ETV Bharat / jagte-raho

ಸುಶಾಂತ್​ ಡೆತ್​ ಕೇಸ್​: ಎನ್​​ಸಿಬಿ ದಾಳಿಯಲ್ಲಿ 6 ಮಂದಿ ಡ್ರಗ್​ ಪೆಡ್ಲರ್ಸ್​ ಅರೆಸ್ಟ್​ - drug peddlers

ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್​ ಅರೆಸ್ಟ್​ ಬಳಿಕ, ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಎನ್​ಸಿಬಿ, ಆರು ಮಂದಿ ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಿದೆ.

Six drug peddlers arrested so far in NCB raids
ಡ್ರಗ್​ ಪೆಡ್ಲರ್​ಗಳು ಅರೆಸ್ಟ್​
author img

By

Published : Sep 14, 2020, 11:37 AM IST

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದೆ. ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಆರು ಡ್ರಗ್​ ಪೆಡ್ಲರ್​ಗಳನ್ನು ಎನ್​ಸಿಬಿ ಬಂಧಿಸಿದೆ.

ನಟಿ ರಿಯಾ ಚಕ್ರವರ್ತಿ ಹಾಗೂ ಸಹೋದರ ಶೋವಿಕ್ ಚಕ್ರವರ್ತಿ​ ಅರೆಸ್ಟ್​ ಬಳಿಕ, ಡ್ರಗ್ಸ್ ಲಿಂಕ್ ಕುರಿತ ತನಿಖೆ ಸಂಬಂಧ ಮುಂಬೈನ ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ದಾಳಿ ನಡೆಸಿದೆ. ಮುಂಬೈನ ರಿಕ್ಷಾ ಚಾಲಕನಿಂದ ಹಿಡಿದು ಐಷಾರಾಮಿ ರೆಸ್ಟೋರೆಂಟ್ ಮಾಲೀಕನನ್ನು ಎನ್​ಸಿಬಿ ಬಂಧಿಸಿದೆ. ಕರಮ್‌ಜೀತ್ ಸಿಂಗ್ ಆನಂದ್, ಡ್ವೇನ್ ಫರ್ನಾಂಡಿಸ್, ಸಂಕೇತ್ ಪಟೇಲ್, ಅಂಕುಶ್ ಅರ್ನೆಜಾ, ಸಂದೀಪ್ ಗುಪ್ತಾ ಮತ್ತು ಫತೇ ಅನ್ಸಾರಿ ಬಂಧಿತ ಆರು ಮಂದಿ ಡ್ರಗ್​ ಪೆಡ್ಲರ್​ಗಳು.

ಸತತ 3 ದಿನಗಳ ಕಾಲ ಎನ್‌ಸಿಬಿ ವಿಚಾರಣೆಯಲ್ಲಿ ನಟಿ ರಿಯಾ ಚಕ್ರವರ್ತಿ ಕೆಲವು ಪ್ರಸಿದ್ಧ ನಟ-ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರ ಹೆಸರನ್ನು ಹೇಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಶೀಘ್ರದಲ್ಲೇ ಇವರೆಲ್ಲರನ್ನೂ ಎನ್​​ಸಿಬಿ ವಿಚಾರಣೆಗೆ ಕರೆಸಿಕೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.