ETV Bharat / jagte-raho

ಕೇರಳದಲ್ಲಿ ರೇವ್​ ಪಾರ್ಟಿ ಮೇಲೆ ಪೊಲೀಸರ​ ದಾಳಿ: ಡ್ರಗ್ಸ್​ ವಶಕ್ಕೆ, 60 ಮಂದಿ ಅರೆಸ್ಟ್​ - raid at Cliff Inn Resort

ರೇವ್​ ಪಾರ್ಟಿ ಮೇಲೆ ದಾಳಿ ನಡೆಸಿದ ಇಡುಕ್ಕಿ ಪೊಲೀಸರು, 60 ಜನರನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Police bust rave party in Kerala
ರೇವ್​ ಪಾರ್ಟಿ ಮೇಲೆ ಪೊಲೀಸರ​ ದಾಳಿ
author img

By

Published : Dec 21, 2020, 5:07 PM IST

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯ ವಾಗಮೊನ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ರೇವ್​ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹೆರಾಯಿನ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು, 60 ಜನರನ್ನು ಬಂಧಿಸಿದ್ದಾರೆ.

ರೇವ್​ ಪಾರ್ಟಿ ಮೇಲೆ ಪೊಲೀಸರ​ ದಾಳಿ

ಕೋವಿಡ್​ ನಡುವೆ ಅನುಮತಿಯಿಲ್ಲದೆ ವಾಗಮೊನ್‌ನ ಕ್ಲಿಫ್ ಇನ್ ರೆಸಾರ್ಟ್‌ನಲ್ಲಿ ಭಾನುವಾರ ಸಂಜೆ ರೇವ್​ ಪಾರ್ಟಿ ಆಯೋಜಿಸಲಾಗಿತ್ತು. ನಿಖರ ಮಾಹಿತಿ ಮೇರೆಗೆ ಮಹಿಳಾ ಕಾನ್​ಸ್ಟೇಬಲ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಿರುವುದಾಗಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಅನುಮತಿ ಇಲ್ಲದೆ ತೋಟದ ಮನೆಯಲ್ಲಿ ರೇವ್​ ಪಾರ್ಟಿ : ಮೂವರು ಅರೆಸ್ಟ್​

ಕ್ರಿಸ್‌ಮಸ್ - ಹೊಸ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಇಂತಹ ರೇವ್ ಪಾರ್ಟಿಗಳು ಮತ್ತು ಡ್ರಗ್ಸ್ ಕಳ್ಳಸಾಗಣೆಯನ್ನು ತಡೆಗಟ್ಟಲು ಪೊಲೀಸರು ಇಡುಕ್ಕಿ ಜಿಲ್ಲೆಯಲ್ಲಿ ಎಚ್ಚರ ವಹಿಸಿದ್ದಾರೆ. ಪೊಲೀಸರು ಬಂಧಿಸಿರುವ 60 ಜನರ ಗುಂಪಿನಲ್ಲಿ ಸಿನಿಮಾ ಮತ್ತು ಧಾರಾವಾಹಿ ಸೆಲೆಬ್ರೆಟಿಗಳೂ ಇದ್ದಾರೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.