ETV Bharat / jagte-raho

ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ನವಜಾತ ಶಿಶು ಬಲಿ - Assam fire

ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಪ್ರಮಾಣ ಹೆಚ್ಚದಂತೆ ತಡೆಯಲು ಅಧಿಕಾರಿಗಳು ವಿದ್ಯುತ್​ ಕಡಿತಗೊಳಿಸಿದ್ದು, ಪರಿಣಾಮ ಐಸಿಯುನಲ್ಲಿದ್ದ 3 ದಿನದ ಹಸುಗೂಸು ಆಕ್ಸಿಜನ್​ ಕೊರತೆಯಿಂದಾಗಿ ಸಾವನ್ನಪ್ಪಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

New born baby dies as hospital catches fire
ಅಸ್ಸೋಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಗ್ನಿ ಅವಘಡ
author img

By

Published : Nov 9, 2020, 12:40 PM IST

ದಿಬ್ರುಗರ್: ಅಸ್ಸೋಂನ ದಿಬ್ರುಗರ್ ಜಿಲ್ಲೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನವಜಾತ ಶಿಶು ಮೃತಪಟ್ಟಿದೆ.

ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಿನ್ನೆ ರಾತ್ರಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಪ್ರಮಾಣ ಹೆಚ್ಚದಂತೆ ತಡೆಯಲು ಆಸ್ಪತ್ರೆಯ ಅಧಿಕಾರಿಗಳು ವಿದ್ಯುತ್​ ಕಡಿತಗೊಳಿಸಿದ್ದಾರೆ. ಪರಿಣಾಮ ಆಕ್ಸಿಜನ್​ ಪೂರೈಕೆ ಸ್ಥಗಿತಗೊಂಡಿದ್ದು, ತೀವ್ರ ನಿಗಾ ಘಟಕ (ಐಸಿಯು)ದಲ್ಲಿದ್ದ 3 ದಿನದ ಹಸುಗೂಸು ಕೊನೆಯುಸಿರೆಳೆದಿದೆ.

ಅಸ್ಸೋಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಗ್ನಿ ಅವಘಡ

ಗರ್ಭಿಣಿಯರು, ತಮ್ಮ ಕಂದಮ್ಮಗಳೊಂದಿಗೆ ಬಾಣಂತಿಯರು ಸೇರಿದಂತೆ ಅನೇಕ ರೋಗಿಗಳು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಆಸ್ಪತ್ರೆಯಿಂದ ಹೊರಗೆ ಓಡಿದ್ದಾರೆ. ಈ ವೇಳೆ ಅನೇಕರು ಗಾಯಗೊಂಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.