ ನಡೆಸುತ್ತಿದ್ದಾರೆ. ಕಡ್ಡಿ ಮಧು ಹಾಗೂ ವಿನಯ್ ಹೊಸಮನೆ ನಿವಾಸಿಗರಾಗಿದ್ದು ಇಬ್ಬರು ಸ್ನೇಹಿತರಾಗಿದ್ದರು. ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಕೊಲೆಗೆ ಕಾರಣವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ

Intro:
ಶಿವಮೊಗ್ಗ: ಇಂದು ಬೆಳ್ಳಗಿನ ಜಾವ ಜಯನಗರ ಪೊಲೀಸ್ ಠಾಣೆಯಲ್ಲಿ ಒಂದು ಮಿಸ್ಸಿಂಗ್ ಕಂಪ್ಲೇಟ್ ದಾಖಲಾಗಿದೆ. ಹೊಸಮನೆ ನಿವಾಸಿ ವಿನಯ್ ಎಂಬ ಯುವಕ ಕಾಣೆಯಾಗಿದ್ದಾನೆ ಎಂದು ದೂರು‌ ದಾಖಲಾಗಿದೆ.Body:ವಿನಯ್ ನಿನ್ನೆ ರಾತ್ರಿ ವೆಂಕಟೇಶ್ ನಗರದ ಬಳಿ ಬರುವಾಗ ಕಾಣೆಯಾಗಿದ್ದಾನೆ ಎನ್ನಲಾಗಿದೆ. ವಿನಯ್ ಕಾಣೆಯಾಗಿದ್ದಾನೆ ಆದ್ರೆ ಆತನ ಬಜಾಜ್ ಅವೇಜರ್ ಬೈಕ್ ಕಾಣೆಯಾದ ಜಾಗದಲ್ಲಿ ಪತ್ತೆಯಾಗಿದೆ. Conclusion: ತನ್ನ ಅಣ್ಣನನ್ನು ರೌಡಿ ಶೀಟರ್ ಕಡ್ಡಿ ಮಧು ಕೊಲೆ ಮಾಡಿರುವ ಶಂಕೆ ಇದೆ ಎಂಬ ಅನುಮಾನ ವಿನಯ್ ತಮ್ಮ ರವಿ ಪೊಲೀಸ್ ದೂರು ನೀಡಿದ್ದಾನೆ. ವಿನಯ್ ಬೈಕ್ ಪತ್ತೆಯಾದ ಜಾಗದಲ್ಲಿ ಸಾಕಷ್ಟು ರಕ್ತ ಬಿದ್ದಿದ್ದು, ವಿನಯ್ ನನ್ನು ಕೊಲೆ ಮಾಡಿ ಕಡ್ಡಿ ಮಧು ಶವವನ್ನು ಬೇರೆ ಕಡೆ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕಡ್ಡಿ ಮಧು ಹಾಗೂ ವಿನಯ್ ಇಬ್ಬರು ಸಹ ಹೊಸಮನೆ ಬಡಾವಣೆಯಾವರಾಗಿದ್ದು, ಇಬ್ಬರು ಆತ್ಮೀಶಿವಮೊಗ್ಯ ಸ್ನೇಹಿತರಾಗಿದ್ಧರು. ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಕೊಲೆಗೆ ಕಾರಣವಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.