ಶಿವಮೊಗ್ಗ: ಸರಗಳ್ಳತನ ಮಾಡಿ ಕಳೆದ 7 ವರ್ಷಗಳಿಂದ ಕೋರ್ಟ್ ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2012 ರಲ್ಲಿ ಸರಗಳ್ಳತನ ಮಾಡಿ ಬಂಧನವಾಗಿದ್ದ ಶಿರಾಳಕೊಪ್ಪದ ನಿವಾಸಿ ಮಾಲತೇಶ ನಾಯ್ಕ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತ ತನ್ನ ವಾಸವನ್ನು ಶಿರಾಳಕೊಪ್ಪದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಬದಲಾಯಿಸಿಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ವಿನೋಬಾನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸರಗಳ್ಳನನ್ನು ಬಂಧಿಸುವಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ್ ಪೇದೆಗಳಾದ ಮಂಜುನಾಥ್ ಹಾಗೂ ಅವಿನಾಶ್ರನ್ನು ವರಿಷ್ಠಾಧಿಕಾರಿ ಶಾಂತರಾಜು ಅಭಿನಂದಿಸಿದ್ದಾರೆ.