ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೊಳಗಾಗಿದ್ದ ನಟಿ ದೀಪಿಕಾ ಪಡುಕೋಣೆ, ನಟಿ ರಕುಲ್ ಪ್ರೀತ್ ಸಿಂಗ್, ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ಟಾ ಹಾಗೂ ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ರ ಮೊಬೈಲ್ಗಳನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ವಶಕ್ಕೆ ಪಡೆದಿದೆ.
ಶುಕ್ರವಾರ ಸತತ 4 ನಾಲ್ಕು ಗಂಟೆಗಳ ಕಾಲ ರಕುಲ್ರನ್ನು ಹಾಗೂ ಶನಿವಾರ 5 ಗಂಟೆಗಳ ಕಾಲ ದೀಪಿಕಾರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು. ಸಿಮೋನೆ ಮತ್ತು ಕರಿಷ್ಮಾ ಕೂಡ ವಿಚಾರಣೆಗೊಳಪಟ್ಟಿದ್ದರು. ಇವರುಗಳ ಮೊಬೈಲ್ಗಳಲ್ಲಿ ಡ್ರಗ್ಸ್ ಕುರಿತ ಚಾಟ್ ಇರುವ ಕಾರಣ ಭಾರತೀಯ ಸಾಕ್ಷ್ಯ ಕಾಯ್ದೆಯ ಅಡಿಯಲ್ಲಿ ಮೊಬೈಲ್ಗಳನ್ನು ವಶಪಡಿಸಿಕೊಂಡಿದೆ.
2017 ರಲ್ಲಿ ದೀಪಿಕಾ ತನ್ನ ಮಾಜಿ ವ್ಯವಸ್ಥಾಪಕರೊಂದಿಗೆ ಡ್ರಗ್ಸ್ ಕುರಿತ ಚಾಟ್ ಮಾಡಿರುವ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ಕೋರಿಕೆಯ ಮೇರೆಗೆ ಎನ್‌ಸಿಬಿ ಪ್ರಕರಣ ದಾಖಲಿಸಿದೆ. ರಕುಲ್ ಮತ್ತು ಸಿಮೋನೆ ಇಬ್ಬರೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಅರೆಸ್ಟ್ ಆಗಿರುವ ನಟಿ ರಿಯಾ ಚಕ್ರವರ್ತಿಯ ಸ್ನೇಹಿತೆಯರಾಗಿರುವುದರಿಂದ ಇವರ ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ದೀಪಿಕಾ, ರಕುಲ್, ಸಿಮೋನೆ, ಕರಿಷ್ಮಾ ಹೊರತಾಗಿ ನಿನ್ನೆ ನಟಿಯರಾದ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ರನ್ನು ಕೂಡ ಎನ್‌ಸಿಬಿ ವಿಚಾರಣೆಗೊಳಪಡಿಸಿತ್ತು.