ETV Bharat / jagte-raho

ಯಲ್ಲಾಪುರ ಪೊಲೀಸರಿಂದ ರೋಲ್​ಕಾಲ್​ ಆರ್.ಟಿ.ಐ ಕಾರ್ಯಕರ್ತ ಆರೆಸ್ಟ್​​ - ಉತ್ತರ ಕನ್ನಡ, ಶಿರಸಿ, ಆರ್.ಟಿ.ಐ ಕಾರ್ಯಕರ್ತನ ಬಂಧನ. ವಿವಿಧ ಪ್ರಕರಣಗಳಲ್ಲಿ ಆರೋಪಿ, ಉತ್ತರವ ಕನ್ನಡ ಜಿಲ್ಲೆ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ

ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರ್.ಟಿ.ಐ ಕಾರ್ಯಕರ್ತನೋರ್ವನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರ್.ಟಿ.ಐ ಕಾರ್ಯಕರ್ತ ಮಂಗೇಶ್ ಕೈಸರೆ
author img

By

Published : Aug 3, 2019, 2:24 AM IST

ಶಿರಸಿ (ಉತ್ತರ ಕನ್ನಡ): ಜಾತಿ ನಿಂದನೆ, ಹಣದ ಬೇಡಿಕೆ, ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರ್.ಟಿ.ಐ. ಕಾರ್ಯಕರ್ತ ಅಂದರ್​ ಆಗಿದ್ದಾನೆ. ಜಿಲ್ಲೆಯ ಯಲ್ಲಾಪುರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಯಲ್ಲಾಪುರದ ಮಂಗೇಶ್ ಕೈಸರೆ ಬಂಧಿತ ಆರ್.ಟಿ.ಐ. ಕಾರ್ಯಕರ್ತ. ಈತನ ವಿರುದ್ಧ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬೆದರಿಕೆವೊಡ್ಡಿ, ಜಾತಿ ನಿಂದನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಮಂಗೇಶ್ ಕೈಸೆರೆಯನ್ನು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಯಲ್ಲಾಪುರ ತಾಲೂಕಿನ ಬೆಳಕೊಪ್ಪದ ನಾಗರಾಜ ಶಿವಾ ನಾಯ್ಕ ಎಂಬುವನನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿ ಮಂಗೇಶ್ ಕೈಸೆರೆ ವಿರುದ್ಧ ಪಟ್ಟಣ ಪಂಚಾಯತ್​ ಸದಸ್ಯ ಸಯ್ಯದ್ ಕೈಸರ್ ಹಾಗೂ ಅತನ ಸಹೋದರಿ ರಜಿಯಾ ಮುಸ್ತಾಕ್ ಶೇಖ್ ಎಂಬುವರಿಗೆ, 25 ಸಾವಿರ ರೂಪಾಯಿ ಹಣ ನೀಡದಿದ್ದರೆ ಅವರ ವಿರುದ್ಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇನೆ ಎಂದು ಬೆದರಿಕೆವೊಡ್ಡಿದ್ದ ಎಂಬ ಆರೋಪದಡಿ ದೂರು ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮಂಗೇಶ್ ಹಾಗೂ ಆತನ ಸಹಚರರಾದ ಮಂಜುನಾಥ ಲಕ್ಷ್ಮಣ ನಾಯಕ, ವಿಶ್ವೇಶ್ವರ ಗಾಂವ್ಕರ್ ಹಾಗೂ ಹರೀಶ್ ಕೈಸರೆ ಜೊತೆ ಸೇರಿಕೊಂಡು ವ್ಯಕ್ತಿವೋರ್ವನಿಗೆ ತನ್ನನ್ನು ಕೇಳದೆ ಭೂಮಿ ಖರೀದಿಸಿದ್ದೀರಿ. ಈ ಭೂಮಿ ನಾನು ಖರೀದಿಸಿದ್ದು, ವ್ಯವಹಾರ ಬಗೆಹರಿಸಬೇಕಾದರೆ 2 ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದರೆ ಏನು ಬೇಕಾದರೂ ಮಾಡಬಲ್ಲೆವು ಎಂದು ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ. ಇದಕ್ಕೆ ಹೆದರಿದ ಆ ವ್ಯಕ್ತಿ 10 ಸಾವಿರ ರೂಪಾಯಿ ನೀಡಿದ್ದಾಗಿ ದೂರು ದಾಖಲಾಗಿತ್ತು.

ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮಂಗೇಶ್ ಕೈಸರೆಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Intro:ಶಿರಸಿ :
ಜಾತಿ ನಿಂದನೆ, ಹಣ ಬೇಡಿಕೆ ಹಾಗೂ ಬೆದರಿಕೆ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆರ್.ಟಿ.ಐ. ಕಾರ್ಯಕರ್ತರೊಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Body:ಯಲ್ಲಾಪುರದ ಮಂಗೇಶ್ ಕೈಸರೆ ಬಂಧಿತ ಆರ್.ಟಿ.ಐ. ಕಾರ್ಯಕರ್ತನಾಗಿದ್ದಾನೆ. ಈತನ ವಿರುದ್ಧ ಜಮೀನಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿರುತ್ತಾರೆ ಎಂದು ದೂರು ಸಲ್ಲಿಸಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ‌ ಬಂಧಿಲಾಗಿದೆ. ಪ್ರಕರಣದಲ್ಲಿ ಇನ್ನೂರ್ವ ಆರೋಪಿ ಯಲ್ಲಾಪುರ ತಾಲ್ಲೂಕಿನ ಬೆಳಕೊಪ್ಪಾದ ನಾಗರಾಜ ಶಿವಾ ನಾಯ್ಕ ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಸಯ್ಯದ ಕೈಸರ್ ಹಾಗೂ ಅವರ ಸಹೋದರಿ ರಜಿಯಾ ಮುಸ್ತಾಕ್ ಶೇಖ್ ಎಂಬುವವರಿಗೆ 25 ಸಾವಿರ ರೂಪಾಯಿ ಹಣ ನೀಡದಿದ್ದರೆ ನಿಮ್ಮ ವಿರುದ್ಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತೇನೆ ಎಂದು ಬೆದರಿಕೆ ಒಡ್ಡಿದ ಕುರಿತು ದೂರು ದಾಖಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ತನ್ನನ್ನು ಕೇಳದೇ ಭೂಮಿ ಖರೀದಿಸಿದ್ದೀರಿ, ಈ ಭೂಮಿ ನಾನು ಖರೀದಿಸಿದ್ದು, ವ್ಯವಹಾರ ಬಗೆಹರಿಸಬೇಕಾದರೆ 2 ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದರೆ ಏನು ಬೇಕಾದರೂ ಮಾಡಬಲ್ಲೆವು ಎಂದು ಬೆದರಿಕೆ ಹಾಕಿದ್ದು, 10 ಸಾವಿರ ರೂಪಾಯಿ ನೀಡಿದ್ದೆ ಎಂದು ಪಿರ್ಯಾದಿ ವಿಶ್ವೇಶ್ವರ ಗಾಂವ್ಕರ್, ಮಂಜುನಾಥ ಲಕ್ಷ್ಮಣ ನಾಯಕ, ಮಂಗೇಶ್ ಕೈಸರೆ, ಹಾಗೂ ಹರೀಶ್ ಕೈಸರೆ ವಿರುದ್ದ ದೂರು ದಾಖಲಿಸಿದ್ದರು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮಂಗೇಶ್ ಕೈಸರೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
........
ಸಂದೇಶ ಭಟ್ ಶಿರಸಿ. Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.