ETV Bharat / jagte-raho

ಕಾಯೋರಿಂದಲೇ ಕಳ್ಳತನ?.. ಸಿಸಿಬಿ ಪೊಲೀಸರ ಮೇಲೆ ಐಷಾರಾಮಿ ಕಾರುಗಳ ಮಾರಾಟ ಆರೋಪ..

author img

By

Published : Feb 6, 2021, 8:25 PM IST

ಈಗಿನ‌ ಕಮಿಷನರ್ ಶಶಿಕುಮಾರ್ ಪ್ರಕರಣದ ತನಿಖೆಗೆ ಆದೇಶಿಸಿ ಜನರಲ್ಲಿ ಭರವಸೆ ಹುಟ್ಟಿಸಿದರೂ, ಈ ಪ್ರಕರಣದಲ್ಲಿ ಐಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಹೆಸರಿರುವುದರಿಂದ, ರಾಜಕೀಯ ನಂಟಿನ‌ ಅನುಮಾನಗಳೂ ವ್ಯಕ್ತವಾಗಿದೆ..

sale-of-luxury-cars-by-ccb-police-case
ಸಿಸಿಬಿ ಪೊಲೀಸ್​​

ಮಂಗಳೂರು : ನಗರ ಕಮಿಷನರೇಟ್ ವ್ಯಾಪ್ತಿಯ ಸಿಸಿಬಿ ಪೊಲೀಸರು ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಆರೋಪಿಗಳ ಐಷಾರಾಮಿ ಕಾರುಗಳನ್ನು ಹಿರಿಯ ಅಧಿಕಾರಿಗಳು ಶಾಮೀಲಾಗಿ ಮಾರಾಟ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಅಂದಿನ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ನಗರದ ಎಸಿಪಿ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ವಂಚನೆ ಪ್ರಕರಣಗಳ ಆರೋಪಿಗಳಿಗೆ ಸೇರಿರುವ ಬಿಎಂ​ಡಬ್ಲ್ಯೂ ಕಾರ್​, ಜಾಗ್ವಾರ್ ಸಹಿತ ಮೂರು ಐಶಾರಾಮಿ ಕಾರುಗಳನ್ನು ಪೊಲೀಸರು ಮಾರಾಟ ಮಾಡಿರುವ ಪ್ರಕರಣದ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತನಿಖೆಗೂ ಆದೇಶಿಸಿದ್ದಾರೆ.

ಮಂಗಳೂರಿನಿಂದ ತಿಂಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿರುವ ಆಗಿನ ಕಮಿಷನರ್ ವಿಕಾಸ್ ಕುಮಾರ್ ಮೇಲೆ ಇದೊಂದೇ ಪ್ರಕರಣ ಅಲ್ಲದೆ ಭ್ರಷ್ಟಾಚಾರದ, ಸೆಟಲ್‌ಮೆಂಟ್ ಹೆಸರಿನಲ್ಲಿ ಹಣ ಸುಲಿಗೆಯ ಹಲವು ಗಂಭೀರ ಆರೋಪಗಳು ಕೇಳಿ ಬಂದಿತ್ತು.

ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಳೆಯ ಆರೋಪಿಗಳಿಂದ, ದಂಧೆ ನಿರತರಿಂದ ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುವ, ಪ್ರಕರಣಗಳನ್ನು ಮುಚ್ಚಿ ಹಾಕಿರುವ ವದಂತಿಗಳು ನಗರದಲ್ಲಿ ಹರಿದಾಡಿದ್ದವು.‌

ಸಿಸಿಬಿಯನ್ನು ಮುಂದಿಟ್ಟು ಇಂತಹ ಹಲವು ಅಕ್ರಮ ಡೀಲಿಂಗ್ ನಡೆಸಿರುವ ಅನುಮಾನಗಳು ಈಗ ಎಲ್ಲೆಡೆ ಹರಿದಾಡುತ್ತಿವೆ. ಇದು ಪೊಲೀಸ್ ಇಲಾಖೆಯ ವೃತ್ತಿಪರತೆಗೆ ಕಪ್ಪುಚುಕ್ಕೆ ಎಂದು ಅವರು ಹೇಳಿದ್ದಾರೆ.

ಈಗಿನ‌ ಕಮಿಷನರ್ ಶಶಿಕುಮಾರ್ ಪ್ರಕರಣದ ತನಿಖೆಗೆ ಆದೇಶಿಸಿ ಜನರಲ್ಲಿ ಭರವಸೆ ಹುಟ್ಟಿಸಿದರೂ, ಈ ಪ್ರಕರಣದಲ್ಲಿ ಐಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಹೆಸರಿರುವುದರಿಂದ, ರಾಜಕೀಯ ನಂಟಿನ‌ ಅನುಮಾನಗಳೂ ವ್ಯಕ್ತವಾಗಿದೆ.

ಈ ಬಗ್ಗೆ ಪಾರದರ್ಶಕ ತನಿಖೆಗಾಗಿ ಪ್ರಕರಣವನ್ನು ದಕ್ಷ ಅಧಿಕಾರಿಗಳು ಇರುವ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು. ರಾಜಕೀಯ ಪ್ರಭಾವ ಬಳಸಿ ಈಗಿನ ಕಮಿಷನರ್ ಶಶಿಕುಮಾರ್ ಅವರ ಕೈಗಳನ್ನು ಕಟ್ಟಿಹಾಕಿ, ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಯತ್ನಿಸಿದ್ರೆ ನಾಗರಿಕರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.