ETV Bharat / jagte-raho

ಪೊಲೀಸರ ಹೆಸರಲ್ಲಿ ವಾಹನ ಸವಾರರಿಂದ ಹಣ ವಸೂಲಿ: ಇಬ್ಬರು ಆರೋಪಿಗಳ ಬಂಧನ

ವಾಹನ ಸವಾರರಿಂದ ಪೊಲೀಸರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿ ಆಗಿದ್ದಾನೆ.

author img

By

Published : May 13, 2020, 11:00 PM IST

two fake police arrested in davanagere
ಪೊಲೀಸರ ಹೆಸರಲ್ಲಿ ವಾಹನ ಸವಾರರಿಂದ ಹಣ ವಸೂಲಿ, ಇಬ್ಬರು ಆರೋಪಿಗಳ ಬಂಧನ

ದಾವಣಗೆರೆ: ವಾಹನ ಸವಾರರಿಂದ ಪೊಲೀಸರ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಅಗ್ನಿಶಾಮಕ ದಳದ ನೌಕರ ಸೇರಿದಂತೆ ಇಬ್ಬರು ಆರೋಪಿಗಳನ್ನು ಜಗಳೂರು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪರಾರಿ ಆಗಿದ್ದಾನೆ.

ಬಂಧಿತ ಆರೋಪಿಗಳನ್ನು ಕೂಡ್ಲಿಗಿ ತಾಲೂಕಿನ ಉಜ್ಜನಿ ಗ್ರಾಮದ ಅಗ್ನಿಶಾಮಕ ದಳದ ನೌಕರ ಸಿದ್ದೇಶ್, ಚಿಕ್ಕಮ್ಮನಹಟ್ಟಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದೆ. ಕೂಡ್ಲಿಗಿ ತಾಲೂಕಿನ ಮತ್ತೊಬ್ಬ ಆರೋಪಿ ಪ್ರಕಾಶ್ ಎಂಬಾತ ಪರಾರಿಯಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಕೊಟ್ಟೂರು ರಸ್ತೆಯ ಗಡಿಗ್ರಾಮ ಚಿಕ್ಕ ಉಜ್ಜನಿ ಸಮೀಪ ವಾಹನಗಳಲ್ಲಿ ಓಡಾಡುತ್ತಿದ್ದ ಸವಾರರನ್ನು ಅಡ್ಡಗಟ್ಟಿ ಪಾಸ್ ತೋರಿಸುವಂತೆ ಹೆದರಿಸುತ್ತಿದ್ದರು.

ಪಾಸ್ ಇಲ್ಲದಿದ್ದರೆ ಹಣ ನೀಡಬೇಕು. ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಪೊಲೀಸರ ಹೆಸರಿನಲ್ಲಿ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ವಾಹನ ಸವಾರರು ಹಾಗೂ ಕಾರು ಚಾಲಕರು ಜಗಳೂರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ದುರುಗಪ್ಪ, ಎಸ್​ಐ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.