ETV Bharat / jagte-raho

ಪ್ರೀತಿ ನಾಟಕವಾಡಿ ಅಪ್ರಾಪ್ತೆಯ ಕರೆದೊಯ್ದು ಅತ್ಯಾಚಾರ, ಕೊಲೆ: ಪೋಷಕರಿಂದ ಆರೋಪ - ಹಾಸನದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ

16 ವರ್ಷದ ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಬಾಲಕಿ ತಂದೆ-ತಾಯಿ ಆರೋಪಿಸಿದ್ದಾರೆ.

rape-and-murder-case-in-hasan
ಪ್ರೀತಿ ನಾಟಕವಾಡಿ ಅಪ್ರಾಪ್ತೆಯ ಕರೆದೊಯ್ದು ಅತ್ಯಾಚಾರ, ಕೊಲೆ: ಪೋಷಕರಿಂದ ಆರೋಪ
author img

By

Published : Jan 27, 2021, 11:08 PM IST

ಹಾಸನ: ಮಗಳನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಏನಿದು ಪ್ರಕರಣ?

ಹಾಸನ ಜಿಲ್ಲೆಯ ಹೊಳೆನರಸೀಪುರದ ಕೆರಗೋಡು ಗ್ರಾಮದ ಯೋಗೇಶ್ (24) ಮತ್ತು ಅದೇ ತಾಲೂಕಿನ ಬಾಲಕಿಯನ್ನು ಪ್ರೀತಿಸುತ್ತಿದ್ದ. ಕಾಲೇಜಿನಿಂದ ಬಂದ ಬಾಲಕಿಯೊಂದಿಗೆ ರಾತ್ರಿ ಸಮಯದಲ್ಲಿ ಮನೆಯವರಿಗೆ ತಿಳಿಯದಂತೆ ಪ್ರತಿನಿತ್ಯ ದೂರವಾಣಿಯಲ್ಲಿ ಮಾಡುತ್ತಿದ್ದ ಎನ್ನಲಾಗ್ತಿದೆ.

‘ಯೋಗೇಶ್​ ನಮ್ಮ ಮಗಳನ್ನು ತನ್ನ ಮೋಹದ ಬಲೆಗೆ ಬೀಳಿಸಿ ಕೊಂಡಿದ್ದ. ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ. ಆಕೆ ಬಾಲಕಿ ಆಗಿರುವುದರಿಂದ ಮದುವೆಗೆ ನಿರಾಕರಿಸಿದ್ದಾಳೆ. ನಂತರ ಆಕೆಯನ್ನು ಬಲವಂತದಿಂದ ಒಪ್ಪಿಸುವ ಪ್ರಯತ್ನ ಮಾಡಿದ್ದ’ ಎಂಬುದು ಮೃತ ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಇದಾದ ಬಳಿಕ ಜ. 26ರಂದು ಯೋಗೇಶ್ ಮತ್ತೆ ಆಕೆ ಮೊಬೈಲ್​ಗೆ ಕರೆ ಮಾಡಿದ್ದಾನೆ. ‘ನಿನ್ನನ್ನು ಬಿಟ್ಟು ನಾನು ಬದುಕುವುದಿಲ್ಲ. ನೀನಿಲ್ಲದೆ ನಾನು ಸಾಯುತ್ತೇನೆ. ಇಂದು ರಾತ್ರಿ ನಾವಿಬ್ಬರೂ ಬೆಂಗಳೂರಿಗೆ ಹೋಗಿ ಮದುವೆಯಾಗೋಣ ಬಾ’ ಎಂದು ಹೇಳಿದ್ದಾನೆ. ಮನೆಯಿಂದ ನಮಗ್ಯಾರಿಗೂ ತಿಳಿಯದಂತೆ ಹೊರಬಂದ ನನ್ನ ಮಗಳನ್ನು ಆರೋಪಿ ಯೋಗೇಶ್ ಮತ್ತು ಆತನ ಸಂಗಡಿಗರು ಅಪಹರಣ ಮಾಡಿದ್ದಾರೆ. ಬಳಿಕ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ ಎಂಬುದು ಪೋಷಕರ ಗಂಭೀರ ಆರೋಪವಾಗಿದೆ.

ಬಾಲಕಿಯ ಮೃತದೇಹ ಅಂಕವಳ್ಳಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಆಪೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.