ಗಾಂಧಿನಗರ: ಗುಜರಾತ್ನ ಪಶ್ಚಿಮ ಕಚ್ನಲ್ಲಿ ಐಎಸ್‌ಐ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಏಜೆಂಟ್ವೊಬ್ಬನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ಗುಜರಾತ್ನ ಮುಂಡ್ರಾ ಡಾಕ್ಯಾರ್ಡ್ನಲ್ಲಿ ಮೇಲ್ವಿಚಾರಕನಾಗಿರುವ ರಜಾಕ್ಬಾಯ್ ಕುಂಭಾರ್ ಎಂಬಾತ ಐಎಸ್‌ಐ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿತ್ತು. ಉತ್ತರಪ್ರದೇಶದ ರಕ್ಷಣಾ ಹಾಗೂ ಐಎಸ್‌ಐ ಪ್ರಕರಣದ ತನಿಖೆ ಸಂಬಂಧ ರಜಾಕ್ಬಾಯ್ ಕುಂಭಾರ್ನನ್ನು ಸೋಮವಾರ ಅರೆಸ್ಟ್ ಮಾಡಿರುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಮಾಹಿತಿ ನೀಡಿದೆ.
ಕಳೆದ ಜನವರಿಯಲ್ಲಿ ರಶೀದ್ ಎಂಬಾತನ ವಿರುದ್ಧ ಉತ್ತರಪ್ರದೇಶದಲ್ಲಿನ ಭಯೋತ್ಪಾದನಾ ನಿಗ್ರಹ ದಳ ಪ್ರಕರಣ ದಾಖಲಿಸಿ ಬಂಧಿಸಿತ್ತು. ತನಿಖೆ ವೇಳೆ ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ ಮತ್ತು ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿದ ರಾಷ್ಟ್ರೀಯ ತನಿಖಾ ದಳ ರಜಾಕ್ಬಾಯ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್‌ಐ) ಇದು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾಗಿದೆ.