ಚಾಮರಾಜನಗರ: ನರಹಂತಕ ಹುಲಿರಾಯನ ಸೆರೆ ಬಳಿಕ ನಿಟ್ಟುಸಿರು ಬಿಟ್ಟಿದ್ದ ಹುಂಡಿಪುರ, ಚೌಡಹಳ್ಳಿ ಗ್ರಾಮಸ್ಥರಿಗೆ ಮತ್ತೆ ಹುಲಿ ಭಯ ಶುರುವಾಗಿದೆ.
ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಎಂಬುವರ ಎರಡು ಹಸುಗಳನ್ನು ಇಂದು ಮಧ್ಯಾಹ್ನ ಹುಲಿಯೊಂದು ಕೊಂದು ಹಾಕಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಶಿವಮಾದಯ್ಯರ ಮಗ ಜಗದೀಶ್ ಎಂಬಾತ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ದಾಳಿ ನಡೆಸಿ, ಎರಡು ಹಸುಗಳನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಇದು ಹುಲಿಯದ್ದೇ ದಾಳಿ ಎಂದು ದೃಢಪಡಿಸಿದ್ದಾರೆ.
ಇನ್ನು ಹುಲಿಯ ಚಲನ-ವಲನ ಅರಿಯಲು ಅರಣ್ಯ ಇಲಾಖೆ ಮಾಲಿಂಗಶೆಟ್ಟಿ ಎಂಬುವರ ಜಮೀನಿನಲ್ಲಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದು, ಹುಲಿರಾಯ ಮತ್ತೇ ಗ್ರಾಮಸ್ಥರ ನಿದ್ರೆ ಕೆಡಿಸಿದ್ದಾನೆ.