ಅಕೋಲ (ಮಹಾರಾಷ್ಟ್ರ): ನಿಖರ ಮಾಹಿತಿಯ ಮೇರೆಗೆ ಮನೆಯಲ್ಲೇ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯನ್ನು ಮಹಾರಾಷ್ಟ್ರದ ಅಕೋಲ ಪೊಲೀಸರು ಬಂಧಿಸಿದ್ದಾರೆ.
ಅಕೋಲ ಪಟ್ಟಣದ ಗವಾಲಿಪುರದ ನಿವಾಸಿ ಅಬ್ದುಲ್ ಇಮ್ರಾನ್ ಅಲಿಯಾಸ್ ಅಬ್ದುಲ್ ಲತೀಫ್, ಬಂಧಿತ ಆರೋಪಿ. ಈತನ ಬಳಿಯಿಂದ 22 ಖಡ್ಗಗಳು, ಚಾಕುಗಳು ಹಾಗೂ ಇವನ್ನು ತಯಾರಿಸಲು ಬಳಸುತ್ತಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದರ ಹಿಂದೆ ದೊಡ್ಡಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಇದನ್ನು ಭೇದಿಸಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.