ಬಂಟ್ವಾಳ: ಬಿ.ಸಿ. ರೋಡ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ವೃತ್ತನಿರೀಕ್ಷಕ ಟಿ.ಡಿ. ನಾಗರಾಜ್ ಮತ್ತು ಪೊಲೀಸರ ತಂಡ ದಾಳಿ ನಡೆಸಿದ್ದು, ಮೂವರನ್ನು ಬಂಧಿಸಲಾಗಿದೆ.
ಓದಿ: ಕೆಐಎಎಲ್ನಲ್ಲಿ ಲಗೇಜ್ ಬ್ಯಾಗ್ ಕದ್ದೊಯ್ದ ಯುವತಿ ಬಂಧನ; 55 ಗ್ರಾಂ ಬಂಗಾರ ವಶ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಭಾನುವಾರ ಬೆಳಗ್ಗೆ ಸುಮಾರು 10.30ರ ವೇಳೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಅವಿನಾಶ್ ಸಿಬ್ಬಂದಿಯೊಂದಿಗೆ ಬಿ.ಸಿ. ರೋಡ್ನ ಭಾರತ್ ಕಾಂಪ್ಲೆಕ್ಸ್ ತಳಭಾಗದಲ್ಲಿರುವ ಕೊಠಡಿಗೆ ದಾಳಿ ನಡೆಸಿದ್ದಾರೆ.
ಪುತ್ತೂರು ನೆಕ್ಕಿಲಾಡಿ ನಿವಾಸಿ ಶರಣ್ (28), ಬಂಟ್ವಾಳ ಕರಿಯಂಗಳ ನಿವಾಸಿ ಭರತ್ (28), ಪುತ್ತೂರು ಚಿಕ್ಕಮೂಡ್ನೂರು ಗ್ರಾಮ ನಿವಾಸಿ ಕಿರಣ್ (25) ಎಂಬುವರನ್ನು ಬಂಧಿಸಿದ್ದಾರೆ.
4,400 ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಐವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ತನಿಖೆ ನಡೆಯುತ್ತಿದೆ.