ಉತ್ತರ ಪ್ರದೇಶ: ಮಾನಸಿಕ ಅಸ್ವಸ್ಥ ಯುವತಿಯ ಮೇಲೆ 65 ವರ್ಷದ ವೃದ್ಧ ಅತ್ಯಾಚಾರವೆಸಗಿದ್ದು, ಆಕೆ ಗರ್ಭವತಿಯಾಗಿರುವ ಘಟನೆ ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಅಕ್ಕನ ಮೇಲೆ ನಾಲ್ಕೈದು ತಿಂಗಳ ಹಿಂದೆ ಆರೋಪಿಯು ಅತ್ಯಾಚಾರ ಎಸಗಿದ್ದು, ಆಕೆ ಈಗ ಗರ್ಭಿಣಿಯಾಗಿದ್ದಾಳೆ ಎಂದು ಸಂತ್ರಸ್ತೆಯ ತಂಗಿ ಜಾಫರ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಯುವತಿಯು ಒಬ್ಬಂಟಿಯಾಗಿ ಮನೆಯೊಂದರಲ್ಲಿ ವಾಸವಿದ್ದು, ಇದನ್ನು ದುರುಪಯೋಗ ಪಡಿಸಿಕೊಂಡಿರುವ ನೆರೆಮನೆಯವನು ಕೃತ್ಯ ಎಸಗಿದ್ದಾನೆ ಎಂದು ಜಾಫರ್ಗಂಜ್ ಠಾಣೆಯ ಎಸ್ಹೆಚ್ಒ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.