ಚಿಕ್ಕಮಗಳೂರು: ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ ಹುಂಡಿ ಒಡೆದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಖತರ್ನಾಕ್ ಕಳ್ಳನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ.
ದೇವಸ್ಥಾನದ ಹುಂಡಿ ಒಡೆಯುವ ಶಬ್ದ ಕೇಳಿ ಗ್ರಾಮಸ್ಥರು ದೇವಸ್ಥಾನವನ್ನು ಸುತ್ತುವರೆದು ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಹೊಸಪೇಟೆಯ ಕಾಮೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡನೇ ಬಾರಿ ದೇವಸ್ಥಾದ ಹಂಡಿ ಕದಿಯಲು ಬಂದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ.ಗ್ರಾಮದ ಹುಲ್ಲೆ ಕಲ್ಲೇಶ್ವರ ದೇವಾಲಯದಲ್ಲಿ ಕಳ್ಳನತನಕ್ಕೆ ಯತ್ನಿಸಿದ್ದು, ಕಳ್ಳನನ್ನು ಹಿಡಿದು ಗ್ರಾಮದ ಹೆಬ್ಬಾಗಿಲಿನ ಕಂಬಕ್ಕೆ ಗ್ರಾಮಸ್ಥರು ಕಟ್ಟಿ ರಾತ್ರಿಯಿಡೀ ಗೂಸಾ ಕೊಟ್ಟಿದ್ದಾರೆ.
ನಂತರ ಗ್ರಾಮಾಂತರ ಪೊಲೀಸರಿಗೆ ಈ ಕಳ್ಳನನ್ನು ಒಪ್ಪಿಸಿದ್ದು, ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.