ಪಾಲಕ್ಕಾಡ್ (ಕೇರಳ): ಪಾಲಕ್ಕಾಡ್‌ನ ನೆಲ್ಲಿಯಂಪತಿಯಲ್ಲಿರುವ ವಿಕ್ಟೋರಿಯಾ ಜಲಪಾತಕ್ಕೆ ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ತಮಿಳುನಾಡಿನ ತಿರುಪುರ ಮೂಲದ ಕೃಪೇಶ್ (22) ಹಾಗೂ ಕೃಪಾದರ್ (22) ಎಂದು ಗುರುತಿಸಲಾಗಿದೆ. ಐವರು ಸ್ನೇಹಿತರು ಜಲಪಾತಕ್ಕೆ ತೆರಳಿದ್ದು, ಇವರಲ್ಲಿ ಒಬ್ಬ ಮೀನು ಹಿಡಿಯಲೆಂದು ಹೋಗಿ ಹೂಳಿನಲ್ಲಿ ಸಿಲುಕಿದ್ದಾನೆ. ಈತನನ್ನು ರಕ್ಷಿಸಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಮಣ್ಣಿನಲ್ಲಿ ಸಿಲುಕಿದ್ದವನನ್ನು ರಕ್ಷಿಸಿ, ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಪ್ರೇಯಸಿಯನ್ನು ಕೊಂದು ಫ್ಲಾಟ್ನ ಗೋಡೆಯಲ್ಲಿ ಶವ ಅಡಗಿಸಿಟ್ಟಿದ್ದ ಭೂಪ: ಮುಂದೇನಾಯ್ತು?
ಇಂದು ಬೆಳಗ್ಗೆ 11.30ರ ಸುಮಾರಿಗೆ ಘಟನೆ ನಡೆದಿದ್ದು, ಮಧ್ಯಾಹ್ನ 2 ಗಂಟೆಗೆ ಯುವಕರ ಮೃತದೇಹಗಳು ಸಿಕ್ಕಿವೆ. ಕೆಲ ದಿನಗಳ ಹಿಂದೆ ಪ್ರವಾಸಿಗನೋರ್ವ ಇದೇ ಫಾಲ್ಸ್ನಲ್ಲಿ ಮುಳುಗಿ ಮೃತಪಟ್ಟಿದ್ದನು.