ಲಖಿಂಪುರ ಖೇರಿ( ಉತ್ತರ ಪ್ರದೇಶ): ಸೋಮವಾರ ಮುಂಜಾನೆ ನೌರಂಗಾಬಾದ್ನಲ್ಲಿ 35 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ತಮ್ಮನನ್ನು ಕೊಡಲಿಯಿಂದ ಕೊಂದು, ತನ್ನ ತಾಯಿಗೂ ಸಹ ಹೊಡೆದಿರುವ ಘಟನೆ ನಡೆದಿದೆ.
ಕೊಲೆಗೆ ನಿಖರವಾದ ಮಾಹಿತಿ ಇನ್ನೂ ತಿಳಿದು ಬಂದಿಲ್ಲ, ಆದರೆ ಶಕೀಲ್ (35) ಎಂಬಾತ ತನ್ನ ಪತ್ನಿ ಶಬಿಕುನ್ನೀಶನ್ (30) ಮತ್ತು ತನ್ನ ತಮ್ಮ ಮೊಹ್ಸಿನ್ (30) ಇಬ್ಬರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದಿಂದ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಕೀಲ್ ಕೊಲೆ ಮಾಡಲು ಪ್ರಯತ್ನಿಸುತ್ತಿರುವಾಗ , ಅದನ್ನು ತಡೆಯಲು ಮುಂದಾದ ಆತನ ತಾಯಿಗೂ ಆತ ಹೊಡೆದು ಗಾಯ ಮಾಡಿದ್ದಾನೆ. ಈ ಹಿನ್ನೆಲೆ ಶಕೀಲ್ ಮಾನಸಿಕ ಸ್ಥಿಮಿತ ಕಳೆದು ಕೊಂಡು ಈ ರೀತಿ ಮಾಡಿದ್ದಾನೆ ಎಂದು ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಖೇರಿ ಪೊಲೀಸ್ ವರಿಷ್ಠಾಧಿಕಾರಿ ಪೂನಂ ಅವರು ಸ್ಥಳಕ್ಕೆ ಭೇಟಿ ನೀಡಿ, ಹತ್ಯೆ ಹಿಂದಿನ ಉದ್ದೇಶ ಪತ್ತೆಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.