ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನ ವೈಟ್ ಫೀಲ್ಡ್ ವಿಭಾಗದ ಹಳೆ ರೌಡಿ ಶೀಟರ್ಗಳನ್ನು ಕರೆಯಿಸಿ ಡಿಸಿಪಿ ಅಬ್ದುಲ್ ಅಹದ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಾತಯಾಚನೆ ಮಾಡುವುದಾಗಲಿ, ಹಣಕ್ಕಾಗಿ ಧಮ್ಕಿ ಹಾಗು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಸೂಚನೆ ನೀಡಲಾಗಿದೆ.
ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ, ಮಹದೇವಪುರ, ಮಾರತ್ತಹಳ್ಳಿ, ವರ್ತೂರು, ಬೆಳ್ಳಂದೂರು, ಹೆಚ್ಎಎಲ್, ಕಾಡುಗುಡಿ ಪೋಲಿಸ್ ಠಾಣೆಗಳಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ 300ಕ್ಕೂ ಅಧಿಕ ರೌಡಿ ಶೀಟರ್ಗಳನ್ನು ವೈಟ್ ಫೀಲ್ಡ್ ಪೋಲಿಸ್ ಠಾಣೆಗೆ ಕರೆಯಿಸಿ ವಾರ್ನಿಂಗ್ ನೀಡಲಾಗಿದೆ. ಇದೇ ವೇಳೆ ಸನ್ನಡತೆಯಿಂದ ವರ್ತನೆ ತೋರಿದರೆ ಚುನಾವಣೆ ಮುಗಿದ ನಂತರ ರೌಡಿಶೀಟರ್ನಿಂದ ಮುಕ್ತಿಗೊಳಿಸುವುದಾಗಿ ತಿಳಿಸಿದ್ದಾರೆ.
ಒಟ್ಟು 325 ಜನ ರೌಡಿಶೀಟರ್ ಪಟ್ಟಿಯಲ್ಲಿದ್ದಾರೆ.ಅವರ ಪೈಕಿ 135 ಜನ ಪೊಲೀಸ್ ಠಾಣೆಗೆ ಹಾಜರಾಗಿದ್ದರು. 2017 ರಲ್ಲಿ 447 ಜನ ರೌಡಿ ಶೀಟರ್ಗಳ ಪಟ್ಟಿಯಲ್ಲಿದ್ದರು. ಸನ್ನಡತೆ ಆಧಾರದ ಮೇಲೆ 100 ಕ್ಕೂ ಹೆಚ್ಚು ಜನರನ್ನ ರೌಡಿ ಶೀಟರ್ನಿಂದ ಮುಕ್ತಿ ಮಾಡಲಾಗಿದೆ. ಚುನಾವಣಾ ದೃಷ್ಠಿಯಿಂದ 16 ಜನರನ್ನು ಪೊಲೀಸ್ ಕಸ್ಟಡಿಗೆ ತಗೆದುಕೊಳ್ಳಲಾಗಿದ್ದು, ಎಲೆಕ್ಷನ್ ಮುಗಿದ ಬಳಿಕ ಅವರನ್ನ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.