ETV Bharat / jagte-raho

ಅಂತ್ಯಕ್ರಿಯೆ ತಡೆದು ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು - ರಾಜಗಡ ಕ್ರೈಂ ಸುದ್ದಿ

ತನ್ನ ಪತಿಯದ್ದು ಸಹಜ ಸಾವು ಅಲ್ಲ, ಕೊಲೆ ಎಂದು ಆರೋಪಿಸಿ ಪತ್ನಿ ಪೊಲೀಸರಿಗೆ ​ದೂರು ನೀಡಿದ್ದು, ಅಂತ್ಯಕ್ರಿಯೆ ತಡೆದು ಅರೆ ಬೆಂದ ಶವವನ್ನೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Police stop cremation and take dead body for autopsy
ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು
author img

By

Published : Oct 12, 2020, 5:57 PM IST

ರಾಜಗಢ (ಮಧ್ಯಪ್ರದೇಶ): ಅಂತ್ಯಸಂಸ್ಕಾರ ಕಾರ್ಯವನ್ನು ನಿಲ್ಲಿಸಿದ ಪೊಲೀಸರು ಅರ್ಧ ಸುಟ್ಟ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

ಅರೆ ಬೆಂದ ಶವವನ್ನು ಮರಣೋತ್ತರ ಪರೀಕ್ಷೆಗೆ ಹೊತ್ತೊಯ್ದ ಪೊಲೀಸರು

ಪ್ರೇಮ್​ ಸಿಂಗ್​ ಎಂಬವರು ಅನಾರೋಗ್ಯದಿಂದಾಗಿ ಶನಿವಾರ ಮೃತಪಟ್ಟಿದ್ದು, ಆತನ ಸಂಬಂಧಿಕರು ಭಾನುವಾರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಆದರೆ ಪತಿ ಸಾಯುವ ವೇಳೆಯಲ್ಲಿ ತವರು ಮನೆಯಲ್ಲಿದ್ದ ಪ್ರೇಮ್​ ಸಿಂಗ್​ರ ಪತ್ನಿ ರೇಖಾ ಬಾಯಿ, ಇದು ಸಹಜ ಸಾವಲ್ಲ, ಕೊಲೆ. ನನ್ನ ಗಂಡ ಸತ್ತಿರುವ ವಿಚಾರವನ್ನು ನನಗೆ ಯಾರೂ ಹೇಳಿಲ್ಲ ಎಂದು ಆರೋಪಿಸಿ ಪೊಲೀಸರಿಗೆ ​ದೂರು ನೀಡಿದ್ದಾಳೆ.

ಹೀಗಾಗಿ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡಿದ್ದು, ಅಂತ್ಯಕ್ರಿಯೆಯನ್ನು ನಿಲ್ಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಗಢ ಪೊಲೀಸರು ತನಿಖೆ ನಡಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.