ಕೊಡಗು/ಸೋಮವಾರಪೇಟೆ: ಯುವಕನ ಮೃತದೇಹವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಎಳನೀರು ಗುಂಡಿಯ ಕುರುಡುವಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕುರುಡುವಳ್ಳಿ ಗ್ರಾಮದ ಅವಿನಾಶ್(21) ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ ಯುವಕ. ಎಳನೀರುಗುಂಡಿ ಅರಣ್ಯಕ್ಕೆ ಹೊಂದಿಕೊಂಡಂತಿರುವ ಅರಣ್ಯದೊಳಗೆ ಅವಿನಾಶ್ ಶವ ಪತ್ತೆಯಾಗಿದೆ. ಈತ ಕೇಬಲ್ ಕೆಲಸಕ್ಕೆ ಹೊಗಿ ಮನೆಗೆ ಬಂದಿರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಅರಣ್ಯದಲ್ಲಿ ಶವ ಪತ್ತೆಯಾಗಿದೆ.
![the-body-of-a-young-man-was-found-in-a-hanging-state](https://etvbharatimages.akamaized.net/etvbharat/prod-images/6259807_thumbn.png)