ETV Bharat / jagte-raho

ಕಬಿನಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು! - Two boys died news

ಈಜು ಬಾರದೆ ಇಬ್ಬರು ಬಾಲಕರು ಕಬಿನಿ ಹಿನ್ನೀರಿನಲ್ಲಿ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ.

ಈಜು ಬಾರದೆ ನೀರುಪಾಲಾದ ಇಬ್ಬರು ಬಾಲಕರು
ಈಜು ಬಾರದೆ ನೀರುಪಾಲಾದ ಇಬ್ಬರು ಬಾಲಕರು
author img

By

Published : Apr 19, 2020, 5:51 PM IST

ಮೈಸೂರು: ಕಬಿನಿ ಹಿನ್ನೀರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಚಂದು (17) ಹಾಗೂ ಸಿದ್ದರಾಜು (15) ಮೃತಪಟ್ಟ ಬಾಲಕರು. ಶನಿವಾರ ಸಂಜೆ 6 ಮಂದಿ ಅಪ್ರಾಪ್ತರು ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಚಂದು ಹಾಗೂ ಸಿದ್ದರಾಜು ಎಂಬ ಬಾಲಕರು ಸುಳಿಯಲ್ಲಿ ಸಿಲುಕಿ ಹೊರ ಬರಲಾರದೆ ಅಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಬಾಲಕರು ದಡ ಸೇರಿ, ಇಬ್ಬರು ಸ್ನೇಹಿತರು ದಡ ಸೇರುತ್ತಾರೆ ಎಂದು ಕಾದು ಕುಳಿತಿದ್ದರು. ಆದರೆ ಇಬ್ಬರೂ ಹೊರ ಬರದೆ ಇದ್ದಾಗ ಆತಂಕಗೊಂಡ ಈ ನಾಲ್ವರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೋಷಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಇಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಮೀನುಗಾರರ ಸಹಾಯದಿಂದ ಅಪ್ರಾಪ್ತ ಬಾಲಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಈ ವೇಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಪೋಷಕರಿಗೆ ನೀಡಲಾಯಿತು. ಈ ಸಂಬಂಧ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.