ನೆಲಮಂಗಲ: ತೆರಿಗೆ ವಂಚಿಸುವ ಉದ್ದೇಶದಿಂದ ಒಂದೇ ನೋಂದಣಿ ನಂಬರ್ ಪ್ಲೇಟ್ನಲ್ಲಿ ಎರಡು ಬಸ್ ಓಡಿಸುತ್ತಿದ್ದವರನ್ನು ಆರ್ಟಿಓ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರು ನಿರೀಕ್ಷಕ ಡಾ. ಧನ್ವಂತರಿ ಒಡೆಯರ್ ಮಂಜುನಾಥ್ ನೇತೃತ್ವದಲ್ಲಿ ಆರ್ಟಿಓ ಸಿಬ್ಬಂದಿ ವಾಹನಗಳ ತಪಾಸಣೆ ಕಾರ್ಯಚರಣೆ ನಡೆಸುತ್ತಿದ್ದರು. ಈ ವೇಳೆ ಮಾಗಡಿ ರಸ್ತೆಯಲ್ಲಿ ಒಂದು ಬಸ್ ಹಾಗೂ ತಾಲೂಕಿನ ಬಸವೇನಹಳ್ಳಿ ಬಳಿ ಮತ್ತೊಂದು ಬಸ್ ವಶಕ್ಕೆ ಪಡೆದಿದ್ದಾರೆ.
ಈ ಎರಡು ಬಸ್ಗಳ ನೋಂದಣಿ ನಂಬರ್ ಒಂದೇ ಆಗಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಕೆಎ 16ಎ 7159 ನೋಂದಣಿ ಸಂಖ್ಯೆಯ ಎರಡೂ ಬಸ್ಗಳು ಆರ್ಟಿಓ ಸಿಬ್ಬಂದಿಯ ವಶದಲ್ಲಿವೆ. ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಮಾಗದರ್ಶನದಲ್ಲಿ ದಾಳಿ ನಡೆಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಬಸ್ ಮಾಲೀಕರು ಸರ್ಕಾರಕ್ಕೆ ತೆರಿಗೆ ವಂಚಿಸುವ ಉದ್ದೇಶದಿಂದ ಒಂದೇ ನಂಬರ್‌ನಲ್ಲಿ ಎರಡು ಬಸ್ಗಳನ್ನು ಓಡಿಸುತ್ತಾರೆ. ಇಂತಹ ವಂಚರ ಮೇಲೆ ಕಣ್ಣಿಟ್ಟಿರುವ ಆರ್ಟಿಓ ಇಲಾಖೆ ತೆರಿಗೆ ವಂಚಕರ ಪತ್ತೆ ಮಾಡಿ, ಬಸ್ಗಳನ್ನ ವಶಕ್ಕೆ ಪಡೆದು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.