ETV Bharat / jagte-raho

ಮುಖ ಗುರುತು ಸಿಗದಂತೆ ರೌಡಿಶೀಟರ್​​​​​ ಸೈಕಲ್​​​​ ರವಿ ಸಹಚರನ ಬರ್ಬರ ಹತ್ಯೆ - ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್

ರೌಡಿಶೀಟರ್ ಸಹಚರನೊಬ್ಬನನ್ನು ಮುಖ ಗುರುತು ಸಿಗದಷ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ‌ ಚಾಮರಾಜಪೇಟೆಯ ಅಜಾದ್ ನಗರದ 5ನೇ ಕ್ರಾಸ್ ಬಳಿ ನಡೆದಿದೆ.

KN_BNG_01_MURDER_7204498
ಮುಖ ಗುರುತು ಸಿಗದಂತೆ ರೌಡಿಶೀಟರ್​​​​​ ಸೈಕಲ್​​​​ ರವಿ ಸಹಚರನ ಬರ್ಬರ ಹತ್ಯೆ
author img

By

Published : Jan 23, 2020, 8:44 AM IST

ಬೆಂಗಳೂರು: ರೌಡಿಶೀಟರ್ ಸಹಚರನೊಬ್ಬನನ್ನು ಮುಖ ಗುರುತು ಸಿಗದಷ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ‌ ಚಾಮರಾಜಪೇಟೆಯ ಅಜಾದ್ ನಗರದ 5ನೇ ಕ್ರಾಸ್ ಬಳಿ ನಡೆದಿದೆ.

ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ (35) ಕೊಲೆಯಾದ ವ್ಯಕ್ತಿ. ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್ದ ಈತ ‌ನಿನ್ನೆ ರಾತ್ರಿ ಆಜಾದ್ ನಗರಕ್ಕೆ ಬೈಕ್​ನಲ್ಲಿ ಬಂದಿದ್ದನಂತೆ. ಈ ವೇಳೆ ಕಾದು ಕುಳಿತಿದ್ದ ಮೂವರು ದುಷ್ಕರ್ಮಿಗಳು ಲೋಕೇಶ್​​ನನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು‌ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು‌, ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಕೊಲೆಯಾದ ಲೋಕೇಶ್ ನಾಗರಬಾವಿ ನಿವಾಸಿಯಾಗಿದ್ದು, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ. ಹಾಗೆಯೇ ಈತ ನಗರದಲ್ಲಿನ ಕುಖ್ಯಾತ ರೌಡಿ ಸೈಕಲ್ ರವಿ ಜೊತೆ ಸ್ನೇಹ ಹೊಂದಿದ್ದ.‌ ಹೀಗಾಗಿ ಹಳೇ ದ್ವೇಷ ಅಥವಾ ಹುಡಗಿ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಚಾಮರಾಜಪೇಟೆ ಪೊಲೀಸರು ಬಲೆ ಬೀಸಿದ್ದಾರೆ.

Intro:ವ್ಯಕ್ತಿಯ ಮುಖಚರ್ಯೆ ಗುರುತು ಸಿಗದಷ್ಟು ಭೀಕರವಾಗಿ ಕೊಲೆ

ವ್ಯಕ್ತಿಯ ಮುಖಚರ್ಯೆ ಗುರುತು ಸಿಗದಷ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ‌ ಚಾಮರಾಜಪೇಟೆಯ ಅಜಾದ್ ನಗರದ 5 ನೇ ಕ್ರಾಸ್ ಬಳಿ ನಡೆದಿದೆ.ಲೋಕೇಶ್ ಅಲಿಯಾಸ್ ಸ್ಮಶಾನ ಲೋಕಿ
(35) ವರ್ಷ ಕೊಲೆಯಾದ ವ್ಯಕ್ತಿ

ರೌಡಿಶೀಟರ್ ಸೈಕಲ್ ರವಿ ಸಹಚರನಾಗಿದ್ದ ಲೋಕೇಶ್ ‌ನಿನ್ನೆ ರಾತ್ರಿ ಆಜಾದ್ ನಗರಕ್ಕೆ ಬೈಕ್ ನಲ್ಲಿ ಬಂದಿದ್ದ .ಈ ವೇಳೆ ಕಾದು ಕುಳಿತ ದುಷ್ಕರ್ಮಿಗಳು ಚಾಮರಾಜಪೇಟೆಯ ಆಜಾದ್ ನಗರದ ಬಳಿ‌ ಮೂವರು ಆರೋಪಿಗಳು ಸೇರಿ ಲೋಕೇಶ್ ನನ್ನು ಬರ್ಬರವಾಗಿ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಇನ್ನು ವಿಚಾರ ತಿಳಿದು ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು‌ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು‌ ಕೊಲೆಯಾದ ವ್ಯಕ್ತಿಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿ
ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇನ್ನು ಕೊಲೆಯಾದ ಲೋಕೇಶ್ ನಾಗರಬಾವಿ ನಿವಾಸಿಯಾಗಿದ್ದು
ಫೈನಾನ್ಸ್ ವ್ಯವಹಾರ ಮಾಡ್ತಿದ್ದ.. ಹಾಗೆ ಈತ ನಗರದಲ್ಲಿನ ಖ್ಯಾತ ರೌಡಿ ಸೈಕಲ್ ರವಿ ಜೊತೆ ಕಾಣಿಸಿಕೊಳ್ತಿದ್ದ.‌ಹೀಗಾಗಿ ಹಳೇ ದ್ವೇಷ ಅಥವಾ ಹುಡಗಿ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದ್ದು ಸ್ಥಳದ ಮೊಬೈಲ್ ಲೋಕೆಷನ್, ಸಿಸಿಟಿವಿ ಚಹರೆ ಆಧಾರಿಸಿ
ದುಷ್ಕರ್ಮಿಗಳ ಪತ್ತೆಗೆ ಚಾಮರಾಜಪೇಟೆ ಪೊಲೀಸರು ಬಲೆಬೀಸಿದ್ದಾರೆBody:KN_BNG_01_MURDER_7204498Conclusion:KN_BNG_01_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.