ಮೈನ್‌ಪುರಿ (ಉತ್ತರ ಪ್ರದೇಶ): ನೀರಿನ ವಿವಾದದ ಬಗ್ಗೆ ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯನ್ನು ಕೊಡಲಿಯಿಂದ ಕೊಲೆ ಮಾಡಿ, ತಾಯಿ ಮತ್ತು ಸಹೋದರಿಯೊಂದಿಗೆ ಗ್ರಾಮದಿಂದ ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಕೊಲೆಯಾದ ರಾಬಿನ್ ಯಾದವ್ ಕುಟುಂಬದ ದೂರಿನ ಮೇರೆಗೆ ರಾಹುಲ್ ಯಾದವ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದನ್ನಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೊನಾರ್ ಗ್ರಾಮದಲ್ಲಿ ಈ ಘಟನೆ ನಡೆದ್ದು, ನಾಲ್ಕು ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೈನ್‌ಪುರಿಯಲ್ಲಿ ದಾಳಿ ನಡೆದ ಸ್ಥಳಕ್ಕೆ ತಲುಪಿದ ಪೊಲೀಸರು, ರಾಬಿನ್ ಯಾದವ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ತಮ್ಮ ಹೊಲಗಳಿಗೆ ನೀರಾವರಿ ಮಾಡಲು ನೀರಿನ ಪಂಪ್ ಹಂಚಿಕೊಳ್ಳುತ್ತಿದ್ದಾಗ ಅವರಲ್ಲಿ ನೀರಿನ ವಿವಾದ ಉಂಟಾಗಿತ್ತು. ಹೀಗಾಗಿ ಅವರು ಆಸ್ತಿಗಳನ್ನು ಪರಸ್ಪರ ಹಂಚಿಕೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ರಾಬಿನ್ ಹುಲ್ಲು ಕೀಳಲು ತನ್ನ ಹೊಲಕ್ಕೆ ಹೋಗಿದ್ದಾಗ, ರಾಹುಲ್ ಮತ್ತು ರಾಬಿನ್ ನಡುವೆ ವಾಗ್ವಾದ ನಡೆದಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ರಾಹುಲ್ ಕೊಡಲಿಯಿಂದ ರಾಬಿನ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಕೊಲೆಯಾದ ರಾಬಿನ್ ಸಂಬಂಧಿ ಮುನೇಂದ್ರ ಹೇಳಿದ್ದಾರೆ.