ETV Bharat / jagte-raho

ಬೀದರ್: ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ, 35 ಕೆ.ಜಿ. ಗಾಂಜಾ ವಶ - Marijuana Seized in Bidar

ಔರಾದ್ ತಾಲೂಕಿನ ಚಿಂತಾಕಿ- ಕಂಗಟಿ ರಸ್ತೆಯಲ್ಲಿ 35 ಕೆ.ಜಿ ಗಾಂಜಾ ಇರಿಸಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ತೆಲಂಗಾಣ ಮೂಲದ ಪರಶುರಾಮ್ ಜಾಧವ್, ಅಶೋಕ್ ರಾಠೋಡ್ ಹಾಗೂ ನಾಮದೇವ್ ಜಾಧವ್ ಎಂಬುವವರನ್ನು ಬಂಧಿಸಲಾಗಿದೆ.

marijuana trafficking
ಗಾಂಜಾ ಸಾಗಣೆ
author img

By

Published : Dec 11, 2020, 4:08 AM IST

ಬೀದರ್: ರಾಜ್ಯದ ಗಡಿ ಮೂಲಕ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ತೆಲಂಗಾಣ ಮೂಲದ ಜಾಲವೊಂದನ್ನು ಭೇದಿಸಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 4.25 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಔರಾದ್ ತಾಲೂಕಿನ ಚಿಂತಾಕಿ- ಕಂಗಟಿ ರಸ್ತೆಯಲ್ಲಿ 35 ಕೆ.ಜಿ ಗಾಂಜಾ ಇರಿಸಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ತೆಲಂಗಾಣ ಮೂಲದ ಪರಶುರಾಮ್ ಜಾಧವ್, ಅಶೋಕ್ ರಾಠೋಡ್ ಹಾಗೂ ನಾಮದೇವ್ ಜಾಧವ್ ಎಂಬುವವರನ್ನು ಬಂಧಿಸಲಾಗಿದೆ.

ಮಕ್ಕಳಿಗೆ ವಿಷ ಉಣಿಸಿ ಹೈಡ್ರಾಮಾ ಮಾಡಿದ್ದ ಪಾಪಿ ತಾಯಿ ಕೊನೆಗೂ ಸೆರೆ!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್​ ನಾಗೇಶ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್ ಮಾರ್ಗದರ್ಶನದಲ್ಲಿ ಭಾಲ್ಕಿ ಡಿವೈಎಸ್ ಪಿ ಡಾ. ಬಿ ದೇವರಾಜ್ ನೇತೃತ್ವದಲ್ಲಿ ಪಿಎಸ್​​ಐಗಳಾದ ಪ್ರಭಾಕರ ಪಾಟೀಲ್ ಹಾಗೂ ಸುವರ್ಣ ಅವರಿದ್ದ ತಂಡ ದಾಳಿ ನಡೆಸಿದೆ. ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.