ETV Bharat / jagte-raho

ಶಾಲೆಯಲ್ಲಿ ತಂಗಿದ್ದ ಮಹಿಳೆ ಮೇಲೆ ಕಾಮುಕರಿಂದ ಗ್ಯಾಂಗ್​ ರೇಪ್​!

ಲಾಕ್​ಡೌನ್​ನಿಂದಾಗಿ ಸರ್ಕಾರಿ ಶಾಲೆಯ ಆವರಣದಲ್ಲಿ ತಂಗಿದ್ದ ಜೈಪುರ ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.

Woman 'gang-raped' in Rajasthan
ಲಾಕ್​ಡೌನ್​ನಿಂದಾಗಿ ಶಾಲೆಯಲ್ಲಿ ತಂಗಿದ್ದ ಮಹಿಳೆ ಮೇಲೆ ಗ್ಯಾಂಗ್​ ರೇಪ್​
author img

By

Published : Apr 25, 2020, 6:12 PM IST

ರಾಜಸ್ಥಾನ​: ಲಾಕ್​ಡೌನ್​ನಿಂದಾಗಿ ಸರ್ಕಾರಿ ಶಾಲೆಯ ಆವರಣದಲ್ಲಿ ತಂಗಿದ್ದ 40 ವರ್ಷದ ಮಹಿಳೆಯನ್ನೂ ಬಿಡದ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ನಡೆದಿದೆ.

ಜೈಪುರದ ಮೂಲದ ಸಂತ್ರಸ್ತೆ ಲಾಕ್​ಡೌನ್​ನಿಂದಾಗಿ ಕಳೆದ ಒಂದು ತಿಂಗಳಿನಿಂದ ಸವಾಯಿ ಮಾಧೋಪುರದಲ್ಲಿ ಸಿಲುಕಿಕೊಂಡಿದ್ದು, ತನ್ನೂರಿಗೆ ಕಾಲ್ನಡಿಗೆ ಮೂಲಕ ತೆರಳಲು ನಿರ್ಧರಿಸಿದ್ದಾಳೆ. ಈ ವೇಳೆ, ಶಾಲೆಯ ಆವರಣದಲ್ಲಿ ವಿಶ್ರಾಂತಿ ಪಡೆಯಲು ತಂಗಿದ್ದು, ಗುರುವಾರ ರಾತ್ರಿ ಮೂವರು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಡಿಎಸ್ಪಿ ಪಾರ್ಥ ಶರ್ಮಾ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆ ನೀಡಿದ ಹೇಳಿಕೆಯನ್ನು ರೆಕಾರ್ಡ್​ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳನ್ನು ಬಂಧಿಸಿರುವ ಬಟೋಡ್ ಠಾಣಾ ಪೊಲೀಸರು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.