ವಿಜಯಪುರ: ಈಜು ಬಾರದೆ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಬಸವನಬಾಗೇವಾಡಿ ತಾಲೂಕಿನ ತಳೇವಾಡ ಗ್ರಾಮದಲ್ಲಿ ನಡೆದಿದೆ.
ಸುದೀಪ್ (10) ಹಾಗೂ ಮಾಳಪ್ಪ ಮೃತ ಬಾಲಕರು. ಇವರಿಬ್ಬರು ಕೆರೆಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ. ಇಂದು ಸಂಜೆ ಮೃತದೇಹಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.
ಈ ಕುರಿತು ಕೂಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.