ಬೆಂಗಳೂರು: ಪೆಪ್ಪರ್ ಸ್ಪ್ರೇ ಬಳಸಿ 15 ಲಕ್ಷ ದರೋಡೆ ಮಾಡಿದ್ದ ಆಫ್ರಿಕಾದ ಇಬ್ಬರು ಪ್ರಜೆಗಳನ್ನ ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಯಾಂಗ್ ಲೂಯಿಸ್ ಮತ್ತು ಆಕ್ರೋಮಾನ್ ಬಪಿಸ್ಟ್ ಬಂಧಿತರು.
ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಅಪ್ಪಲ್ ನಾಯ್ಡು ಖಾಸಗಿ ಕಂಪನಿ ಮಾಲೀಕರಾಗಿದ್ದು, ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ಇತ್ತೀಚೆಗೆ ನಾಯ್ಡು ಅವರ ಮೊಬೈಲ್ಗೆ ಸೆಕೆಂಡ್ ಹ್ಯಾಂಡ್ ಲ್ಯಾಪ್ಟಾಪ್ ಸಿಗುತ್ತೆ ಎಂಬ ಮೆಸೇಜ್ ಬಂದಿದೆ. ಆ ನಂಬರ್ಗೆ ಕರೆ ಮಾಡಿದ್ದ ನಾಯ್ಡು ಹೋಟೆಲ್ವೊಂದರಲ್ಲಿ ಮೀಟ್ ಮಾಡಿ ಮಾತುಕತೆ ನಡೆಸುವ ಪ್ಲಾನ್ ಮಾಡಿದ್ದಾರೆ.
ಆದ್ರೆ ಈ ವೇಳೆ ಆಫ್ರಿಕನ್ನರು ಭೇಟಿಯಾಗಿ ಲ್ಯಾಪ್ಟಾಪ್ ಬದಲು ಖೋಟಾನೋಟಿನ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅಪ್ಪಲ್ ನಾಯ್ಡು ಹೇಗಾದರು ಮಾಡಿ ಆರೋಪಿಗಳನ್ನ ಪೊಲೀಸರಿಗೆ ಹಿಡಿದುಕೊಡಬೇಕೆಂಬ ಉದ್ದೇಶದಿಂದ ಮತ್ತೆ ನಕಲಿ ನೋಟು ಖರೀದಿ ಮಾಡುವುದಾಗಿ ತಿಳಿಸಿ ಹಣ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಪ್ಪಲ್ ನಾಯ್ಡು ಪೊಲೀಸರಿಗೆ ಕರೆ ಮಾಡಲು ಹೋದಾಗ ಪೆಪ್ಪರ್ ಸ್ಪ್ರೇ ಹೊಡೆದು ಹಣ ಲೂಟಿ ಮಾಡಿ ಎಸ್ಕೇಪ್ ಆಗಿದ್ರು. ನಂತರ ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸದ್ಯ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಖೋಟಾನೋಟು ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.