ETV Bharat / jagte-raho

ಹಬ್ಬಗಳ ದಿನವೇ ಮನೆಗಳಿಗೆ ಕನ್ನ, ಆರೋಪಿ ಅರೆಸ್ಟ್ - Banasavadi Police station

ಹಬ್ಬದ ದಿನಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳನ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೋರ್ವನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಖದೀಮನ ಹೆಡೆಮುರಿಕಟ್ಟಿದ ಪೊಲೀಸರು
author img

By

Published : Nov 15, 2019, 5:03 PM IST

ಬೆಂಗಳೂರು: ಹಬ್ಬದ ದಿನಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳನ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿಯೋರ್ವನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಕಮಲ್ ಸಿಂಗ್ (28) ಬಂಧಿತ ಆರೋಪಿ.

ಈತ ಹಬ್ಬದ ಸಂದರ್ಭಗಳಲ್ಲಿ ತಮ್ಮ ಊರಿಗೆ ತೆರಳುವ ಜನರನ್ನು ಗಮನಿಸಿ ಅವರ ಮನೆ ಕಿಟಿಕಿ ಕಿತ್ತು ಒಳಪ್ರವೇಶಿಸಿ ಕಳ್ಳತನ ಮಾಡುತ್ತಿದ್ದನಂತೆ. ಕಳೆದ 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಈತ, ಹೋಟೆಲ್‌​ನಲ್ಲಿ ಕೆಲಸ ಹಾಗೂ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ. ಆದರೆ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಈ ರೀತಿ ಕಳ್ಳತನ ಮಾಡುತ್ತಿದ್ದ ಎಂದು ತನಿಖೆ ವೇಳೆ ಆತ ಬಾಯಿ ಬಿಟ್ಟಿದ್ದಾನೆ.

ಚಿನ್ನಾಭರಣ ಕಳೆದುಕೊಂಡ ಜನರು ಬಾಣಸವಾಡಿ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಸದ್ಯ ಬಂಧಿತನಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿಸಿದ್ದಾರೆ.

Intro:ಹಬ್ಬದ ದಿನವೇ ಮನೆಗಳಿಗೆ ಮುಹೂರ್ತ
ಇದೀಗ ಪೊಲೀಸರ ವಶಕ್ಕೆ ಆರೋಪಿ

ಹಬ್ಬದ ದಿನವೇ ಮನೆಗಳಿಗೆ ಮುಹೂರ್ತ ಇಟ್ಟು ಮನೆ ಕಳ್ಳತನ ಮಾಡುತ್ತಿದ್ದ ನೇಪಾಳಿ ಪ್ರಜೆ ಬಂಧನ ಮಾಡುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕಮಲ್ ಸಿಂಗ್ (೨೮) ಬಂಧಿತ ಆರೋಪಿ

ಈತ ಬಾಣಸಾವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುತ್ತಾ ಮುತ್ತ
ಹಬ್ಬದ ದಿನ ಊರಿಗೆ ಹೋಗೋರ ಮನೆಗಳನ್ನು ಟಾರ್ಗೆಟ್ ಮಾಡಿ
ಮನೆಯ ಕಿಟಕಿ ಕಿತ್ತು ಎಂಟ್ರಿಕೊಡ್ತಿದ್ದ. ನಂತ್ರ ಸಿಕ್ಕ ಸಿಕ್ಕಿದನ್ನ ದೋಚಿ ಎಸ್ಕೇಪ್ ಆಗ್ತಿದ್ದ. ಈತ ೯ ವರ್ಷ ಗಳ ಹಿಂದೆ ಬೆಂಗಳೂರಿಗೆ ಬಂದು
ಹೋಟೆಲ್ ನಲ್ಲಿ ಹಾಗೂ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತ
ಸಮಯ ಸಿಕ್ಕಾಗಲೆಲ್ಲ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಈ ರೀತಿ ಮಾಡ್ತಿದ್ದ.

ಹೀಗಾಗಿ ಹಣ ಚಿನ್ನಾಭರಣ ಕಳೆದು ಕೊಂಡವರು ಬಾಣಸ್ವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಬಂಧಿತ ಆರೋಪಿ ಮಹಾರಾಷ್ಟ್ರದಲ್ಲೂ ಕಳ್ಳತನ ಮಾಡಿ ಜೈಲು ಸೇರಿ ನಂತ್ರ‌ಬಿಡುಗಡೆಯಾಗಿ ಬೆಂಗಳೂರಿಗೆ ಬಂದು ಇಲ್ಲಿ ಯಾರ ಕೈಗು ಸಿಗೋದಿಲ್ಲ ಅನ್ನೊಂಡು ಕಳ್ಳತನಕ್ಕೆ ಇಳಿದಿದ್ದಾನೆ‌ . ಆದ್ರೆ ಬಾಣಸ್ವಾಡಿ ಪೊಲೀಸರು ಆರೋಪಿಯ ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತನಿಂದ ೩೫ ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿ ತನಿಖೆ ಮುಂದುವರೆಸಿದ್ದಾರೆBody:KN_BNG_06_THEFT_AREST_7204498Conclusion:KN_BNG_06_THEFT_AREST_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.